

Job : ಆರ್ಥಿಕ ಭದ್ರತೆಯನ್ನು ಮೈಲಿಗಲ್ಲು ಎಂದು ಹೇಳುವಂತಹ ಸಂದರ್ಭದಲ್ಲಿ ಆರೋಗ್ಯವು ಮುಖ್ಯ ಎಂದು ಭಾರತೀಯ ಮಹಿಳೆಯೊಬ್ಬಳು ಕೇಳುಗರಿಗೆ ನೆನಪಿಸಿದ್ದಾಳೆ. ಉಪಾಸನಾ (22) ಎಂಬುವವರು ತಿಂಗಳಿಗೆ 60 ಸಾವಿರ ಸಂಪಾದಿಸುತ್ತಿದ್ದರೂ ಸಹ ಆ ಸಂಬಳದಿಂದ ದೂರ ಸರಿಯಲು ಏಕೆ ನಿರ್ಧರಿಸಿದ್ದಾರೆ ಎಂಬುದರ ಕುರಿತು ಮಾಡಿದಂತಹ ವಿಡಿಯೋ ಸಧ್ಯ ಇದೀಗ ಎಲ್ಲೆಡೆ ವೈರಲ್ ಆಗಿದೆ.
ಈ ವೈರಲ್ ವಿಡಿಯೋದಲ್ಲಿ ಉಪಾಸನಾ ಅವರು ತಾವು ಕೆಲಸವನ್ನು ಬಿಡುವ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಅವರು ಮಾತನಾಡುತ್ತಾ, ನಾನು ತಿಂಗಳಿಗೆ 60 ಸಾವಿರ ರೂ ಸಂಬಳವನ್ನು ಪಡೆಯುತ್ತಿದ್ದೆ, ಆದರೆ ಈಗ ಆ ಕೆಲಸವನ್ನು ತೊರೆದಿದ್ದೇನೆ. ಅದು ರಾತ್ರಿ ಪಾಳಿಯಾಗಿತ್ತು. ಪ್ರತಿ ಮೂರನೇ ದಿನ ನನ್ನಲ್ಲಿ ಏನಾದರು ಒಂದು ಸಮಸ್ಯೆ ಅನುಭವಿಸಲು ಪ್ರಾರಂಭಿಸುತ್ತಿದ್ದೆ. ಅಂದರೆ, ತಲೆನೋವು, ಆಮ್ಲೀಯತೆ, ಕಡಿಮೆ ರಕ್ತದೊತ್ತಡ ಅಥವಾ ಆತಂಕ ಈ ರೀತಿಯಾಗಿ ತೊಂದರೆ ಅನುಭವಿಸುತ್ತಿದ್ದೆ. 22 ನೇ ವಯಸ್ಸಿನಲ್ಲಿ ಈಗಾಗಲೇ ಆರ್ಥಿಕವಾಗಿ ಸುರಕ್ಷೆಯಲ್ಲಿದ್ದೇನೆ. ಹಣ ಮತ್ತು ಆರೋಗ್ಯ ವಿಚಾರಕ್ಕೆ ಬಂದಾಗ ನನ್ನ ಈ ಆಯ್ಕೆ ಸ್ಪಷ್ಟವಾಗಿತ್ತು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: H-1B ವೀಸಾ ಶುಲ್ಕ ಹೆಚ್ಚಳಕ್ಕೆ ತತ್ತರಿಸಿದ ಐಟಿ ಷೇರುಗಳು: ಟೆಕ್ ಮಹೀಂದ್ರಾ, ಇನ್ಫೋಸಿಸ್, ವಿಪ್ರೋಗೆ ನಷ್ಟ! Donald Trump ಜನರು ಹಣವನ್ನು ತಾತ್ಕಾಲಿಕ ಎಂದು ಹೇಳುತ್ತಾರೆ. ಅದು ಬರುತ್ತದೆ ಹೋಗುತ್ತದೆ. ಆದರೆ, ಆರೋಗ್ಯ ಸಮಸ್ಯೆಯಿಂದ ದೇಹ ಒಮ್ಮೆ ಬೆಂಡಾದರೆ ನಿಮ್ಮ ಹಣ ಮುಖ್ಯವಲ್ಲ. ಅದಕ್ಕಾಗಿ ನಾನು ಆರೋಗ್ಯವನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಮುಂದೆ ಏನಾಗುತ್ತದೆ ಎಂಬುದು ನನಗೆ ತಿಳಿದಿಲ್ಲ. ಇದರಿಂದ ಹಿಂತಿರುಗಿ ಜೀವನದಲ್ಲಿ ಏನನ್ನಾದರೂ ಸಾಧಿಸುತ್ತೇನೆ ಎಂದು ನೋಡೋಣ ಎಂದು ಹೇಳಿದ್ದಾರೆ.
"ಜೀವನದ ಅನಿರೀಕ್ಷಿತತೆ" ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋ ಸಾವಿರಾರು ವೀಕ್ಷಣೆಗಳು ಮತ್ತು ಪ್ರತಿಕ್ರಿಯೆಗಳನ್ನು ಸಂಗ್ರಹಿಸಿದ ನಂತರ, ಬಳಕೆದಾರರು ಉಪಾಸನಾ ಅವರ ಧೈರ್ಯವನ್ನು ಶ್ಲಾಘಿಸಿದ್ದಾರೆ. ಅನೇಕರು ಅವರ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋಕ್ಕೆ ಪ್ರತಿಕ್ರಿಯಿಸಿದ ಒಬ್ಬರು, ಹಣವನ್ನು ಯಾವಾಗಲೂ ಮತ್ತೆ ಗಳಿಸಬಹುದು, ಆದರೆ ಒಮ್ಮೆ ಆರೋಗ್ಯ ಕಳೆದುಕೊಂಡರೆ ಅದು ಶಾಶ್ವತವಾಗಿ ಹೋಗುತ್ತದೆ ಎಂದು ತಿಳಿಸಿದ್ದಾರೆ.
ಇನ್ನೊಬ್ಬ ಇನ್ಸ್ಟಾಗ್ರಾಮ್ ಬಳಕೆದಾರ ನಾನೇ ಅಲ್ಲಿಗೆ ಹೋಗಿದ್ದೇನೆ! ನಿಮಗೆ ಶುಭ ಹಾರೈಸುತ್ತೇನೆ ಮತ್ತು ಮಂದಿನ ಭವಿಷ್ಯದಲ್ಲಿ ಎಲ್ಲವನ್ನೂ ಸಾಧಿಸುವಿರಿ ಎಂದು ಆಶಿಸುತ್ತೇನೆ. ನಾವೆಲ್ಲರೂ ನಿಮಗಾಗಿ ಕಾಯುತ್ತಿದ್ದೇವೆ" ಎಂದು ಬರೆದಿದ್ದಾರೆ. ಇತರರು ಇವರ ನಿರ್ಧಾರವನ್ನು ಸ್ಪೂರ್ತಿಧಾಯಕ ಎಂದು ಕರೆದಿದ್ದು, ಮನಸ್ಸಿನ ಶಾಂತಿಗಾಗಿ ಆರ್ಥಿಕ ಸ್ಥಿರತೆಯಿಂದ ದೂರ ಸರಿಯಲು ನಿಜವಾದ ಧೈರ್ಯ ಬೇಕು ಎಂದು ಕರೆದಿದ್ದಾರೆ. (ಏಜೆನ್ಸೀಸ್)