ಅಲ್ಲು ಅರ್ಜುನ್‌-ಅಟ್ಲಿ ಕಾಂಬಿನೇಷನ್​ ಸಿನಿಮಾ ಸ್ಥಗಿತ! ಕಾರಣ ಕೇಳಿ ಶಾಕ್ ಆದ ಸ್ಟೈಲಿಶ್ ಸ್ಟಾರ್​ ಫ್ಯಾನ್ಸ್​

Untitled design - 2024-06-18T172347.368
Published on

ಆಂಧ್ರಪ್ರದೇಶ: 'ಜವಾನ್' ಚಿತ್ರದ ಮೂಲಕ ಬಾಲಿವುಡ್​ಗೆ ಮಾತ್ರ ಎಂಟ್ರಿ ಕೊಡದ ನಿರ್ದೇಶಕ ಅಟ್ಲಿ ಕುಮಾರ್​, ಹಿಂದಿ ಚಿತ್ರೋದ್ಯಮದ ಬಾಕ್ಸ್​ ಆಫೀಸ್​ನಲ್ಲಿ ಹೊಸ ದಾಖಲೆಯನ್ನೇ ನಿರ್ಮಿಸಿದರು. ಈ ಚಿತ್ರದ ಬಳಿಕ ಜನಪ್ರಿಯ ನಿರ್ದೇಶಕರ ಲಿಸ್ಟ್​ನಲ್ಲಿ ಸೇರಿಕೊಂಡ ಅಟ್ಲಿ, ಸಾಲು ಸಾಲು ಸ್ಟಾರ್​ ನಟರ ಸಿನಿಮಾಗಳನ್ನು ನಿರ್ದೇಶಿಸಲಿದ್ದಾರೆ ಎಂದೇ ಹೇಳಲಾಗಿತ್ತು. ಆದರೆ, ಈ ವದಂತಿಗಳನ್ನು ತಳ್ಳಿಹಾಕಿದ ನಿರ್ದೇಶಕರು, ಟಾಲಿವುಡ್​ ಐಕಾನ್ ಸ್ಟಾರ್​ ಜತೆಗೆ ಫಿಲಂ ಮಾಡುವ ಆಸಕ್ತಿಯನ್ನು ವ್ಯಕ್ತಪಡಿಸಿದ್ದರು.

ಇನ್ನು ಈ ಮಾತಿಗೆ ಫಿದಾ ಆಗಿದ್ದ ಸಿನಿಪ್ರೇಕ್ಷಕರು, ಮುಂದಿನ ದಿನಗಳಲ್ಲಿ ಇವರಿಬ್ಬರ ಕಾಂಬಿನೇಷನ್ ಸಿನಿಮಾ ಶೀಘ್ರವೇ ಸೆಟ್ಟೇರಲಿದೆ ಎಂದು ನಿರೀಕ್ಷಿಸಿದ್ದರು. ಅದರಂತೆಯೇ ಅಲ್ಲು ಅರ್ಜುನ್​ ನಿರ್ಮಾಣ ಸಂಸ್ಥೆಯವರು ಈ ಚಿತ್ರಕ್ಕೆ ಸಂಬಂಧಿಸಿದಂತೆ ಅಟ್ಲಿ ಜತೆಗೆ ಮಾತುಕತೆ ಕೂಡ ನಡೆಸಿದ್ದಾರೆ. ಆದರೆ, 'ಜವಾನ್' ನಿರ್ದೇಶಕರು ಇಟ್ಟ ಬೇಡಿಕೆ ಕೇಳಿ ಇದೀಗ ನಿರ್ಮಾಪಕರು ಸಿನಿಮಾ ಕೈಬಿಡಲು ಮುಂದಾಗಿದ್ದಾರೆ ಎಂದು ವದಂತಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ.

ಸಿನಿ ವರದಿಗಳ ಪ್ರಕಾರ, ಅಲ್ಲು ಅರ್ಜುನ್​ ನಟಿಸಲಿರುವ ಸಿನಿಮಾಗೆ ತಾನು ನಿರ್ದೇಶನ ಮಾಡುವುದಾದರೆ 80 ಕೋಟಿ ರೂ. ತೆಗೆದುಕೊಳ್ಳುತ್ತೀನಿ. ಇದು ನನ್ನ ಸಂಭಾವನೆ ಎಂದು ಬೇಡಿಕೆ ಇಟ್ಟಿದ್ದಾರೆ. ಇದಕ್ಕೆ ಒಪ್ಪದ ನಿರ್ಮಾಪಕ ಅಲ್ಲು ಅರವಿಂದ್, ಇಷ್ಟು ದೊಡ್ಡ ಮೊತ್ತವನ್ನು ಕೊಡುವುದು ಬೇಡ ಎಂದು ಪ್ರಾಜೆಕ್ಟ್​ ಮುಂದುವರಿಸದಿರಲು ನಿರ್ಧರಿಸಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net