ಛಠ್​ ಪೂಜೆ ನಂತರ ನವೆಂಬರ್​ 5 ರಿಂದ 15 ರವರೆಗೆ 3 ಹಂತಗಳಲ್ಲಿ ನಡೆಯಲಿದೆ ಬಿಹಾರ ಚುನಾವಣೆ |Bihar election

v
Published on

Bihar election: ಬಿಹಾರ ವಿಧಾನಸಭಾ ಚುನಾವಣೆಗಳು ಅಕ್ಟೋಬರ್​ 28 ರಂದು ಛಠ್​ ಪೂಜೆಯ ನಂತರ ನವೆಂಬರ್​ 5 ರಿಂದ 15 ರವರೆಗೆ ಮೂರು ಹಂತಗಳಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ಸುದ್ದಿ ಮೂಲಗಳು ತಿಳಿಸಿವೆ.

ಪ್ರಸ್ತುತ ವಿಧಾನಸಭೆಯ ಅವಧಿ ನವೆಂಬರ್​​​ 22, 2025ರವರೆಗೆ ಕೊನೆಗೊಳ್ಳಲಿದ್ದು, ಆ ದಿನಾಂಕದ ಮೊದಲು ಚುನಾವಣಾ ಪ್ರಕ್ರಿಯೆಯನ್ನು ಚುನಾವಣಾ ಸಮಿತಿಗೆ ಅವಕಾಶ ನೀಡಲಾಗಿದೆ. ಈ ಸಂದರ್ಭದಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್​ ಮುಂದಿನ ವಾರ ಬಿಹಾರಕ್ಕೆ ಭೇಟಿ ನೀಡಿ, ಚುನಾವಣಾ ಸಿದ್ಧತೆಗಳು ಮತ್ತು ಅಂತಿಮ ಮತರದಾರರ ಪಟ್ಟಿಯನ್ನು ಪರಿಶೀಲನೆ ನಡೆಸಿ, ಸೆಪ್ಟೆಂಬರ್​ 30 ರಂದು ಈ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಚುನಾವಣಾ ಆಯೋಗವು ಇತ್ತೀಚೆಗೆ ಮುಕ್ತಾಯಗೊಳಿಸಿದ ವಿಶೇಷ ತಿವ್ರ ಪರಿಷ್ಕರಣಾ ಸಂದರ್ಭದಲ್ಲಿ ಕರಡು ಮತದಾರರ 65 ಲಕ್ಷ ಹೆಸರುಗಳನ್ನು ಅಳಿಸಲಾಗಿದೆ ಎಂದು ವರದಿಯಾಗಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ರಾಜಕೀಯ ಪಕ್ಷಗಳು INDIA ಬ್ಲಾಕ್ ಚುನಾವಣಾ ಸಂಸ್ಥೆಯನ್ನು ಗುರಿಯಾಗಿಸಿಕೊಂಡಿದ್ದು, ನಿಜವಾದ ಮತದಾರರನ್ನು ತೆಗೆದುಹಾಕಲು ಈ ಪ್ರಕ್ರಿಯೆಯನ್ನು ಬಳಸಲಾಗುತ್ತಿದೆ ಎಂದು ಆರೋಪಿಸಿದ್ದವು.

ಆದಾಗ್ಯೂ, ಸೆಪ್ಟೆಂಬರ್​ 30 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾದ ನಂತರವೂ ಅಕ್ರಮಗಳು ಕಂಡುಬಂದರೆ ಇಡೀ ಚುನಾವಣಾ ಪ್ರಕ್ರಿಯೆಯನ್ನು ರದ್ದುಗೊಳಿಸುವುದಾಗಿ ಸುಪ್ರೀಂ ಕೋರ್ಟ್​ ಎಚ್ಚರಿಕೆ ನೀಡಿದೆ.

ಈ ಹಿಂದೆ ನಡೆದ ಪದ್ದತಿಯಂತೇ, ಬಹು ಹಂತದ ಮತದಾನಕ್ಕೆ ವೇದಿಕೆ ಸಜ್ಜಾಗಿದೆ. 2020ರ ಚುನಾವಣೆಯನ್ನು 3 ಹಂತಗಳಲ್ಲಿ ನಡೆಸಲಾಯಿತು. ಅಕ್ಟೋಬರ್ 28 ರಂದು 71 ಸ್ಥಾನಗಳಿಗೆ, ನವೆಂಬರ್ 3 ರಂದು 94 ಸ್ಥಾನಗಳಿಗೆ ಮತ್ತು ನವೆಂಬರ್ 7 ರಂದು 78 ಸ್ಥಾನಗಳಿಗೆ ಮತದಾನ ನಡೆಯಿತು. ಇನ್ನು ನವೆಂಬರ್​ 10 ರಂದು ಫಲಿತಾಂಶವನ್ನು ಘೋಷಿಸಲಾಯಿತು.

ಈ ಬಾರಿಯ ಚುನಾವಣೆಯು ಎನ್​ಡಿಎ ಮತ್ತು ವಿರೋಧ ಪಕ್ಷದ ನಡುವೆ ನಡೆಯಲಿದೆ. ಇನ್ನು ಬಿಜೆಪಿ, ಜನತಾದಳ ಮತ್ತು ಲೋಕ ಜನಶಕ್ತಿ ಪಕ್ಷ ಹಾಗೂ ಮುಖ್ಯಮಂತ್ರಿ ನಿತೀಶ್​ ಕುಮಾರ್​ ನೇತೃತ್ವದ ಮತ್ತೊಂದು ಅವಧಿಕೆ ಚುಕ್ಕಾಣಿ ಹಿಡಿಯುವ ನಿರೀಕ್ಷೆಯಲ್ಲಿದೆ.

ಪ್ರಸ್ತುತ 243 ಸದಸ್ಯ ಬಲದ ವಿಧಾನಸಭೆಯಲ್ಲಿ, ಎನ್‌ಡಿಎ 131 ಸದಸ್ಯರೊಂದಿಗೆ ಬಹುಮತವನ್ನು ಹೊಂದಿದೆ. ಬಿಜೆಪಿ 80, ಜೆಡಿ(ಯು) 45, ಹಿಂದೂಸ್ತಾನಿ ಅವಾಮ್ ಮೋರ್ಚಾ 4, ಮತ್ತು 2 ಸ್ವತಂತ್ರ ಶಾಸಕರ ಬೆಂಬಲವಿದೆ. ಇಂಡಿಯಾ ಬ್ಲಾಕ್ 111 ಶಾಸಕರನ್ನು ಹೊಂದಿದ್ದು, ಆರ್‌ಜೆಡಿ 77, ಕಾಂಗ್ರೆಸ್ 19, ಸಿಪಿಐ(ಎಂಎಲ್) 11, ಸಿಪಿಐ(ಎಂ) 2 ಮತ್ತು ಸಿಪಿಐ 2 ಶಾಸಕರನ್ನು ಹೊಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net