

ನವದೆಹಲಿ: ಭಯೋತ್ಪಾದಕ ಸಂಘಟನೆ ಲಷ್ಕರ್ ಇ ತೈಬಾದ ಮಾಜಿ ಮುಖ್ಯಸ್ಥ ಅಕ್ರಂ ಖಾನ್ ಅಲಿಯಾಸ್ ಅಕ್ರಂ ಘಾಜಿ ಅಪರಿಚಿತರ ಗುಂಡಿಗೆ ಬಲಿಯಾಗಿದ್ದಾನೆ. ಈ ಮೂಲಕ ಮತ್ತೊಬ್ಬ ಉಗ್ರ ಅಪರಿಚಿತರ ಗುಂಡಿಗೆ ಬಲಿ ಆದಂತಾಗಿದೆ.
ಈತನನ್ನು ಪಾಕಿಸ್ತಾನದ ಬಜೌರ್ ಬಳಿ ಅಪರಿಚಿತರು ಗುಂಡು ಹಾರಿಸಿ ಕೊಂದು ಹಾಕಿದ್ದಾರೆ. ಅಕ್ರಂ ಘಾಜಿ 2018ರಿಂದ 2020ರ ವರೆಗೆ ಲಷ್ಕರ್-ಇ-ತೈಬಾ ಸಂಘಟನೆಯ ಮುಖ್ಯಸ್ಥ ಆಗಿದ್ದ. ಈತ ಪಾಕಿಸ್ತಾನದಲ್ಲಿ ಭಾರತ ವಿರೋಧಿ ಹೇಳಿಕೆಗಳಿಗೆ ಹೆಸರುವಾಸಿಯಾಗಿದ್ದ.
ಅಕ್ರಂ ಘಾಜಿ ಲಷ್ಕರ್-ಇ-ತೈಬಾದ ನೇಮಕಾತಿ ಘಟಕವನ್ನು ನಿಭಾಯಿಸುತ್ತಿದ್ದು, ಉಗ್ರ ಚಟುವಟಿಕೆಯಲ್ಲೂ ತೊಡಗಿಸಿಕೊಂಡಿದ್ದ. ಈತನ ಹತ್ಯೆ ಹಿಂದಿನ ಹೆಚ್ಚಿನ ವಿವರಗಳು ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.