

ನವದೆಹಲಿ: ಕೋಚಿಂಗ್ ಹಬ್ ಎಂದೇ ಹೆಸರಾಗಿರುವ ರಾಜಸ್ಥಾನದ ಕೋಟಾದಲ್ಲಿ ಕೋಚಿಂಗ್ಗೆ ಎಂದು ಬರುತ್ತಿರುವ ವಿದ್ಯಾರ್ಥಿಗಳು ಹಾಸ್ಟೆಲ್ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣದಿಂದ ಅಲ್ಲಿ ಹಾಸ್ಟೆಲ್ ಎಂದರೇನೇ ಹೆದರುವಂಥ ಸನ್ನಿವೇಶ ಸೃಷ್ಟಿಯಾಗಿದೆ.
ಈ ಮಧ್ಯೆ ಬಿಹಾರದ ಪಾಟ್ನಾದ ಏಮ್ಸ್ನ ವೈದ್ಯ ಕೂಡ ಹಾಸ್ಟೆಲ್ನಲ್ಲಿ ಸಾವಿಗೀಡಾಗಿದ್ದಾನೆ. ಹರಿಯಾಣದ ಗುರುಗ್ರಾಮ ಮೂಲದ ನೀಲೇಶ್ ಕುಮಾರ್ ಎಂಬ ಈತ ಬಿಹಾರದ ಪಾಟ್ನಾ ಎಐಐಎಂಎಸ್ನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದ. ಶುಕ್ರವಾರ ಈತ ತನ್ನ ಹಾಸ್ಟೆಲ್ ರೂಮ್ನಲ್ಲಿ ನಿಗೂಢವಾಗಿ ಸಾವಿಗೀಡಾಗಿದ್ದ.
ಅನಸ್ತೇಷಿಯಾದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದ ಈತ, 2016-21ರಲ್ಲಿ ಇದೇ ಶಿಕ್ಷಣ ಸಂಸ್ಥೆಯಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡಿದ್ದ. ಈತ ಪಾಟ್ನಾ ಏಮ್ಸ್ನಲ್ಲಿ ವೈದ್ಯನಾಗಿಯೂ ಅಭ್ಯಾಸ ಮಾಡುತ್ತಿದ್ದ. ಸಾವಿಗೆ ಕಾರಣ ಏನು ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.