

ನವದೆಹಲಿ: ಹಿಂಡನ್ಬರ್ಗ್ ಸಂಸ್ಥೆ ಮಾಡಿರುವ ಆರೋಪಗಳು ಇದೀಗ ಅದಾನಿ ಸಂಸ್ಥೆಯ ಷೇರುಗಳ ಮೇಲೆ ಭಾರೀ ಪರಿಣಾಮ ಬೀರಿದ್ದು, ಕೇವಲ ಒಂದೆರೆಡು ದಿನಗಳಲ್ಲಿಯೇ ದೊಡ್ಡ ಹೊಡೆತ ನೀಡಿದೆ. ಸದ್ಯ ಈ ವಿಷಯವು ಇದೀಗ ಜಾಗತಿಕ ಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇಂದು (ಆ.12) ಬೆಳಗ್ಗೆ ಅದಾನಿ ಷೇರುಗಳು 16.7 ಲಕ್ಷ ಕೋಟಿ ರೂ. ದಿಢೀರ್ ಕುಸಿತ ಕಂಡ ಹಿನ್ನಲೆ ಹೂಡಿಕೆದಾರರು 53 ಕೋಟಿ ರೂ. ನಷ್ಟ ಎದುರಿಸಿದ್ದಾರೆ.
ಭಾರತದ ಅಭಿವೃದ್ಧಿಗಾಥೆಯನ್ನೇ ಗುರಿಯಾಗಿಸಿ, ವಿಶ್ವ ಮಾರುಕಟ್ಟೆಯಲ್ಲಿ ವರ್ಚಸ್ಸಿಗೆ ಹಾನಿ ಮಾಡುವುದೇ ಈ ವಿದೇಶಿ ಸಂಸ್ಥೆಗಳ ಉದ್ದೇಶವಿರಬಹುದೇ ಎನ್ನುವುದು 2023ರಿಂದಲೂ ಇರುವ ಗಂಭೀರ ವಾದ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಚರ್ಚೆಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಕೇಂದ್ರ ಸರ್ಕಾರ ಕೂಡ ಇದೇ ಆರೋಪವನ್ನು ಹೇರುತ್ತ ಬಂದಿದೆ.
ಸೆಕ್ಯುರಿಟೀಸ್ ಆಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಅಧ್ಯಕ್ಷೆ ಮಾಧವಿ ಪುರಿ ಬುಚ್ ಮತ್ತು ಉದ್ಯಮಿ ಗೌತಮ್ ಅದಾನಿ ನಂಟಿನ ಬಗ್ಗೆ ಹಿಂಡನ್ಬರ್ಗ್ ಸಂಸ್ಥೆ ಮಾಡಿರುವ ಆರೋಪಗಳು ಸದ್ಯ ದೇಶಾದ್ಯಂತ ದೊಡ್ಡ ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ‘ಭಾರತದ ಆಂತರಿಕ ವಿಷಯದ ಬಗ್ಗೆ ವಿದೇಶಿ ಸಂಸ್ಥೆಯೊಂದು ತೋರುತ್ತಿರುವ ಭಾರಿ ಆಸಕ್ತಿ’ ಬಗ್ಗೆಯೂ ಭಾರೀ ಅನುಮಾನ ವ್ಯಕ್ತವಾಗುತ್ತಿದೆ. ಹಿಂಡೆನ್ಬರ್ಗ್ ಆರೋಪಗಳನ್ನು ಕೇಳುತ್ತಿದ್ದಂತೆ ಎಚ್ಚೆತ್ತುಕೊಂಡ ಅನೇಕ ಹೂಡಿಕೆದಾರರು, ಇದೀಗ ಸೇಫ್ ಪ್ಲೇ ಮಾದರಿಯನ್ನು ಆಯ್ದುಕೊಂಡಿದ್ದರಿಂದ ಅದಾನಿ ಗ್ರೂಪ್ಸ್ನ ಷೇರಿನಲ್ಲಿ ದಿಢೀರ್ 7% ಕುಸಿತ ಕಂಡಿದೆ.
ಇಂದು ಬೆಳಗ್ಗೆಯೇ ಅದಾನಿ ಸಂಸ್ಥೆಯ ಷೇರು 7% ಕುಸಿತ ಕಂಡ ಪರಿಣಾಮ, ಹೂಡಿಕೆದಾರರಿಗೆ 53 ಕೋಟಿ ರೂ. ನಷ್ಟ ಉಂಟಾಗಿದೆ. 10 ಅದಾನಿ ಷೇರುಗಳ ಸಂಯೋಜಿತ ಮಾರುಕಟ್ಟೆ ಬಂಡವಾಳವು 16.7 ಲಕ್ಷ ಕೋಟಿ ರೂ.ಗೆ ಇದೀಗ ಕುಸಿದಿದೆ. ಇದು ಅದಾನಿ ಗ್ರೀನ್ ಎನರ್ಜಿ ಷೇರುಗಳು ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರಿದೆ. ಅದಾನಿ ಅವರ ಟೋಟಲ್ ಗ್ಯಾಸ್ ಷೇರುಗಳು 5%, ಪವರ್ 4%, ವಿಲ್ಮರ್, ಎನರ್ಜಿ ಸೊಲ್ಯೂಷನ್ಸ್ ಮತ್ತು ಅದಾನಿ ಎಂಟರ್‌ಪ್ರೈಸಸ್ ಸುಮಾರು 3% ನಷ್ಟು ಇಳಿಕೆಯಾಗಿದೆ. ನಿಫ್ಟಿ ಸ್ಟಾಕ್ ಅದಾನಿ ಪೋರ್ಟ್ಸ್ ಷೇರುಗಳು ಸುಮಾರು 2% ರಷ್ಟು ಕುಸಿತ ಕಂಡಿದೆ,(ಏಜೆನ್ಸೀಸ್).