ಜಗತ್ತು ನಿಮ್ಮನ್ನು ತಿರಸ್ಕರಿಸಿದರೂ..: ಚುನಾವಣೆಯಲ್ಲಿ ಸೋತ ಅಭ್ಯರ್ಥಿ ಅಮ್ಮನ ಬಳಿಗೆ ತೆರಳಿ ಹೀಗಂದಿದ್ದೇಕೆ?

Bhaskar Rao
Published on

ಬೆಂಗಳೂರು: ಇಂದು ಮದರ್ಸ್​ ಡೇ.. ಹಲವರು ಇಂದು ತಮ್ಮ ಅಮ್ಮನೊಂದಿಗೆ ಈ ದಿನವನ್ನು ನಾನಾ ರೀತಿಯಲ್ಲಿ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಅದೇ ರೀತಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಭಾಸ್ಕರ್ ರಾವ್ ಕೂಡ ಇಂದು ತಮ್ಮ ಅಮ್ಮನೊಂದಿಗೆ ಕೆಲ ಕ್ಷಣವನ್ನು ವಿಶೇಷವಾಗಿ ಕಳೆದಿದ್ದಾರೆ.

ಬೆಂಗಳೂರು ನಗರ ಪೊಲೀಸ್ ಕಮಿಷನರ್ ಆಗಿದ್ದ ಭಾಸ್ಕರ್ ರಾವ್, ಈ ಸಲದ ಚುನಾವಣೆಯಲ್ಲಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು. ಆದರೆ ಕಾಂಗ್ರೆಸ್​ನ ಜಮೀರ್ ಅಹ್ಮದ್ ಖಾನ್ ಎದುರು 53,953 ಮತಗಳ ಅಂತರದಿಂದ ಸೋತಿದ್ದಾರೆ.

ಚುನಾವಣಾ ಫಲಿತಾಂಶ ಪ್ರಕಟವಾದ ಮರುದಿನವಾದ ಇಂದು ಅವರು ತಾಯಿಯ ಬಳಿಗೆ ತೆರಳಿ, ಫೋಟೋ ಸಮೇತ ಹೀಗೊಂದು ಬರಹ ಪೋಸ್ಟ್ ಮಾಡಿಕೊಂಡಿದ್ದಾರೆ. "ಚುನಾವಣಾ ಫಲಿತಾಂಶದ ನಂತರ ತಾಯಿಯ ಆಶೀರ್ವಾದ ಪಡೆಯಲು ಬಂದಿದ್ದೇನೆ... ಜಗತ್ತು ನಿಮ್ಮನ್ನು ತಿರಸ್ಕರಿಸಿದರೂ, ತಾಯಿಯ ಆತ್ಮೀಯತೆ ಅಮೂಲ್ಯ.. ಅವಳು ನನಗೆ ಉತ್ತಮ ನಾಳೆಯ 🙏 ಭರವಸೆಯನ್ನು ತುಂಬುತ್ತಾಳೆ" ಎಂದು ಭಾಸ್ಕರ್ ರಾವ್​ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net