More

  ಉತ್ತರಕಾಶಿ ಸುರಂಗ ಕುಸಿತ: ಕಾರ್ಯಾಚರಣೆಗೆ ಬಂದಿದ್ದ ಅಮೆರಿಕಾದ ಆಗರ್ ಯಂತ್ರ ಛಿದ್ರ- ಹಾಗಾದರೆ 41 ಕಾರ್ಮಿಕರ ರಕ್ಷಣೆ ಹೇಗೆ?

  “No Further Auger Drilling,” Says Tunneling Expert
  ವಾರಣಾಸಿ: 41 ಕಾರ್ಮಿಕರು ಸಿಕ್ಕಿಬಿದ್ದಿರುವ ಉತ್ತರಾಖಂಡದ ಉತ್ತರಕಾಶಿ ಸುರಂಗದಲ್ಲಿ ಕೊರೆಯುವಿಕೆಯು ಸ್ಥಗಿತಗೊಂಡ 12 ಗಂಟೆಗಳ ನಂತರ ಅಮೆರಿಕನ್ ನಿರ್ಮಿತ ಆಗರ್ ಯಂತ್ರದ ಹಾನಿಗೊಳಗಾದ ಬ್ಲೇಡ್‌ಗಳನ್ನು ರಕ್ಷಣಾ ಸಿಬ್ಬಂದಿ ಕೈಯ್ಯಾರೆ ಹೊರತೆಗೆಯುತ್ತಿದ್ದಾರೆ. ಶುಕ್ರವಾರ ಸಂಜೆ ಮತ್ತೆ ಡ್ರಿಲ್ಲಿಂಗ್ ಆರಂಭವಾಗುತ್ತಿದ್ದಂತೆ ಮೆಟಲ್ ಗರ್ಡರ್ ಗೆ ಡಿಕ್ಕಿ ಹೊಡೆದು ಯಂತ್ರಕ್ಕೆ ಹಾನಿಯಾಗಿದೆ. ಯಂತ್ರವು ಸಂಪೂರ್ಣವಾಗಿ ಛಿದ್ರಗೊಂಡಿದ್ದು, ನಾಲ್ಕು ಬಾರಿ ಸರಿಪಡಿಸಿ ಕಾರ್ಯಾಚರಣೆಗೆ ಇಳಿಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಈಗ ಯಾವುದೇ ಕೊರೆಯುವ ಯಂತ್ರ ಬಳಸುವುದಿಲ್ಲ ಎಂದು ಸುರಂಗ ತಜ್ಞ ಅರ್ನಾಲ್ಡ್ ಡಿಕ್ಸ್ ತಿಳಿಸಿದ್ದಾರೆ.

  ಇದನ್ನೂ ಓದಿ: ಶಾಪಿಂಗ್ ಮಾಲ್​ನಲ್ಲಿ ಅಗ್ನಿ ಅವಘಡ; 11 ಮಂದಿ ಮೃತ್ಯು
  ಸಿಕ್ಕಿಬಿದ್ದ ಕಾರ್ಮಿಕರನ್ನು ತಲುಪಲು 60 ಮೀಟರ್​ ಉದ್ದದ ಸುರಂಗದ ಕೊರೆಯುವ ಕಾರ್ಯಾಚರಣೆಯಲ್ಲಿ 46.8 ಮೀಟರ್‌ ಪೂರ್ಣಗೊಳಿಸಿ ಕಾರ್ಮಿಕರನ್ನು ಹೊರತರಲು 800-ಮಿಲಿಮೀಟರ್ ಅಗಲದ ಉಕ್ಕಿನ ಪೈಪ್‌ ಹಾಕಲಾಗಿದೆ. ಆಹಾರ ಸಾಗಿಸಲು ಆರು ಇಂಚು ಅಗಲದ ಟ್ಯೂಬ್ 57 ಮೀಟರ್ ಹಾಕಲಾಗಿದೆ. ಆದರೆ 14 ಮೀಟರ್​ ಸುರಂಗ ಕೊರೆಯುವಾಗಿ 2 ಬಾರಿ ಲೋಹದಂತಹ ವಸ್ತುಗಳು ಸಿಕ್ಕಿ ಆಗರ್​ ಯಂತ್ರ ಸಂಪೂರ್ಣ ಹಾನಿಗೊಳಗಾಗಿವೆ. ಹೀಗಾಗಿ ನಾವು ಕಾರ್ಮಿಕರ ನೆರವಿನಿಂದ ಕಾಮಗಾರಿ ಪೂರ್ಣಗೊಳಿಸುತ್ತೇವೆ ಎಂದು ಅವರು ವಿವರಿಸಿದರು.

  “ಈಗ ನಾವು ಕಲ್ಲು, ಮಣ್ಣನ್ನು ಕಾರ್ಮಿಕರ ನೆರವಿನಿಂದ ತೆರವುಗೊಳಿಸಲು ಮುಂದಾಗಿದ್ದೇವೆ. ಏಕೆಂದರೆ ಇದು ಸುರಕ್ಷಿತ ಕೆಲಸವಾಗಿದೆ” ಎಂದು ಕಾರ್ಯಾಚರಣೆಯ ಉಸ್ತುವಾರಿ ವಹಿಸಿರುವ ಹಿರಿಯ ಅಧಿಕಾರಿ ಟಿ.
  ಪ್ಲೇಮ್ಯೂಟ್ ತಿಳಿಸಿದರು.
  ಲಂಬವಾಗಿ ಕೊರೆಯುವಿಕೆ ಪ್ರಾರಂಭಿಸಲು ಸುರಂಗದ ಮೇಲ್ಭಾಗಕ್ಕೆ ಯಂತ್ರಗಳನ್ನು ಕೊಂಡೊಯ್ಯಲಾಗಿದ್ದರೂ, ಅದು ಅಷ್ಟು ಸುಲಭವಲ್ಲ. ನಮ್ಮ ಆದ್ಯತೆ ಸುರಕ್ಷತೆಯಾಗಿದೆ. ಈಗಾಗಲ ಸುಮಾರು 90 ಪ್ರತಿಶತ ಕಾರ್ಯಾಚರಣೆ ಪೂರೈಸಿದ್ದೇವೆ. ಕಡೆಯ ಕೆಲಸವನ್ನು ಈಗ ಯಂತ್ರಗಳನ್ನು ಬಳಸದೆ ಕಾರ್ಮಿಕರ ನೆರವಿನಿಂದ ಮಾಡಲಾಗುತ್ತಿದೆ ಎಂದು ಅವರು ವಿವರಿಸಿದರು.

  ಸುರಂಗದಿಂದ ಆಗರ್(ಕೊರೆಯುವ) ಯಂತ್ರವನ್ನು ಕತ್ತರಿಸಿ ಹಿಂಪಡೆಯಲು ಹೈದರಾಬಾದ್‌ನಿಂದ ಪ್ಲಾಸ್ಮಾ ಕಟ್ಟರ್ ಯಂತ್ರಕ್ಕೆ ಆದೇಶಿಸಲಾಗಿದೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದರು. ಇಷ್ಟು ಹತ್ತಿರ ತಲುಪಿದ ನಂತರ ಯಂತ್ರವು ಸಿಲುಕಿಕೊಂಡಿದೆ. ಭಾನುವಾರ ಬೆಳಿಗ್ಗೆ ಈ ಯಂತ್ರವು ಹೊರಬರುತ್ತದೆ ಮತ್ತು ಅದರ ನಂತರ ಕಾರ್ಯಾಚರಣೆಯು ಹಸ್ತಚಾಲಿತವಾಗಿ ಮುಂದುವರಿಯುತ್ತದೆ ಎಂದು ನಾವು ನಿರೀಕ್ಷಿಸುತ್ತಿದ್ದೇವೆ. ನಾವು ಎಲ್ಲಾ ಆಯ್ಕೆಗಳಲ್ಲಿ ಕೆಲಸ ಮಾಡುತ್ತಿದ್ದೇವೆ” ಎಂದು ಮುಖ್ಯಮಂತ್ರಿ ಹೇಳಿದರು.

  ಮುಂದೆ ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್ (ಜಿಪಿಆರ್) ತಂತ್ರಜ್ಞಾನದ ಬಳಕೆ ಸಹ ಇರಬಹುದು. ಇದು ಕಬ್ಬಿಣ ಮತ್ತಿತರ ಲೋಹದ ವಸ್ತುಗಳನ್ನು ಪತ್ತೆಹಚ್ಚಲು ನಮಗೆ ಸಹಾಯ ಮಾಡುತ್ತದೆ ಎಂದು ಇನ್ನೊಬ್ಬ ಹಿರಿಯ ಅಧಿಕಾರಿ

  ಏತನ್ಮಧ್ಯೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಸಿದ್ಧಪಡಿಸುತ್ತಿರುವ ಎಸ್ಕೇಪ್ ಟನಲ್‌ನಲ್ಲಿನ ಮಾರ್ಗವನ್ನು ತೆರವುಗೊಳಿಸಲು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. “ನಾವು ಕಡೇಯ ಕಾರ್ಯಾಚರಣೆ ನಡೆಸಲು ಕಾಯುತ್ತಿದ್ದೇವೆ” ಎಂದು ಹಿರಿಯ ಎನ್‌ಡಿಆರ್‌ಎಫ್ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.

  ಇನ್ನೂ 2 ದಿನ ಮೈ ನಡುಗಿಸುವ ಚಳಿ…ಎಲ್ಲೆಲ್ಲಿ ಮಳೆಯಾಗಲಿದೆ?

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts