More

    ತೇಜಸ್​​ ಏರ್​ಕ್ರಾಫ್ಟ್​ನಲ್ಲಿ ಪ್ರಧಾನಿ ಹಾರಾಟ- ದೇಶೀಯ ಸಾಮರ್ಥ್ಯಕ್ಕೆ ಮೆಚ್ಚಿಗೆ ವ್ಯಕ್ತಪಡಿಸಿದ ಮೋದಿ

    ಬೆಂಗಳೂರು: ಲಘು ಯುದ್ಧ ತೇಜಸ್ ಫೈಟರ್ ಜೆಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹಾರಾಟ ನಡೆಸಿದರು.
    ಬೆಂಗಳೂರಿನ ಎಚ್​​ಎಎಲ್​ನಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗಿಯಾಗಿ, ಯುದ್ಧ ವಿಮಾನ ತೇಜಸ್​​ನಲ್ಲಿ ಯಶಸ್ವಿಯಾಗಿ ಹಾರಾಟ ನಡೆಸಿದರು.

    ಇದನ್ನೂ ಓದಿ: ಭಾರತದ ವಿದೇಶಿ ವಿನಿಮಯ ಮೀಸಲು 595 ಬಿಲಿಯನ್‌ ಡಾಲರ್​ಗೆ ಏರಿಕೆ
    ಶನಿವಾರ ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌(ಎಚ್ಎಎಲ್​)ಗೆ ಭೇಟಿ ನೀಡಿದ ಅವರು ಉತ್ಪಾದನಾ ಘಟಕ ಪರಿಶೀಲಿಸಿದ ಬಳಿಕ ಯುದ್ಧ ವಿಮಾನ ತೇಜಸ್​​ನಲ್ಲಿ ಯಶಸ್ವಿಯಾಗಿ ಹಾರಾಟ ನಡೆಸಿ ಗಮನ ಸೆಳೆದರು.

    ಈ ಬಗ್ಗೆ X(ಎಕ್ಸ್​)ನಲ್ಲಿ ಸಂತಸ ಹಂಚಿಕೊಂಡಿರುವ ಪ್ರಧಾನಿ, ತೇಜಸ್​​ ಯುದ್ಧ ವಿಮಾನದಲ್ಲಿ ಯಶಸ್ವಿಯಾಗಿ ಹಾರಾಟ ನಡೆಸಿದ್ದು, ಈ ಅನುಭವ ನಿಜಕ್ಕೂ ವಿಸ್ಮಯಕಾರಿ ಎಂದು ತಮ್ಮ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

    ಈ ಅವಿಸ್ಮರಣೀಯ ಅನುಭವವು ನನಗೆ ನಮ್ಮ ದೇಶದ ಸ್ಥಳೀಯ ಸಾಮರ್ಥ್ಯದ ಬಗ್ಗೆ ಇನ್ನೂ ವಿಶ್ವಾಸ ಹೆಚ್ಚಾಗುವಂತೆ ಮಾಡಿದೆ. ಜೊತೆಗೆ ನಮ್ಮ ದೇಶೀಯ ಸಾಮರ್ಥ್ಯದ ಬಗ್ಗೆ ನನಗೆ ಹೆಮ್ಮೆಯೂ ಇದೆ ಎಂದು ಮೋದಿಯವರು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಅವರು ತೇಜಸ್​ನಲ್ಲಿ ಹಾರಾಟ ನಡೆಸಿದಫೋಟೋಗಳನ್ನು ಹಂಚಿಕೊಂಡಿದ್ದಾರೆ.

    ಪ್ರಧಾನಮಂತ್ರಿಗಳ ಎಚ್​​ಎಎಲ್​​ ಭೇಟಿಯ ಉದ್ದೇಶವೇನು?:
    ರಕ್ಷಣಾ ವಲಯದಲ್ಲಿ ಭಾರತ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಮೇಕ್​ ಇನ್​ ಇಂಡಿಯಾ ಭಾಗವಾಗಿ ಸಾಧನೆಯನ್ನ ಇಮ್ಮಡಿಗೊಳಿಸುವ ಸಲುವಾಗಿ ಪ್ರಧಾನಮಂತ್ರಿಗಳು ಎಚ್​​ಎಎಲ್​ಗೆ ಭೇಟಿ ನೀಡಿದ್ದರು. ಏಕೆಮದರೆ 2022-23 ಭಾರತದ ರಕ್ಷಣಾ ರಫ್ತು 15,920 ಕೋಟಿ ರೂಪಾಯಿ ಆಗಿದ್ದು, ಇದಕ್ಕೆ ಪ್ರಮುಖ ಕಾರಣ ತೇಜಸ್​​ ಲಘುಯುದ್ಧ ವಿಮಾನಗಳಿಗೆ ವಿದೇಶಗಳಲ್ಲೂ ಬೇಡಿಕೆ ಹೆಚ್ಚಾಗಿರುವುದು. ಈಗಾಗಲೇ ಅಮೆರಿಕದ ಜೆಇ ಏರೋಸ್ಪೇಸ್ ಹಾಗೂ ಎಚ್​​ಎಎಲ್​ ಜಂಟಿ ಉತ್ಪಾದನೆ ಒಪ್ಪಂದ ಮಾಡಿಕೊಂಡಿದ್ದು, ಉತ್ಪಾದನೆಯೂ ಆರಂಭವಾಗಿದೆ.

    ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕಾ ಪ್ರವಾಸದ ಪರಿಣಾಮವಾಗಿ ಭಾರತೀಯ ವಾಯುಪಡೆಗೆ ಫೈಟರ್ ಜೆಟ್ ಎಂಜಿನ್‌ಗಳನ್ನು ಉತ್ಪಾದಿಸಲು ಎಚ್‌ಎಎಲ್ ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದು, ಎರಡು ದೇಶಗಳ ನಡುವಿನ ರಕ್ಷಣಾ ಸಹಕಾರವನ್ನು ಬಲಪಡಿಸುವಲ್ಲಿ ಇದು ಪ್ರಮುಖ ಅಂಶವಾಗಿದೆ. ಒಪ್ಪಂದವು ಭಾರತದಲ್ಲಿ ಜಿ ಇ ಏರೋಸ್ಪೇಸ್‌ನ ಎಫ್ 414 ಎಂಜಿನ್‌ಗಳ ಜಂಟಿ ಉತ್ಪಾದನೆಯ ಯೋಜನೆಗೆ ಬುನಾದಿಯಾಗಿದೆ. ಜಿಇ ಏರೋಸ್ಪೇಸ್ ಇದಕ್ಕಾಗಿ ಅಗತ್ಯವಾದ ರಫ್ತು ಅನುಮತಿಗೆ ಅಮೆರಿಕಾ ಸರ್ಕಾರದ ಅನುಮತಿ ಪಡೆದಿದೆ. ಈ ಒಪ್ಪಂದವು ಭಾರತೀಯ ವಾಯುಪಡೆಯ ಲಘು ಯುದ್ಧ ವಿಮಾನ ಎಂ ಕೆ 2 ಕಾರ್ಯಕ್ರಮದ ಭಾಗವಾಗಿದೆ.

    ಭಾರತವಿಲ್ಲದೆ ಅಂತಾರಾಷ್ಟ್ರೀಯ ಸಮಸ್ಯೆಗಳಿಗೆ ಪರಿಹಾರ ಅಸಾಧ್ಯ: ನಾರ್ವೆ ಉಪ ವಿದೇಶಾಂಗ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts