More

    ಇನ್ನೂ 2 ದಿನ ಮೈ ನಡುಗಿಸುವ ಚಳಿ…ಎಲ್ಲೆಲ್ಲಿ ಮಳೆಯಾಗಲಿದೆ?

    ನವದೆಹಲಿ: ದೇಶದ ಬಹುತೇಕ ರಾಜ್ಯಗಳಲ್ಲಿ ತಾಪಮಾನದಲ್ಲಿ ತೀವ್ರ ಕುಸಿತ ಕಂಡುಬಂದಿದೆ. ಶನಿವಾರ ಮೈನಡುಗಿಸುವ ಚಳಿಯ ಅನುಭವ ಎಲ್ಲೆಡೆ ಕಾಡಿದ್ದು, ಜನರು ಬೆಚ್ಚನೆಯ ಉಡುಪುಗಳ ಮೊರೆಹೋದರು.

    ಇದನ್ನೂ ಓದಿ: ಇಂದಿನಿಂದ 2 ದಿನ ಬೆಂಗ್ಳೂರಲ್ಲಿ ಕಂಬಳ ಕಲರವ: ಪ್ರವೇಶ ಉಚಿತ, ಇಲ್ಲಿದೆ ಕಾರ್ಯಕ್ರಮಗಳ ವಿವರ…

    ಬೆಳಗಿನ ಜಾವ ಮಂಜಿನ ಜತೆಗೆ ಮೋಡ ಮುಸುಕಿದ ವಾತಾವರಣವಿದ್ದು ಮೈ ಕೊರೆಯ ಚಳಿ ಎಲ್ಲೆಡೆ ಕಂಡು ಬಂದಿತು. ಇದಕ್ಕೆ ಉತ್ತರ ಹಾಗೂ ದಕ್ಷಿಣದ ರಾಜ್ಯಗಳೆಂಬ ಭೇದವಿರಲಿಲ್ಲ.

    ಈ ನಡುವೆ ಹವಾಮಾನ ಇಲಾಖೆ ಹಲವು ರಾಜ್ಯಗಳಿಗೆ ಎಚ್ಚರಿಕೆ ನೀಡಿದೆ. ಮಳೆ ನವೆಂಬರ್ 27 ರವರೆಗೆ ಮುಂದುವರಿಯುತ್ತದೆ. ತಮಿಳುನಾಡಿನ ಹಲವೆಡೆ ನ.25 ರಂದು ಬೆಳಗ್ಗೆಯಿಂದ ಮಳೆ ಮುಂದುವರಿದಿದೆ. ಮತ್ತೊಂದೆಡೆ ಭಾರೀ ಮಳೆಯ ಹಿನ್ನೆಲೆಯಲ್ಲಿ ಚೆನ್ನೈನ ಎಲ್ಲ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಇದರ ಪ್ರಭಾವ ರಾಜ್ಯದ ಮೇಲೂ ಬೀರಿದ್ದು, ಬೆಂಗಳೂರು ಸೇರಿದಂತೆ ಹಲವೆಡೆ ತುಂತುರು ಮಳೆಯಾಗಿದ್ದು, ಜನರನ್ನು ಮೈಕೊರೆವ ಚಳಿ ಕಾಡುತ್ತಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕನಿಷ್ಠ ತಾಪಮಾನ ಹತ್ತು ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಯಾಗಿದೆ.

    ದೇಶದ ನಾನಾ ಕಡೆ ಮುಂದಿನ 3 ದಿನಗಳವರೆಗೆ ಮೋಡ ಕವಿದಿರಬಹುದು. ಈ ವೇಳೆ ಬೆಳಗಿನ ಜಾವದಲ್ಲಿ ಲಘು ಮಂಜು ಕೂಡ ಕಾಣಿಸುತ್ತದೆ. ಶನಿವಾರದಂದು ಗರಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 9 ಡಿಗ್ರಿ ಸೆಲ್ಸಿಯಸ್ ದಾಖಲಾಗಬಹುದು. ಸೋಮವಾರವೂ ದೆಹಲಿಯಲ್ಲಿ ಲಘು ಮಳೆಯಾಗುವ ಸಾಧ್ಯತೆ ಇದೆ.

    ಈ ರಾಜ್ಯಗಳಲ್ಲಿ ಭಾರಿ ಮಳೆಯಾಗಲಿದೆ:
    ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, ನ.27 ರ ವರೆಗೆ ದಕ್ಷಿಣ ಅಂಡಮಾನ್ ಸಮುದ್ರ ಮತ್ತು ಪಕ್ಕದ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶವು ರೂಪುಗೊಳ್ಳುವ ಸಾಧ್ಯತೆಯಿರುವುದರಿಂದ ನ.25ರಂದು ಕರ್ನಾಟಕ, ತಮಿಳುನಾಡು, ಕೇರಳ, ಪುದುಚೇರಿ, ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್, ದಕ್ಷಿಣ ರಾಜಸ್ಥಾನ, ಗೋವಾ, ಸೇರಿ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದೆ.

    ನ.26 ರಂದು ರಾಜಸ್ಥಾನ, ಗುಜರಾತ್​ನಲ್ಲಿ ಭಾರೀ ಮಳೆಯಾಗಲಿದ್ದು, ನ.27 ರಂದು ಮಧ್ಯಪ್ರದೇಶ, ಮಹಾರಾಷ್ಟ್ರ, ಉತ್ತರಾಖಂಡದಲ್ಲಿ ಗುಡುಗು ಮತ್ತು ಮಿಂಚು, ಆಲಿಕಲ್ಲು ಸಹಿತ ಮಳೆ ನಿರೀಕ್ಷಿಸಲಾಗಿದೆ.

    ತೇಜಸ್​​ ಏರ್​ಕ್ರಾಫ್ಟ್​ನಲ್ಲಿ ಪ್ರಧಾನಿ ಹಾರಾಟ- ದೇಶೀಯ ಸಾಮರ್ಥ್ಯಕ್ಕೆ ಮೆಚ್ಚಿಗೆ ವ್ಯಕ್ತಪಡಿಸಿದ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts