ನವದೆಹಲಿ: ಪ್ರಸಕ್ತ ಅಮೆರಿಕಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ 2024ರ ಟೂರ್ನಿಯಲ್ಲಿ ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತ ಬಂದಿರುವ ಭಾರತ, ಇದೀಗ ಗ್ರೂಪ್ ‘ಎ’ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿ, ಸೂಪರ್ 8ನತ್ತ ಮುಖಮಾಡಿದೆ. ಮತ್ತೊಂದೆಡೆ, ಅತ್ಯಂತ ಕಳಪೆ ಪ್ರದರ್ಶನ ನೀಡಿದ ಪಾಕಿಸ್ತಾನ ತಂಡ ಸದ್ಯ ವಿಶ್ವಕಪ್ ರೇಸ್ನಿಂದ ಅಧಿಕೃತವಾಗಿ ಹೊರಬಿದ್ದಿದ್ದು, ಮಾಜಿ ಕ್ರಿಕೆಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಪಾಕ್ನ ಕಳಪೆ ಆಟಕ್ಕೆ ತಂಡದ ನಾಯಕ ಬಾಬರ್ ಆಜಂ ನೇರ ಹೊಣೆ ಎಂದು ಅನೇಕರು ಅಭಿಪ್ರಾಯಿಸಿದ್ದಾರೆ.
ಇದನ್ನೂ ಓದಿ: ತೈಲಾಕ್ರೋಶ ಕೈ ತಲೆಬಿಸಿ: ದರ ಏರಿಕೆಗೆ ಬಿಜೆಪಿ ಆಕ್ರೋಶ, ರಾಜ್ಯಾದ್ಯಂತ ಪ್ರತಿಭಟನೆ
ಪಾಕ್ನ ಮಾಜಿ ಕ್ರಿಕೆಟಿಗರು ಸಹ ನಾಯಕ ಬಾಬರ್ ಆಜಂ ಮತ್ತು ತಂಡವನ್ನು ಕಳಪೆ ಪ್ರದರ್ಶನಕ್ಕೆ ಹಿಯಾಳಿಸುತ್ತಿದ್ದು, ನಿನ್ನಂತಹ ನಾಲಾಯಕ್ ಕ್ಯಾಪ್ಟನ್ ಮತ್ತೊಬ್ಬ ಇಲ್ಲ ಎಂದು ಅಸಮಾಧಾನ ಹೊರಹಾಕುತ್ತಿದ್ದಾರೆ. ಇದೆಲ್ಲದರ ಮಧ್ಯೆ ಪಾಕಿಸ್ತಾನ ಕೋಚ್ ಆಗಿ ಅಧಿಕಾರ ಸ್ವೀಕರಿಸಿರುವ ಗ್ಯಾರಿ ಕರ್ಸ್ಟನ್ಗೆ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. ಸದ್ಯ ಈ ವಿಷಯ ಇದೀಗ ಕ್ರಿಕೆಟ್ ಅಭಿಮಾನಿಗಳ ಹುಬ್ಬೇರುವಂತೆ ಮಾಡಿದೆ.
“ಪಾಕಿಸ್ತಾನದ ಮುಖ್ಯ ಕೋಚ್ ಗ್ಯಾರಿ ಕರ್ಸ್ಟನ್ ಅವರೇ ನೀವು ಪಾಕ್ ತಂಡಕ್ಕೆ ಕೋಚ್ ಆಗಿ ಕೆಲಸ ಮಾಡುವುದು ವ್ಯರ್ಥ. ಅಲ್ಲಿ ನಿಮ್ಮ ಕೆಲಸಕ್ಕೆ ಬೆಲೆ ಇಲ್ಲ. ಈ ಕೂಡಲೇ ಪಾಕ್ ತಂಡವನ್ನು ತೊರೆದು ಮೆನ್ ಇನ್ ಬ್ಲೂ ಕೋಚ್ ಆಗಿ ಮರಳಬೇಕೆಂದು ಆಶಿಸುತ್ತೇನೆ. ಗ್ಯಾರಿ ವೈಟ್-ಬಾಲ್ ಫಾರ್ಮ್ಯಾಟ್‌ಗಳಲ್ಲಿ ಕೋಚಿಂಗ್ ಸ್ಟಾಫ್‌ನ ಮುಖ್ಯಸ್ಥರಾಗಿದ್ದಾರೆ. ಆದರೆ ಅವರ ಅಧಿಕಾರಾವಧಿಯು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ಮತ್ತು ಐಸಿಸಿ ವಿಶ್ವಕಪ್ 2024ರಲ್ಲಿಯೇ ಹಿನ್ನಡೆ ಅನುಭವಿಸುತ್ತಿದೆ” ಎಂದಿದ್ದಾರೆ.
ಇದನ್ನೂ ಓದಿ: ಟೀಮ್ ಇಂಡಿಯಾ ಮುಂದಿರುವ ಈ 3 ಸವಾಲುಗಳನ್ನು ಜಯಿಸಿದ್ರೆ ಟಿ20 ವಿಶ್ವಕಪ್ ನಮ್ಮದೇ!
“2011ರ ಏಕದಿನ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾಗೆ ಕೋಚ್ ಆಗಿ ಸೇವೆ ಸಲ್ಲಿಸಿದ್ದ ಗ್ಯಾರಿ, ಅಂದು ಭಾರತವನ್ನು ಯಶಸ್ಸಿನತ್ತ ಮುನ್ನಡೆಸಿದರು ಮತ್ತು ಅಂದಿನಿಂದ ದಕ್ಷಿಣ ಆಫ್ರಿಕಾ ತಂಡ ಹಾಗೂ ಜಗತ್ತಿನಾದ್ಯಂತ ಕೆಲವು ಟಿ20 ಫ್ರಾಂಚೈಸಿಗಳೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಅಲ್ಲಿದ್ದು ನಿಮ್ಮ ಸಮಯವನ್ನು ವ್ಯರ್ಥ ಮಾಡಬೇಡಿ ಗ್ಯಾರಿ. ಮತ್ತೆ ಟೀಮ್ ಇಂಡಿಯಾ ಕೋಚ್ ಆಗಿ ಹಿಂತಿರುಗಿ” ಎಂದು ತಮ್ಮ ಎಕ್ಸ್ನಲ್ಲಿ (ಈ ಹಿಂದಿನ ಟ್ವಿಟರ್) ಬರೆದು, ಹಂಚಿಕೊಂಡಿದ್ದಾರೆ,(ಏಜೆನ್ಸೀಸ್).
ನಾಯಕನಾಗಿ ನೀನು ಮಾಡಿದ್ದೇನೂ ಇಲ್ಲ! ಬಾಬರ್ ಆಜಂ ನಿವೃತ್ತಿಗೆ ಒತ್ತಾಯಿಸಿದ ಪಾಕ್ ಮಾಜಿ ಕ್ರಿಕೆಟಿಗ