More

    ಶಿಕ್ಷೆ ತಡೆಯುವಂತೆ ಕೋರಿ ರಾಹುಲ್​ ಗಾಂಧಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ನ್ಯಾಯಾಲಯ

    ನವದೆಹಲಿ: 2019ರ ‘ಮೋದಿ-ಉಪನಾಮದ ಎಲ್ಲರೂ ಕಳ್ಳರು’ ಎಂದು ಹೇಳಿಕೆ ನೀಡಿದ್ದ ಹಿನ್ನೆಯಲ್ಲಿ ದಾಖಲಾಗಿದ್ದ ಕ್ರಿಮಿನಲ್ ಮಾನನಷ್ಟ ಪ್ರಕರಣದಲ್ಲಿ ನೀಡಲಾಗಿದ್ದ ಶಿಕ್ಷೆಗೆ ತಡೆ ಕೋರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲ್ಲಿಸಿದ್ದ ಮನವಿಯನ್ನು ಸೂರತ್‌ನ ಸೆಷನ್ಸ್ ನ್ಯಾಯಾಲಯವು ಗುರುವಾರ, ಏಪ್ರಿಲ್ 20ರಂದು ತಿರಸ್ಕರಿಸಿದೆ.

    2019 ರ ಏಪ್ರಿಲ್‌ನಲ್ಲಿ ಕೋಲಾರದಲ್ಲಿ ಚುನಾವಣಾ ರ್ಯಾಲಿಯಲ್ಲಿ ರಾಹುಲ್ ಗಾಂಧಿ “ಮೋದಿ ಉಪನಾಮ ಹೊಂದಿರುವವರೆಲ್ಲರೂ ಕಳ್ಳರು” ಎಂಬ ಹೇಳಿಕೆ ನೀಡಿದ್ದರು. ಇದಕ್ಕಾಗಿ ಮಾರ್ಚ್ 23ರಂದು ನ್ಯಾಯಾಲಯವು ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಅವರನ್ನು ದೋಷಿ ಎಂದು ಘೋಷಿಸಿತ್ತು.

    ನ್ಯಾಯಾಲಯ ರಾಹುಲ್​ ಗಾಂಧಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಅದಾದ ಒಂದು ದಿನದ ನಂತರ ಲೋಕಸಭೆಯ ಸದಸ್ಯರಾಗಿ ಅನರ್ಹರಾಗಿದ್ದರು.

    ಮುಂದೇನು?

    1. ಏಪ್ರಿಲ್ 3 ರಂದು ಸೆಷನ್ಸ್ ನ್ಯಾಯಾಲಯವು ರಾಹುಲ್​ ಗಾಂಧಿ ಮೇಲ್ಮನವಿ ಇತ್ಯರ್ಥವಾಗುವವರೆಗೆ ಪ್ರಕರಣದಲ್ಲಿ ಅವರಿಗೆ ಜಾಮೀನು ನೀಡಿದ್ದರಿಂದ, ಗಾಂಧಿಯವರು ಜೈಲಿನಿಂದ ಹೊರಗಿರುತ್ತಾರೆ. ಆದರೆ ಸೂರತ್ ನ್ಯಾಯಾಲಯದ ಶಿಕ್ಷೆಯನ್ನು ತಡೆಹಿಡಿಯುವವರೆಗೆ ಅಥವಾ ಶಿಕ್ಷೆಗೆ ಗುರಿಯಾಗುವವರೆಗೆ ಸಂಸತ್ತಿನ ಹೊರಗಿರುತ್ತಾರೆ.
    2. ಈ ವಿಚಾರದಲ್ಲಿ ಕಾಂಗ್ರೆಸ್ ಗುಜರಾತ್ ಹೈಕೋರ್ಟ್‌ಗೆ ಮೊರೆ ಹೋಗುವ ಸಾಧ್ಯತೆ ಇದೆ ಎಂದು ವರದಿಗಳು ಹೇಳಿವೆ.
    3. ಕಾಂಗ್ರೆಸ್ ಸಂವಹನ ಉಸ್ತುವಾರಿ ಜೈರಾಮ್ ರಮೇಶ್ ಟ್ವಿಟರ್‌ನಲ್ಲಿ “ಕಾನೂನಿನ ಅಡಿಯಲ್ಲಿ ನಮಗೆ ಇನ್ನೂ ಲಭ್ಯವಿರುವ ಎಲ್ಲಾ ಆಯ್ಕೆಗಳನ್ನು ನಾವು ಬಳಸುತ್ತೇವೆ” ಎಂದಿದ್ದಾರೆ
    4. ಕಾಂಗ್ರೆಸ್ ನಾಯಕ ಡಾ. ಅಭಿಷೇಕ್ ಮನು ಸಿಂಘ್ವಿ ಸಂಜೆ 4:00 ಗಂಟೆಗೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts