ಹೊಸದಾಗಿ ಮದುವೆಯಾಗುವ ಜೋಡಿಗಳಿಗೆ ಸಾನಿಯಾ ಮಿರ್ಜಾ ಕೊಟ್ಟ ಟಿಪ್ಸ್​ ಏನು ಗೊತ್ತಾ?

blank

ನವದೆಹಲಿ:  ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್, ಮೂಗುತಿ ಸುಂದರಿ ಸಾನಿಯಾ ಮಿರ್ಜಾ ಅವರಿಂದ ದೂರವಾಗಿ ಜನವರಿ 20 ರಂದು ಮೂರನೇ ಮದುವೆಯ ಫೋಟೋಗಳನ್ನು ಪೋಸ್ಟ್ ಮಾಡಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದು ಗೊತ್ತೇ ಇದೆ. ಅವರು ಪ್ರಸಿದ್ಧ ಪಾಕಿಸ್ತಾನಿ ನಟಿ ಸನಾ ಜಾವೇದ್ ಅವರನ್ನು ವಿವಾಹವಾದರು. ಶೋಯೆಬ್ ಮಲಿಕ್ ತನ್ನ ಮದುವೆಯ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಾಗಿನಿಂದ, ಭಾರತದ ಮಾಜಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಬಗ್ಗೆ ಸುದ್ದಿ  ಹರಿದಾಡುತ್ತಿದೆ.

2023 ರಲ್ಲಿ ಪ್ರಮುಖ ತಂತ್ರಜ್ಞಾನ ಕಂಪನಿ ‘ಮೆಟಾ’ ಆಯೋಜಿಸಿದ್ದ ಸಮ್ಮೇಳನದಲ್ಲಿ ಭಾಗವಹಿಸಿದ ಸಾನಿಯಾ ಮಿರ್ಜಾ ಅವರನ್ನು ಪ್ರಮುಖ ಸಾಮಾಜಿಕ ಮಾಧ್ಯಮ ಕಂಟೆಂಟ್ ಕ್ರಿಯೇಟರ್ ‘ಅಂಕಿತಾ ಸಾಹಿಗಲ್’ ಅವರು ಹೊಸದಾಗಿ ಮದುವೆಯಾದ ಹುಡುಗಿಯರಿಗೆ ನೀವು ಏನು ಸಲಹೆ ನೀಡುತ್ತೀರಿ ಎಂದು ಕೇಳಿದರು  ಈ ಪ್ರಶ್ನೆಗೆ ಸಾನಿಯಾ ಮಿರ್ಜಾ ಅವರು ಉತ್ತರಿಸಿದರು. ಈ ವಿಡಿಯೋ ಇದೀಗ ವೈರಲ್​ ಆಗುತ್ತಿದೆ.

ಕಂಟೆಂಟ್ ಕ್ರಿಯೇಟರ್ ‘ಅಂಕಿತಾ ಸಾಹಿಗಲ್ ಸಾನಿಯಾ ಹೊಸದಾಗಿ ಮದುವೆ ಆಗಿರುವ ಜೋಡಿಗಳಿಗೆ ಏನು ಹೇಳಲು ಬಯುತ್ತೀರಾ? ಎಂದು ಪ್ರಶ್ನೆ ಮಾಡಿದ್ದಾರು. ಇದಕ್ಕೆ ಉತ್ತರಿಸಿದ ಸಾನಿಯಾ, ‘ನೀನಾಗಿರು, ಯಾರಿಗಾಗಿಯೂ ಬದಲಾಗಲು ಪ್ರಯತ್ನಿಸಬೇಡಿ. ಏಕೆಂದರೆ ನೀವು ಹೇಗೆ ಪ್ರೀತಿಸುತ್ತೀರೋ.. ನೀವು ಪ್ರೀತಿಸಲು ಅರ್ಹರಾಗಿರುವಿರಿ’ ಎಂದು ಸಾನಿಯಾ ಮಿರ್ಜಾ ಹೇಳಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಸಾನಿಯಾ ಮಿರ್ಜಾ ಟೆನಿಸ್ ನಲ್ಲಿ ಅಸಾಧಾರಣ ಪ್ರತಿಭೆಯಿಂದ ಹಂತ ಹಂತವಾಗಿ ಮೇಲೆದ್ದು ತನಗೊಂದು ವಿಶೇಷ ಸ್ಥಾನ ಗಳಿಸಿದ್ದಾರೆ. ಆಸ್ಟ್ರೇಲಿಯನ್ ಓಪನ್ 2016 ರಲ್ಲಿ ಮಾರ್ಟಿನಾ ಹಿಂಗಿಸ್ ಅವರೊಂದಿಗೆ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರು ತಮ್ಮ ವೃತ್ತಿಜೀವನದಲ್ಲಿ ಆರು ಗ್ರ್ಯಾಂಡ್ ಸ್ಲ್ಯಾಮ್ ಡಬಲ್ಸ್ ಪ್ರಶಸ್ತಿಗಳನ್ನು ಮತ್ತು ಒಲಿಂಪಿಕ್ ಪದಕವನ್ನು ಗೆದ್ದರು.

ಡಿವೋರ್ಸ್​ ವಿಚಾರ ಶುರುವಾಗಿದ್ದು ಯಾವಾಗ?
2022ರ ನವೆಂಬರ್​ 11ರಂದು ಸಾನಿಯಾ ಮಿರ್ಜಾ ಇನ್​ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್​ ಹಾಕಿದ್ದರು. ಅದರಲ್ಲಿ “ಕಠಿಣ ದಿನಗಳು ಮತ್ತು ಒಡೆದ ಹೃದಯಗಳು” ಎಂದು ಬರೆದುಕೊಂಡಿದ್ದರು. ಅಲ್ಲಿಂದಾಚೆಗೆ ಇಬ್ಬರ ಬ್ರೇಕಪ್​ ವದಂತಿ ಹರಡಲು ಆರಂಭವಾಯಿತು. ಇದರ ನಡುವೆ ಒಮ್ಮೆ ಇಝಾನ್ ಜೊತೆಗಿನ ಮುದ್ದಾದ ಫೋಟೋವನ್ನು ಸಾನಿಯಾ ಹಂಚಿಕೊಂಡು, ಕಠಿಣ ದಿನಗಳಲ್ಲಿ ನನ್ನನ್ನು ಪಡೆಯುವ ಕ್ಷಣಗಳು ಎಂದು ಬರೆದಿದ್ದರು. ಇಷ್ಟೇ ಅಲ್ಲದೆ, ಶೋಯಿಬ್ ಮತ್ತು ಸಾನಿಯಾ ದುಬೈನಲ್ಲಿ ಇಜಾನ್‌ನ ನಾಲ್ಕನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿದರು. ಬರ್ತಡೇ ಪಾರ್ಟಿಯ ಅನೇಕ ಫೋಟೋಗಳನ್ನು ಶೋಯಿಬ್​​ ಹಂಚಿಕೊಂಡರೆ, ಸಾನಿಯಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಯಾವುದನ್ನೂ ಹಂಚಿಕೊಂಡಿಲ್ಲ ಇದು ಅನುಮಾನಗಳಿಗೆ ಕಾರಣವಾಗಿತ್ತು. ಅಲ್ಲಿಂದ ಶುರುವಾದ ಡಿವೋರ್ಸ್​ ವದಂತಿ ಕತೆ ಇಂದು ಶೋಯಿಬ್​, ಸನಾ ಜಾವೇದ್​ ಜತೆ ಮದುವೆ ಆಗುವವರೆಗೂ ಬಂದು ನಿಂತಿದೆ. ಅಲ್ಲದೆ, ಸಾನಿಯಾ-ಶೋಯಿಬ್​ ಬೇರೆಯಾಗಿರುವುದು ಖಚಿತವಾಗಿದೆ.

ಅಂದಹಾಗೆ ಸಾನಿಯಾ ಮಿರ್ಜಾ (Sania Mirza) ಮತ್ತು ಶೋಯಿಬ್​​ ಮಲಿಕ್ (Shoib Malik) 2010ರ ಏಪ್ರಿಲ್ 12ರಂದು ಹೈದರಾಬಾದ್‌ನಲ್ಲಿರುವ ತಾಜ್ ಕೃಷ್ಣ ಹೋಟೆಲ್‌ನಲ್ಲಿ ಸಾಂಪ್ರದಾಯಿಕ ಹೈದರಾಬಾದಿ ಮುಸ್ಲಿಂ ಸಂಪ್ರದಾಯದಂತೆ ವಿವಾಹವಾದರು. ಇದಾದ ನಂತರ ಪಾಕಿಸ್ತಾನಿ ಪದ್ಧತಿಯಂತೆ ಪಾಕಿಸ್ತಾನದ ಸಿಯಾಲ್‌ಕೋಟ್‌ನಲ್ಲಿ ಮದುವೆ ನಡೆಯಿತು.

ಈ ಊರಲ್ಲಿ ಹೆಂಗಸರು ಬಟ್ಟೆಯನ್ನೇ ಹಾಕುವುದಿಲ್ಲ!; ನೀವು ಈ ಊರಿಗೆ ಹೋದ್ರು ಬಟ್ಟೆ ಇಲ್ಲದೆನೆ ಬದುಕಬೇಕು..

ಗೋಬಿ ಮಂಚೂರಿಯನ್ ನಿಷೇಧ, ಇನ್ಮುಂದೆ ಮಾರಾಟ ಮಾಡಿದ್ರೆ ಲೈಸೆನ್ಸ್ ಕ್ಯಾನ್ಸಲ್​

ಸರ್ಕಾರಿ ಕೆಲಸಕ್ಕೆ ಗುಡ್‌ ಬೈ ಹೇಳಿ ಕಾಮಿಡಿ ಮಾಡಲು ‘ಗಿಚ್ಚಿ ಗಿಲಿಗಿಲಿ’ಗೆ ಬಂದ ರೀಲ್ಸ್‌ ಸ್ಟಾರ್

ಐಶ್ವರ್ಯಾ ರೈಗೆ ಟಕ್ಕರ್​​ ಕೊಟ್ಟಿದ್ದ ಖ್ಯಾತ ನಟಿ ಈಗ ಸನ್ಯಾಸಿ; ನಟನೆಗೆ ಗುಡ್ ಬೈ ಹೇಳಿ ಹೆಸರನ್ನು ಬದಲಾಯಿಸಿಕೊಂಡಳು

Share This Article

ಋತುಸ್ರಾವದ ಸಮಯದಲ್ಲಿ ಮೊಸರು ಸೇವಸಬಹುದೇ.. ಬೇಡವೇ; ಗೊಂದಲಕ್ಕೆ ಇಲ್ಲಿದೆ ಪರಿಹಾರ | Health Tips

ಮೊಸರು ಅಥವಾ ಉಪ್ಪಿನಕಾಯಿ ತಿನ್ನುವುದರಿಂದ ಋತುಸ್ರಾವದ ಸಮಯದಲ್ಲಿ ಸಮಸ್ಯೆಯಾಗುತ್ತದೆ ಎಂಬ ನಂಬಿಕೆಯಿದೆ. ಆದರೆ ಯಾವುದೇ ಆಹಾರವು…

ಉಸಿರಾಟದ ವ್ಯಾಯಾಮ ಗೊರಕೆ ಸಮಸ್ಯೆಗೆ ಪರಿಹಾರ; ಇದು ಸುಳ್ಳೋ-ಸತ್ಯವೋ.. ವೈದ್ಯರು ಹೇಳೋದೇನು? | Health Tips

ನಿದ್ರಿಸುವಾಗ ಗೊರಕೆ ಹೊಡೆಯುವ ವ್ಯಕ್ತಿಗೆ ಮಾತ್ರವಲ್ಲದೆ ಸುತ್ತಮುತ್ತಲಿನವರಿಗೂ ತೊಂದರೆಯ ಅನುಭವವಾಗುತ್ತದೆ. ಸಾಮಾನ್ಯವಾಗಿ ಇದನ್ನು ಲಘುವಾಗಿ ತೆಗೆದುಕೊಳ್ಳಲಾಗುತ್ತದೆ.…

Vastu Tips : ರಾತ್ರಿ ಮಲಗುವ ಮುನ್ನ ಈ ತಪ್ಪುಗಳನ್ನು ಮಾಡಬೇಡಿ!ಸಾಲದ ಸುಳಿಗೆ ಸಿಲುಕುತ್ತೀರಿ..!

Vastu Tips: ದೃಷ್ಟ ಚೆನ್ನಾಗಿದ್ದರೆ ಕೆಲವರು ರಾತ್ರೋರಾತ್ರಿ ಲಕ್ಷಾಧಿಪತಿಗಳಾಗುತ್ತಾರೆ. ಕೆಲವರು  ಐಷಾರಾಮಿ ಜೀವನ ನಡೆಸಲು ಕಷ್ಟಪಡುತ್ತಾರೆ. ಅವರು…