More

    ಮನಸ್ಸಿಗೆ ಅನಿಸಿದ್ದನ್ನು ಮಾಡಿ ಎಂದ ಮಲಿಕ್​ಗೆ ಖಡಕ್​ ತಿರುಗೇಟು ನೀಡಿದ ಸಾನಿಯಾ ಮಿರ್ಜಾ!

    ದುಬೈ: ಭಾರತದ ಮಾಜಿ ಟೆನ್ನಿಸ್​ ತಾರೆ ಸಾನಿಯಾ ಮಿರ್ಜಾರ ಮತ್ತು ಪಾಕ್​ ಮಾಜಿ ಆಟಗಾರ ಶೋಯಿಬ್​ ಮಲಿಕ್​ ವೈವಾಹಿಕ ಸಂಬಂಧ ಮುರಿದುಬಿದ್ದಿರುವ ಸಂಗತಿ ಎಲ್ಲರಿಗೂ ತಿಳಿದಿದೆ. ಇಷ್ಟು ದಿನ ಸಾನಿಯಾ ಮತ್ತು ಶೋಯಿಬ್​ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಹರಿದಾಡಿದರೂ ಕೇವಲ ವದಂತಿ ಎಂದೇ ಹೇಳಲಾಗಿತ್ತು. ಆದರೆ, ಇತ್ತೀಚೆಗಷ್ಟೇ ಮಲಿಕ್​ ಅವರು ದಿಢೀರನೇ ಪಾಕ್​ ನಟಿ ಸನಾ ಜಾವೇದ್​ ಜತೆ ಮದುವೆ ಆಗಿರುವ ಫೋಟೋವನ್ನು ಶೇರ್​ ಮಾಡಿಕೊಂಡ ಬೆನ್ನಲ್ಲೇ ಡಿವೋರ್ಸ್​ ವದಂತಿ ಅಧಿಕೃತ ಸ್ವರೂಪ ಪಡೆದುಕೊಂಡಿತು.

    ಸನಾ ಜಾವೇದ್​ಗೆ ಇದು ಎರಡನೇ ಮದುವೆಯಾದರೆ, ಮಲಿಕ್​ಗೆ ಮೂರನೇ ಮದುವೆ. ಇಬ್ಬರ ಮದುವೆಗೆ ಬೆರಳಣಿಕೆಯಷ್ಟೇ ಮಂದಿ ಅಭಿನಂದನೆ ಸಲ್ಲಿಸಿದರು. ಆದರೆ, ಬಹುತೇಕ ಮಂದಿ ಇಬ್ಬರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಅದರಲ್ಲೂ ಪಾಕ್​ ಮೀಡಿಯಾಗಳು ಸಹ ಮಲಿಕ್​ ವಿರುದ್ಧವೇ ಆರೋಪಗಳ ಸುರಿಮಳೆಗೈದಿವೆ. ಗಮನಾರ್ಹ ಸಂಗತಿ ಏನೆಂದರೆ, ಮಲಿಕ್​ ಮದುವೆಗೆ ಅವರ ಕುಟುಂಬಸ್ಥರೇ ಹಾಜರಾಗಿರಲಿಲ್ಲ.

    ಇನ್ನು ಶೋಯಿಬ್​ ನಡೆ ಸಾನಿಯಾ ಮೇಲೆ ತೀವ್ರ ಪರಿಣಾಮ ಬೀರಿದೆ. ಸಾನಿಯಾ ತುಂಬಾ ನೋವು ಅನುಭವಿಸುತ್ತಿದ್ದಾರೆ. ಆದರೆ, ಅದಕ್ಕಿಂತ ಹೆಚ್ಚಿನ ನೋವನ್ನು ಸಾನಿಯಾ-ಶೋಯಿಬ್ ಅವರ 6 ವರ್ಷದ​ ಪುತ್ರ ಇಝಾನ್ ಸಹ​ ಅನುಭವಿಸುತ್ತಿದ್ದಾನೆ. ಶಾಲೆಗಳಲ್ಲಿ ಸಹಪಾಠಿಗಳ ಮಾತಿನಿಂದ ಅಕ್ಷರಶಃ ಕುಗ್ಗಿರುವ ಇಝಾನ್​, ತಾಯಿಯ ಮುಂದೆ ಕಣ್ಣೀರಿಟ್ಟಿದ್ದಾನೆ. ಮಗನ ಪರಿಸ್ಥಿತಿಯ ಬಗ್ಗೆ ಸಾನಿಯಾ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಮಗನಿಗಾಗಿ ದುಬೈ ಬಿಟ್ಟು ಭಾರತಕ್ಕೆ ವಾಪಾಸ್​ ಆಗಲು ಸಾನಿಯಾ ನಿರ್ಧಾರ ಮಾಡಿದ್ದಾರೆ.

    ಟೀಕೆಗಳಿಗೆ ಶೋಯಿಬ್​ ಉತ್ತರ
    ಶಾಡೋ ಪ್ರೊಡಕ್ಷನ್ಸ್‌ ಮಾಧ್ಯಮದೊಂದಿಗೆ ಇತ್ತೀಚಿಗೆ ನಡೆದ ಪಾಡ್‌ಕಾಸ್ಟ್ ಸಂಚಿಕೆಯಲ್ಲಿ ತಮ್ಮ ವಿರುದ್ಧದ ಟೀಕೆಗಳಿಗೆ ಶೋಯಿಬ್​ ತಿರುಗೇಟು ನೀಡಿದರು. ನಿಮ್ಮ ಹೃದಯ ಹೇಳುವುದನ್ನು ನೀವು ಮಾಡಬೇಕು. ಅದನ್ನು ಬಿಟ್ಟು ಜನ ಏನಂದುಕೊಳ್ಳುತ್ತಾರೋ ಅಂತ ಯಾವುದೇ ಕಾರಣಕ್ಕೂ ಯೋಚನೆ ಮಾಡಬಾರದು. ಜನರು ಏನು ಯೋಚಿಸುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಿಮಗೆ 10 ರಿಂದ 20 ವರ್ಷಗಳೇ ಬೇಕಾಗಬಹುದು ಆದರೆ, ನಿಮ್ಮ ಕೆಲಸಗಳನ್ನು ನೀವು ಮಾಡಿ, 20 ವರ್ಷಗಳ ನಂತರ ನಿಮಗೆ ಅರ್ಥವಾದರೂ ಕೂಡ ನಿಮ್ಮ ಹೃದಯ ಹೇಳಿದ ಕೆಲಸದ ಕಡೆ ಗಮನಹರಿಸಿ ಎನ್ನುವ ಮೂಲಕ ಟ್ರೋಲಿಗರಿಗೆ ಶೋಯಿಬ್​ ತಿರುಗೇಟು ನೀಡಿದ್ದಾರೆ.

    ಸಾನಿಯಾ ಟಾಂಗ್​
    ತುಂಬಾ ಪ್ರೀತಿಸುವ ಕುಟುಂಬವನ್ನೂ ಬಿಟ್ಟು ಮತ್ತೊಬ್ಬಳ ಹಿಂದೆ ಹೋದ ಮಾಜಿ ಪತಿ ಮಲಿಕ್​ಗೆ ಸಾನಿಯಾ ಸರಿಯಾಗಿ ತಿರುಗೇಟು ನೀಡಿದ್ದಾರೆ. ಮಗ ಮತ್ತು ಸೋದರ ಸೊಸೆಯನ್ನು ತಬ್ಬಿಕೊಂಡಿರುವ ಫೋಟೋವನ್ನು ಶೇರ್​ ಮಾಡಿಕೊಂಡು ನನ್ನ ಜೀವ ರಕ್ಷಕರು ಎಂದು ಬರೆದುಕೊಂಡಿದ್ದಾರೆ. ಅಲ್ಲದೆ, ನಿಮ್ಮ ಜೀವನದಲ್ಲಿ ಜನರು ಸಹ ತಿಳಿದಿಲ್ಲದ ಸಾವಿರ ಸಂಗತಿಗಳನ್ನು ನೀವು ಅನುಭವಿಸಿದ್ದೀರಿ. ನಿಮ್ಮನ್ನು ಬೆಚ್ಚಿಬೀಳಿಸಿದ, ನಿಮ್ಮನ್ನು ಬದಲಾಯಿಸಿದ, ನಿಮ್ಮನ್ನು ಮುರಿದ, ನಿಮ್ಮನ್ನು ನಿರ್ಮಿಸಿದ ಮತ್ತು ನಿಮಗೆ ಕಲಿಸಿದ ವಿಷಯಗಳನ್ನು ಅರಿತುಕೊಂಡಿದ್ದೀರಿ. ಈ ಮೂಲಕ ನೀವು ಯೋಚಿಸಿದ್ದಕ್ಕಿಂತ ಹೆಚ್ಚು ಬಲಶಾಲಿಯಾಗಿದ್ದೀರಿ ಎಂದು ಹೇಳುವ ಮೂಲಕ ಮಲಿಕ್​ಗೆ ಟಾಂಗ್​ ನೀಡಿದ್ದಾರೆ.

    View this post on Instagram

    A post shared by Sania Mirza (@mirzasaniar)

    ಡಿವೋರ್ಸ್​ ವಿಚಾರ ಶುರುವಾಗಿದ್ದು ಯಾವಾಗ?
    2022ರ ನವೆಂಬರ್​ 11ರಂದು ಸಾನಿಯಾ ಮಿರ್ಜಾ ಇನ್​ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್​ ಹಾಕಿದ್ದರು. ಅದರಲ್ಲಿ “ಕಠಿಣ ದಿನಗಳು ಮತ್ತು ಒಡೆದ ಹೃದಯಗಳು” ಎಂದು ಬರೆದುಕೊಂಡಿದ್ದರು. ಅಲ್ಲಿಂದಾಚೆಗೆ ಇಬ್ಬರ ಬ್ರೇಕಪ್​ ವದಂತಿ ಹರಡಲು ಆರಂಭವಾಯಿತು. ಇದರ ನಡುವೆ ಒಮ್ಮೆ ಇಝಾನ್ ಜೊತೆಗಿನ ಮುದ್ದಾದ ಫೋಟೋವನ್ನು ಸಾನಿಯಾ ಹಂಚಿಕೊಂಡು, ಕಠಿಣ ದಿನಗಳಲ್ಲಿ ನನ್ನನ್ನು ಪಡೆಯುವ ಕ್ಷಣಗಳು ಎಂದು ಬರೆದಿದ್ದರು. ಇಷ್ಟೇ ಅಲ್ಲದೆ, ಶೋಯಿಬ್ ಮತ್ತು ಸಾನಿಯಾ ದುಬೈನಲ್ಲಿ ಇಜಾನ್‌ನ ನಾಲ್ಕನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿದರು. ಬರ್ತಡೇ ಪಾರ್ಟಿಯ ಅನೇಕ ಫೋಟೋಗಳನ್ನು ಶೋಯಿಬ್​​ ಹಂಚಿಕೊಂಡರೆ, ಸಾನಿಯಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಯಾವುದನ್ನೂ ಹಂಚಿಕೊಂಡಿಲ್ಲ ಇದು ಅನುಮಾನಗಳಿಗೆ ಕಾರಣವಾಗಿತ್ತು. ಅಲ್ಲಿಂದ ಶುರುವಾದ ಡಿವೋರ್ಸ್​ ವದಂತಿ ಕತೆ ಇಂದು ಶೋಯಿಬ್​, ಸನಾ ಜಾವೇದ್​ ಜತೆ ಮದುವೆ ಆಗುವವರೆಗೂ ಬಂದು ನಿಂತಿದೆ. ಅಲ್ಲದೆ, ಸಾನಿಯಾ-ಶೋಯಿಬ್​ ಬೇರೆಯಾಗಿರುವುದು ಖಚಿತವಾಗಿದೆ.

    ಅಂದಹಾಗೆ ಸಾನಿಯಾ ಮಿರ್ಜಾ (Sania Mirza) ಮತ್ತು ಶೋಯಿಬ್​​ ಮಲಿಕ್ (Shoib Malik) 2010ರ ಏಪ್ರಿಲ್ 12ರಂದು ಹೈದರಾಬಾದ್‌ನಲ್ಲಿರುವ ತಾಜ್ ಕೃಷ್ಣ ಹೋಟೆಲ್‌ನಲ್ಲಿ ಸಾಂಪ್ರದಾಯಿಕ ಹೈದರಾಬಾದಿ ಮುಸ್ಲಿಂ ಸಂಪ್ರದಾಯದಂತೆ ವಿವಾಹವಾದರು. ಇದಾದ ನಂತರ ಪಾಕಿಸ್ತಾನಿ ಪದ್ಧತಿಯಂತೆ ಪಾಕಿಸ್ತಾನದ ಸಿಯಾಲ್‌ಕೋಟ್‌ನಲ್ಲಿ ಮದುವೆ ನಡೆಯಿತು. (ಏಜೆನ್ಸೀಸ್​)

    ಸಾನಿಯಾ ಮಿರ್ಜಾಗೆ ಮೋಸ! ಕಟು ಟೀಕೆಗಳಿಗೆ ಕೊನೆಗೂ ಉತ್ತರ ನೀಡಿದ ಶೋಯಿಬ್​ ಮಲಿಕ್​

    ದೂರಾದ ತಂದೆಯಿಂದಾಗಿ ಶಾಲೆಯಲ್ಲಿ ನಿಂದನೆ: ಪುತ್ರನಿಗಾಗಿ ದಿಟ್ಟ ನಿರ್ಧಾರ ತೆಗೆದುಕೊಂಡ ಸಾನಿಯಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts