More

    ಭಾರತದ ವಿದೇಶಿ ವಿನಿಮಯ ಮೀಸಲು 595 ಬಿಲಿಯನ್‌ ಡಾಲರ್​ಗೆ ಏರಿಕೆ

    ಮುಂಬೈ: ಅಂತರಾಷ್ಟ್ರೀಯ ಹಣಕಾಸು ನಿಧಿಯಲ್ಲಿ ಭಾರತದ ವಿದೇಶಿ ವಿನಿಮಯ ಮೀಸಲು 11 ವಾರಗಳ ಗರಿಷ್ಠ 595 ಬಿಲಿಯನ್‌ ಯುಎಸ್​ ಡಾಲರ್​ಗೆ ಏರಿದೆ

    ಇದನ್ನೂ ಓದಿ: 3 ಬ್ಯಾಂಕ್‌ಗಳಿಗೆ 10 ಕೋಟಿ ರೂ.ದಂಡ ವಿಧಿಸಿದ ಆರ್‌ಬಿಐ; ನವೆಂಬರ್‌ನಲ್ಲಿಯೇ ಒಂದೂವರೆ ಡಜನ್ ಸಹಕಾರಿ ಬ್ಯಾಂಕ್‌ಗಳಿಗೆ ಫೈನ್

    ಭಾರತದ ವಿದೇಶಿ ವಿನಿಮಯ ಮೀಸಲು ನ.17ಕ್ಕೆ 11 ವಾರಗಳ ಗರಿಷ್ಠ 595.40 ಶತಕೋಟಿ ಡಾಲರ್​ಗೆ ಏರಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ. ಮೀಸಲು $5.1 ಶತಕೋಟಿಯಷ್ಟು ಏರಿದ್ದು, ಇದು ನಾಲ್ಕು ತಿಂಗಳಲ್ಲಿ ಅತಿದೊಡ್ಡ ಲಾಭವಾಗಿದೆ.

    ವಿದೇಶಿ ಕರೆನ್ಸಿ ಸ್ವತ್ತುಗಳಲ್ಲಿನ ಬದಲಾವಣೆಗಳು ಆರ್‌ಬಿಐ ಮಧ್ಯಸ್ಥಿಕೆ ಮತ್ತು ಮೀಸಲು ಹೊಂದಿರುವ ವಿದೇಶಿ ಆಸ್ತಿಗಳ ಮೌಲ್ಯವರ್ಧನೆಯಿಂದ ಉಂಟಾಗುತ್ತವೆ. ವಿದೇಶಿ ವಿನಿಮಯ ಮೀಸಲುಗಳು ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿ ಭಾರತದ ಮೀಸಲು ಭಾಗದ ಸ್ಥಾನವನ್ನೂ ಒಳಗೊಂಡಿವೆ ಎಂದು ಆರ್​ಬಿಐ ಸ್ಪಷ್ಟಪಡಿಸಿದೆ.

    ಇನ್ನು ಕಳೆದ ವಾರ ಡಾಲರ್ ವಿರುದ್ಧ ರೂಪಾಯಿ ದಾಖಲೆ ಕುಸಿತ ಕಂಡಿದ್ದು, ಶುಕ್ರವಾರ 83.01 ರಿಂದ 83.3325 ರ ವ್ಯಾಪ್ತಿಯಲ್ಲಿ ವಹಿವಾಟು ನಡೆಸಿತು. ಇದು ವಾರದಲ್ಲಿ ಸ್ವಲ್ಪ ಮಟ್ಟಿಗೆ ಬದಲಾವಣೆ ಕಂಡಿದೆ. ಕರೆನ್ಸಿ ಶುಕ್ರವಾರ 83.3675 ನಲ್ಲಿ ಸ್ಥಿರಗೊಂಡಿದ್ದು ವಾರಕ್ಕೆ 0.1% ಕಡಿಮೆಯಾಗಿದೆ.

    ಭಾರತವಿಲ್ಲದೆ ಅಂತಾರಾಷ್ಟ್ರೀಯ ಸಮಸ್ಯೆಗಳಿಗೆ ಪರಿಹಾರ ಅಸಾಧ್ಯ: ನಾರ್ವೆ ಉಪ ವಿದೇಶಾಂಗ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts