ಏರ್ ಇಂಡಿಯಾದಿಂದ ಭಾರಿ ಕ್ರಿಸ್ಮಸ್ ಆಫರ್

air india
Published on

ನವದೆಹಲಿ: ಏರ್ ಇಂಡಿಯಾ ಎಕ್ಸ್‌ಪ್ರೆಸ್ 'ಕ್ರಿಸ್‌ಮಸ್' ಪ್ರಯುಕ್ತ ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನ ಟಿಕೆಟ್‌ ದರದಲ್ಲಿ ಶೇ.30ರವರೆಗೆ ರಿಯಾಯಿತಿ ಪ್ರಕಟಿಸಿದೆ.

ಈ ಕೊಡುಗೆಯು 2023ರ ಡಿ.2ರಿಂದ ರಿಂದ 2024ರ ಮೇ 30 ರವರೆಗಿನ ಪ್ರಯಾಣದ ಬುಕಿಂಗ್‌ಗಳಿಗೆ ಅನ್ವಯಿಸುತ್ತದೆ.

ಅಲ್ಲದೆ, ಏರ್‌ಲೈನ್‌ನ ಮೊಬೈಲ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಏರ್​ ಇಂಡಿಯಾ ಎಕ್ಸ್​ಪ್ರೆಸ್​ ಡಾಟ್​ ಕಾಂಗೆ ಲಾಗ್ ಇನ್ ಮಾಡುವ ಮೂಲಕ ಟಿಕೆಟ್‌ ಕಾಯ್ದಿರಿಸುವವರು ಹೆಚ್ಚುವರಿಯಾಗಿ ಉಚಿತ ಶುಲ್ಕ ಸೌಲಭ್ಯವನ್ನು ಪಡೆಯುತ್ತಾರೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಬೆಂಗಳೂರಿನಿಂದ ಕೊಚ್ಚಿ, ಕಣ್ಣೂರು, ತಿರುವನಂತಪುರಂ, ಮಂಗಳೂರು, ತಿರುಚಿರಾಪಳ್ಳಿ ಮತ್ತು ಚೆನ್ನೈ-ತಿರುವನಂತಪುರಂ ಮತ್ತು ಕಣ್ಣೂರು-ತಿರುವನಂತಪುರಂ ಮಾರ್ಗಗಳಲ್ಲಿ ಸಂಚರಿಸುತ್ತಿದ್ದು, ಇತ್ತೀಚೆಗೆ ಹೈದರಾಬಾದ್ - ಕೊಚ್ಚಿ, ಲಕ್ನೋ ಮತ್ತು ಅಮೃತಸರದೊಂದಿಗೆ ಸಂಪರ್ಕಿಸುವ ಹೊಸ ಮಾರ್ಗಗಳನ್ನು ಪ್ರಾರಂಭಿಸಿದೆ.

ಏರ್ ಇಂಡಿಯಾ ಎಕ್ಸ್‌ಪ್ರೆಸ್ 30 ದೇಶೀಯ ಮತ್ತು 14 ಅಂತರಾಷ್ಟ್ರೀಯ ಸ್ಥಳಗಳಿಗೆ 300 ಕ್ಕೂ ಹೆಚ್ಚು ದೈನಂದಿನ ವಿಮಾನಗಳನ್ನು ನಿರ್ವಹಿಸುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net