ಚುನಾವಣಾ ಹಿನ್ನೆಲೆಯಲ್ಲಿ ರೌಡಿಗಳ ಮನೆ ಮೇಲೆ ಪೊಲೀಸರ ದಾಳಿ; 20ಕ್ಕೂ ಹೆಚ್ಚು ಜನರ ಬಂಧನ

police
Published on

ಬೆಂಗಳೂರು: ವಿಧಾನಸಭಾ ಚುನಾವಣೆ ಹಿನ್ನೆಲೆ ಪೊಲೀಸರು ನಗರದ ರೌಡಿಗಳ ಮನೆ ಮೇಲೆ ದಾಳಿ ಮಾಡಿದ್ದಾರೆ. ಪಶ್ಚಿಮ ಹಾಗೂ ದಕ್ಷಿಣ ವಿಭಾಗದ ಎಲ್ಲಾ ಠಾಣಾ ವ್ಯಾಪ್ತಿಯಲ್ಲಿ ದಾಳಿ ಮಾಡಿದ್ದು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿದ್ದಾರೆ.

ರೌಡಿಗಳ ಮನೆಯಲ್ಲಿ ಮಾರಕಾಸ್ತ್ರಗಳು ಪತ್ತೆ!

ಬೆಳ್ಳಂಬೆಳಿಗ್ಗೆ ರೌಡಿಗಳ ಮನೆ‌ ಮೇಲೆ ದಾಳಿ ಪೊಲೀಸರು ಮಾಡಿದ್ದು ದಕ್ಷಿಣ ವಿಭಾಗದ 110 ಹಾಗೂ ಪಶ್ಚಿಮ ವಿಭಾಗ ನೂರಾರು ರೌಡಿಗಳಿಗೆ ವಾರ್ನಿಂಗ್ ನೀಡಿದ್ದಾರೆ. ಚುನಾವಣೆ ಹಿನ್ನಲೆ ಯಾವುದೇ ಅಪರಾಧ ಕೃತ್ಯದಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಲು ತೆರಳಿದ್ದಾಗ ಕೆಲ ರೌಡಿಗಳ ಮನೆಯಲ್ಲಿ ಮಾರಕಾಸ್ತ್ರಗಳು ಸಹ ಪತ್ತೆಯಾಗಿದ್ದವು.

ಅದಲ್ಲದೆ ವಾರೆಂಟ್ ನೀಡಿದ್ರೂ ಠಾಣೆಗೆ ಹಾಜರಾದ ರೌಡಿಗಳನ್ನು ಬಂಧಿಸಲಾಗಿದ್ದು ಸುಮಾರು 20 ಕ್ಕೂ ಹೆಚ್ಚು ರೌಡಿಗಳು ಅರೆಸ್ಟ್ ಆಗಿದ್ದಾರೆ. ಅದಲ್ಲದೇ ಪೊಲೀಸರಿಗೆ ಸಿಗದೆ ಎಸ್ಕೇಪ್ ಆಗಿದ್ದ ಕೆಲ ಸರಗಳ್ಳರನ್ನೂ ಬಂಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net