More

    ಸಾನಿಯಾ ನೀನಂದ್ರೆ ನನಗೆ ಇಷ್ಟವಿಲ್ಲ ಎಂದ ಮಲಿಕ್​! ಮೂಗುತಿ ಸುಂದ್ರಿ ಕೊಟ್ಟ ತಿರುಗೇಟು ಹೀಗಿತ್ತು…

    ದುಬೈ: ಭಾರತದ ಮಾಜಿ ಟೆನ್ನಿಸ್​ ತಾರೆ ಸಾನಿಯಾ ಮಿರ್ಜಾರ ಮತ್ತು ಪಾಕ್​ ಮಾಜಿ ಆಟಗಾರ ಶೋಯಿಬ್​ ಮಲಿಕ್​ ವೈವಾಹಿಕ ಸಂಬಂಧ ಮುರಿದುಬಿದ್ದಿರುವ ಸಂಗತಿ ಎಲ್ಲರಿಗೂ ತಿಳಿದಿದೆ. ಇಷ್ಟು ದಿನ ಸಾನಿಯಾ ಮತ್ತು ಶೋಯಿಬ್​ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಹರಿದಾಡಿದರೂ ಕೇವಲ ವದಂತಿ ಎಂದೇ ಹೇಳಲಾಗಿತ್ತು. ಆದರೆ, ಇತ್ತೀಚೆಗಷ್ಟೇ ಮಲಿಕ್​ ಅವರು ದಿಢೀರನೇ ಪಾಕ್​ ನಟಿ ಸನಾ ಜಾವೇದ್​ ಜತೆ ಮದುವೆ ಆಗಿರುವ ಫೋಟೋವನ್ನು ಶೇರ್​ ಮಾಡಿಕೊಂಡ ಬೆನ್ನಲ್ಲೇ ಡಿವೋರ್ಸ್​ ವದಂತಿ ಅಧಿಕೃತ ಸ್ವರೂಪ ಪಡೆದುಕೊಂಡಿತು.

    ಸನಾ ಜಾವೇದ್​ಗೆ ಇದು ಎರಡನೇ ಮದುವೆಯಾದರೆ, ಮಲಿಕ್​ಗೆ ಮೂರನೇ ಮದುವೆ. ಇಬ್ಬರ ಮದುವೆಗೆ ಬೆರಳಣಿಕೆಯಷ್ಟೇ ಮಂದಿ ಅಭಿನಂದನೆ ಸಲ್ಲಿಸಿದರು. ಆದರೆ, ಬಹುತೇಕ ಮಂದಿ ಇಬ್ಬರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಅದರಲ್ಲೂ ಪಾಕ್​ ಮೀಡಿಯಾಗಳು ಸಹ ಮಲಿಕ್​ ವಿರುದ್ಧವೇ ಆರೋಪಗಳ ಸುರಿಮಳೆಗೈದಿವೆ. ಗಮನಾರ್ಹ ಸಂಗತಿ ಏನೆಂದರೆ, ಮಲಿಕ್​ ಮದುವೆಗೆ ಅವರ ಕುಟುಂಬಸ್ಥರೇ ಹಾಜರಾಗಿರಲಿಲ್ಲ. ಡಿವೋರ್ಸ್​ ಖಚಿತವಾದಾಗಿನಿಂದ ಸಾನಿಯಾ ಮತ್ತು ಶೋಯಿಬ್ ಅವರ ಹಳೆಯ ವಿಡಿಯೋಗಳು ಮತ್ತು ಫೋಟೋಗಳು ಜಾಲತಾಣದಲ್ಲಿ ಹರಿದಾಡುತ್ತಿವೆ. ಅಭಿಮಾನಿಗಳು ಇಬ್ಬರ ಹೇಳಿಕೆಗಳು ಮತ್ತು ಪ್ರಸ್ತುತ ಪರಿಸ್ಥಿತಿಯನ್ನು ಹೋಲಿಕೆ ಮಾಡಿ ಗಮನ ಸೆಳೆಯುತ್ತಿದ್ದಾರೆ.

    ತಾಜಾ ಸಂಗತಿ ಏನೆಂದರೆ, ಸಾನಿಯಾ ಮಿರ್ಜಾ ಅವರು 2021, ಡಿಸೆಂಬರ್ ತಿಂಗಳಲ್ಲಿ ಹಂಚಿಕೊಂಡ ಇನ್​ಸ್ಟಾಗ್ರಾಂ ರೀಲ್ ಇದೀಗ ಮತ್ತೆ ವೈರಲ್​ ಆಗುತ್ತಿದೆ. ವಿಡಿಯೋದಲ್ಲಿ ಶೋಯಿಬ್​, ಮೇನ್​ ತುಮ್ಸೆ ಪ್ಯಾರ್​ ನಹಿ ಕರ್ತ (ನಾನು ನಿನ್ನನ್ನು ಪ್ರೀತಿಸುವುದಿಲ್ಲ) ಎಂದು ಹೇಳುತ್ತಾರೆ. ಇದಕ್ಕೆ ಗಜೇಂದ್ರ ವರ್ಮಾ ಅವರ ಹಿಟ್​ ಸಾಂಗ್​ ಇಸ್ಮೇನ್​ ತೇರಾ ಘತ ಮೇರಾ ಕುಚ್​ ನಹಿ ಜತ (ಪ್ರೀತಿಸದಿದ್ದರೆ ನಿನಗೆ ನಷ್ಟ ನನಗೇನು ಇಲ್ಲ) ಮೂಲಕ ಸಾನಿಯಾ ಉತ್ತರ ನೀಡುತ್ತಾರೆ.

    ಸದ್ಯ ಈ ವಿಡಿಯೋ ವೈರಲ್​ ಆಗುತ್ತಿದ್ದು, ಪ್ರಸ್ತುತ ಸನ್ನಿವೇಶಕ್ಕೆ ಸರಿಯಾಗಿ ಹೊಂದಾಣಿಕೆಯಾಗುತ್ತದೆ ಎಂದು ನೆಟ್ಟಿಗರು ಕಾಮೆಂಟ್​ ಮಾಡುತ್ತಿದ್ದಾರೆ. ಈ ರೀಲ್​ ಅನ್ನು ಸಾನಿಯಾ ತಮ್ಮ ಇನ್​ಸ್ಟಾಗ್ರಾಂನಿಂದ ಡಿಲೀಟ್​ ಮಾಡಿದ್ದಾರೆ. ಆದರೆ, ಇದೇ ವಿಡಿಯೋವನ್ನು ಪಾಕಿಸ್ತಾನ ಕ್ರಿಕೆಟ್​ ಸ್ಟಾರ್ಸ್​ ಹೆಸರಿನ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಜನವರಿ 27ರಂದು ಪೋಸ್ಟ್​ ಮಾಡಲಾಗಿದ್ದು, ಮತ್ತೆ ವೈರಲ್​ ಆಗುತ್ತಿದೆ. 1.8 ಲಕ್ಷಕ್ಕೂ ಅಧಿಕ ಮಂದಿ ವಿಡಿಯೋ ಲೈಕ್ಸ್​ ಮಾಡಿದ್ದಾರೆ.

    ಡಿವೋರ್ಸ್​ ವಿಚಾರ ಶುರುವಾಗಿದ್ದು ಯಾವಾಗ?
    2022ರ ನವೆಂಬರ್​ 11ರಂದು ಸಾನಿಯಾ ಮಿರ್ಜಾ ಇನ್​ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್​ ಹಾಕಿದ್ದರು. ಅದರಲ್ಲಿ “ಕಠಿಣ ದಿನಗಳು ಮತ್ತು ಒಡೆದ ಹೃದಯಗಳು” ಎಂದು ಬರೆದುಕೊಂಡಿದ್ದರು. ಅಲ್ಲಿಂದಾಚೆಗೆ ಇಬ್ಬರ ಬ್ರೇಕಪ್​ ವದಂತಿ ಹರಡಲು ಆರಂಭವಾಯಿತು. ಇದರ ನಡುವೆ ಒಮ್ಮೆ ಇಝಾನ್ ಜೊತೆಗಿನ ಮುದ್ದಾದ ಫೋಟೋವನ್ನು ಸಾನಿಯಾ ಹಂಚಿಕೊಂಡು, ಕಠಿಣ ದಿನಗಳಲ್ಲಿ ನನ್ನನ್ನು ಪಡೆಯುವ ಕ್ಷಣಗಳು ಎಂದು ಬರೆದಿದ್ದರು. ಇಷ್ಟೇ ಅಲ್ಲದೆ, ಶೋಯಿಬ್ ಮತ್ತು ಸಾನಿಯಾ ದುಬೈನಲ್ಲಿ ಇಜಾನ್‌ನ ನಾಲ್ಕನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿದರು. ಬರ್ತಡೇ ಪಾರ್ಟಿಯ ಅನೇಕ ಫೋಟೋಗಳನ್ನು ಶೋಯಿಬ್​​ ಹಂಚಿಕೊಂಡರೆ, ಸಾನಿಯಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಯಾವುದನ್ನೂ ಹಂಚಿಕೊಂಡಿಲ್ಲ ಇದು ಅನುಮಾನಗಳಿಗೆ ಕಾರಣವಾಗಿತ್ತು. ಅಲ್ಲಿಂದ ಶುರುವಾದ ಡಿವೋರ್ಸ್​ ವದಂತಿ ಕತೆ ಇಂದು ಶೋಯಿಬ್​, ಸನಾ ಜಾವೇದ್​ ಜತೆ ಮದುವೆ ಆಗುವವರೆಗೂ ಬಂದು ನಿಂತಿದೆ. ಅಲ್ಲದೆ, ಸಾನಿಯಾ-ಶೋಯಿಬ್​ ಬೇರೆಯಾಗಿರುವುದು ಖಚಿತವಾಗಿದೆ.

    ಅಂದಹಾಗೆ ಸಾನಿಯಾ ಮಿರ್ಜಾ (Sania Mirza) ಮತ್ತು ಶೋಯಿಬ್​​ ಮಲಿಕ್ (Shoib Malik) 2010ರ ಏಪ್ರಿಲ್ 12ರಂದು ಹೈದರಾಬಾದ್‌ನಲ್ಲಿರುವ ತಾಜ್ ಕೃಷ್ಣ ಹೋಟೆಲ್‌ನಲ್ಲಿ ಸಾಂಪ್ರದಾಯಿಕ ಹೈದರಾಬಾದಿ ಮುಸ್ಲಿಂ ಸಂಪ್ರದಾಯದಂತೆ ವಿವಾಹವಾದರು. ಇದಾದ ನಂತರ ಪಾಕಿಸ್ತಾನಿ ಪದ್ಧತಿಯಂತೆ ಪಾಕಿಸ್ತಾನದ ಸಿಯಾಲ್‌ಕೋಟ್‌ನಲ್ಲಿ ಮದುವೆ ನಡೆಯಿತು. (ಏಜೆನ್ಸೀಸ್​)

    ಮನಸ್ಸಿಗೆ ಅನಿಸಿದ್ದನ್ನು ಮಾಡಿ ಎಂದ ಮಲಿಕ್​ಗೆ ಖಡಕ್​ ತಿರುಗೇಟು ನೀಡಿದ ಸಾನಿಯಾ ಮಿರ್ಜಾ!

    ಹೊಸದಾಗಿ ಮದುವೆಯಾಗುವ ಜೋಡಿಗಳಿಗೆ ಸಾನಿಯಾ ಮಿರ್ಜಾ ಕೊಟ್ಟ ಟಿಪ್ಸ್​ ಏನು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts