More

  ಟೀಮ್​ ಇಂಡಿಯಾ ಮುಂದಿರುವ ಈ 3 ಸವಾಲುಗಳನ್ನು ಜಯಿಸಿದ್ರೆ ಟಿ20 ವಿಶ್ವಕಪ್ ನಮ್ಮದೇ!​

  ನವದೆಹಲಿ: ಟಿ20 ವಿಶ್ವಕಪ್​ನಲ್ಲಿ ಗ್ರೂಪ್ ಹಂತವನ್ನು ಯಶಸ್ವಿಯಾಗಿ ದಾಟಿರುವ ಟೀಮ್​ ಇಂಡಿಯಾ, ಸೂಪರ್-8 ಕದನಕ್ಕೆ ಸಜ್ಜಾಗಿದೆ. ಲೀಗ್ ಹಂತದಲ್ಲಿ ಐರ್ಲೆಂಡ್, ಪಾಕಿಸ್ತಾನ ಸೇರಿದಂತೆ ಆತಿಥೇಯ ಅಮೆರಿಕವನ್ನು ಮಣಿಸಿರುವ ರೋಹಿತ್ ಸೇನೆಗೆ ನಾಲ್ಕನೇ ಪಂದ್ಯವನ್ನು ಆಡಲಾಗಲಿಲ್ಲ. ಕೆನಡಾ ವಿರುದ್ಧದ ಪಂದ್ಯ ಮಳೆಯಿಂದಾಗಿ ರದ್ದಾಯಿತು. ಆದರೆ, ಗ್ರೂಪ್ ಟಾಪರ್ ಆಗಿರುವ ಭಾರತ ಸೂಪರ್ 8 ಬ್ಯಾಟಲ್​ಗೆ ಅರ್ಹತೆ ಪಡೆದಿದೆ.

  ಬ್ಯಾಟರ್‌ಗಳು ವಿಫಲವಾದರೂ, ಬೌಲರ್‌ಗಳ ಅದ್ಭುತ ಪ್ರದರ್ಶನದಿಂದ ಬ್ಯೂ ಬಾಯ್ಸ್​ ತಂಡ ಗ್ರೂಪ್​ ಹಂತವನ್ನು ದಾಟಿದೆ. ಆದರೆ ಇನ್ನು ಮುಂದಿನ ಪಯಣ ಅಷ್ಟು ಸುಲಭವಾಗಿರುವುದಿಲ್ಲ. ಸೂಪರ್-8ರಲ್ಲಿ ಅಫ್ಘಾನಿಸ್ತಾನ, ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶವನ್ನು ಸೋಲಿಸಬೇಕಾಗಿದೆ. ಈ ಎಲ್ಲ ತಂಡಗಳು ತಮ್ಮ ಲೀಗ್ ಪಂದ್ಯಗಳನ್ನು ಕೆರಿಬಿಯನ್ ಪಿಚ್‌ಗಳಲ್ಲಿ ಆಡಿದವು. ಎಲ್ಲರೂ ಪೂರ್ಣ ಫಾರ್ಮ್​ನಲ್ಲಿದ್ದಾರೆ. ಹೀಗಾಗಿ ಈ ತಂಡಗಳನ್ನು ಕಡಿಮೆ ಅಂದಾಜು ಮಾಡುವಂತಿಲ್ಲ.

  ಭಾರತ ವಿಶ್ವಕಪ್‌ನಲ್ಲಿ ಸತತ ಗೆಲುವಿನ ಖುಷಿಯಲ್ಲಿದೆ. ಆದರೆ ನಿಜವಾದ ಸವಾಲು ಇದೀಗ ಪ್ರಾರಂಭವಾಗಲಿದೆ. ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಆಸೀಸ್ ತಂಡಗಳನ್ನು ಸೋಲಿಸಲು, ಟೀಮ್​ ಇಂಡಿಯಾ ತಮ್ಮ ದೌರ್ಬಲ್ಯಗಳನ್ನು ನಿವಾರಿಸಿಕೊಳ್ಳಬೇಕಿದೆ. ಬ್ಯಾಟಿಂಗ್ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಬೇಕಿದೆ. ಅದರಲ್ಲೂ ರೋಹಿತ್ ಬಳಗ 3 ಸವಾಲುಗಳನ್ನು ಸದ್ಯ ಎದುರಿಸುತ್ತಿದೆ.

  ಮೊದಲನೆಯದು ಬ್ಯಾಟಿಂಗ್ ಬಗ್ಗೆ. ತಂಡದ ನಾಯಕ ರೋಹಿತ್ ಶರ್ಮ ಹಾಗೂ ಅಗ್ರ ಬ್ಯಾಟ್ಟ್​ಮನ್ ವಿರಾಟ್ ಕೊಹ್ಲಿ ಕಳಪೆ ಫಾರ್ಮ್​​​ನಲ್ಲಿದ್ದಾರೆ. ಅವರ ಬ್ಯಾಟ್​ಗಳು ಘರ್ಜಿಸುತ್ತಲೇ ಇಲ್ಲ. ಕಿಂಗ್ ಇದುವರೆಗೆ ಆಡಿರುವ ಮೂರು ಪಂದ್ಯಗಳಲ್ಲಿ ಕೇವಲ 5 ರನ್ ಗಳಿಸಿದ್ದಾರೆ. ಹಿಟ್‌ಮ್ಯಾನ್ 68 ರನ್ ಗಳಿಸಿ ಉತ್ತಮ ಪ್ರದರ್ಶನ ನೀಡಲಿಲ್ಲ. ರೋಹಿತ್​ ಗಳಿಸಿದ ರನ್‌ಗಳು ಅವರ ವ್ಯಾಪ್ತಿ ಮತ್ತು ನಿರೀಕ್ಷೆಗಳಿಗೆ ಸಾಕಾಗುವುದಿಲ್ಲ. ದೊಡ್ಡ ಪಂದ್ಯಗಳಲ್ಲಿ ಗೆಲ್ಲಬೇಕಾದರೆ ರೋಹಿತ್-ಕೊಹ್ಲಿ ಜೋಡಿ ಬಲಿಷ್ಠವಾಗಿರಬೇಕು. ನಾಕೌಟ್ ಪಂದ್ಯಗಳಲ್ಲಿ ಕೊಹ್ಲಿ ಮತ್ತು ರೋಹಿತ್ ತೀವ್ರ ಒತ್ತಡದಲ್ಲಿ ಆಡುತ್ತಾರೆ. ಈ ಹಿಂದೆಯು ಇಂತಹ ಹಲವು ಪಂದ್ಯಗಳಲ್ಲಿ ತಂಡವನ್ನು ಸೋಲಿಸಿದ್ದಾರೆ. ಹೀಗಾಗಿ ಸೂಪರ್-8ಕ್ಕೂ ಮುನ್ನ ಇಬ್ಬರೂ ಫಾರ್ಮ್‌ಗೆ ಬರುವುದು ಮುಖ್ಯ.

  See also  ಗೃಹಲಕ್ಷ್ಮಿ ಸಮಸ್ಯೆಗೆ ಶೀಘ್ರ ಪರಿಹಾರ

  ಭಾರತ ಜಯಿಸಬೇಕಾದ ಮತ್ತೊಂದು ಸವಾಲೆಂದರೆ ಓಪನಿಂಗ್. ವೃತ್ತಿಜೀವನದ ಆರಂಭದಿಂದಲೂ ಥರ್ಡ್ ಡೌನ್​ನಲ್ಲಿ ಆಡುತ್ತಿದ್ದ ಕೊಹ್ಲಿಯನ್ನು ಈ ಬಾರಿ ಆರಂಭಿಕರಾಗಿ ಕಣಕ್ಕಿಳಿಸಲಾಯಿತು. ಐಪಿಎಲ್‌ನಲ್ಲಿ ಯಶಸ್ವಿಯಾದ ಕಾರಣ, ಮೆಗಾ ಟೂರ್ನಿಯಲ್ಲೂ ಅದನ್ನೇ ಮುಂದುವರಿಸಲಾಯಿತು. ಆದರೆ, ಕಿಂಗ್ ಕೊಹ್ಲಿ ಆರಂಭಿಕರಾಗಿ ವಿಫಲರಾಗಿದ್ದಾರೆ. ಕೊಹ್ಲಿ ಬದಲು ಯಶಸ್ವಿ ಜೈಸ್ವಾಲ್ ಅವರನ್ನು ಓಪನರ್ ಆಗಿ ತೆಗೆದುಕೊಳ್ಳುತ್ತಾ? ಅಥವಾ ಇನ್ನಾವುದೇ ಯೋಜನೆಯನ್ನು ತಂಡದ ಮ್ಯಾನೇಜ್ಮೆಂಟ್ ಯೋಚಿಸಬೇಕು. ಆರಂಭಿಕರು ರನ್ ಮಾಡದಿದ್ದರೆ, ಒತ್ತಡವು ಉಳಿದ ಬ್ಯಾಟರ್‌ಗಳ ಮೇಲೆ ಬೀಳುತ್ತದೆ ಮತ್ತು ಕಡಿಮೆ ಸ್ಕೋರ್‌ಗಳು ದಾಖಲಾಗುತ್ತವೆ.

  ಟೀಮ್​ ಇಂಡಿಯಾ ಮುಂದಿರುವ ಮತ್ತೊಂದು ಸವಾಲು ತಂಡದ ಸಂಯೋಜನೆ. ಗ್ರೂಪ್ ಹಂತದಲ್ಲಿ ಅಮೆರಿಕದ ಟ್ರಿಕಿ ಪಿಚ್‌ಗಳಲ್ಲಿ ಆಡಿದ ಭಾರತ ಇದೀಗ ಕೆರಿಬಿಯನ್ ನೆಲದಲ್ಲಿ ಆಡಲಿದೆ. ಅಲ್ಲಿನ ನಿಧಾನಗತಿಯ ಪಿಚ್​ಗಳಿಗೆ ಅನುಗುಣವಾಗಿ ತಂಡದ ಸಂಯೋಜನೆಯನ್ನು ಹೊಂದಿಸಬೇಕು. ಹೆಚ್ಚು ಸ್ಪಿನ್ನರ್‌ಗಳು ತಂಡದಲ್ಲಿದ್ದರೆ ಉತ್ತಮ. ಮೆನ್ ಇನ್ ಬ್ಲೂ ಸೂಪರ್-8 ಕ್ಕೂ ಮುನ್ನ ಈ ಮೂರು ಸವಾಲುಗಳನ್ನು ಜಯಿಸಿದರೆ, ತಂಡಕ್ಕೆ ಯಾವುದೇ ಸವಾಲು ಎದುರಾಗುವುದಿಲ್ಲ. ಅದೇ ಸ್ವಿಂಗ್​ನಲ್ಲಿ ಕಪ್ ಸಹ ಗೆಲ್ಲಬಹುದು. (ಏಜೆನ್ಸೀಸ್​)

  ದರ್ಶನ್​ಗೆ ಹೀಗಾಯಿತಲ್ಲ ಎಂಬ ನೋವು ಸುದೀಪ್​ಗೆ ಕಾಡುತ್ತಿದೆಯಾ? ಕಿಚ್ಚನ ಈ ಮಾತಿನ ಮರ್ಮವೇನು?

  ಟೀಮ್​ ಇಂಡಿಯಾ ಕ್ಯಾಪ್ಟೆನ್ಸಿ ಮೇಲೆ ಕಣ್ಣಿಟ್ಟಿರೋ ಹಾರ್ದಿಕ್​ಗೆ ಶಾಕ್​! ಎಲ್ಲರ ಬಾಯಲ್ಲಿ ಕೇಳಿಬರ್ತಿರೋ ಹೆಸರು ಇದೊಂದೆ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts