ತಮಿಳುನಾಡು: ಜಾಗತಿಕವಾಗಿ ಜೂ. 27ರಂದು ಬಹುತೇಕ ಚಿತ್ರಮಂದಿಗಳಲ್ಲಿ ಬಿಡುಗಡೆಗೊಂಡ ಟಾಲಿವುಡ್ ರೆಬೆಲ್ ಸ್ಟಾರ್, ನಟ ಪ್ರಭಾಸ್ ಅಭಿನಯದ ಸೈನ್ಸ್ ಫಿಕ್ಷನ್ ಆಧರಿತ ಪ್ಯಾನ್ ಇಂಡಿಯಾ ‘ಕಲ್ಕಿ 2898 ಎಡಿ’ ಚಿತ್ರ ಇದೀಗ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಗಳಿಕೆ ಕಂಡು, ಯಶಸ್ವಿ ಚಲನಚಿತ್ರಗಳ ಸಾಲಿಗೆ ಸೇರ್ಪಡೆಗೊಂಡಿದೆ. ಮೊದಲ ದಿನವೇ ಸಿನಿಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಪಡೆದ ನಾಗ್ ಅಶ್ವಿನ್ ನಿರ್ದೇಶನದ ಈ ಚಿತ್ರವು ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ 1,100 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಸದ್ಯ ಸಾವಿರ ಕೋಟಿ ಕ್ಲಬ್ ಸೇರಿದ ಕಲ್ಕಿ ಈಗ ಟಾಲಿವುಡ್ನಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದೆ.
ಇದನ್ನೂ ಓದಿ: ದುಬಾರಿ ಹಡುಗು, 100 ಐಫೋನ್! ಜಾಕ್ವೆಲಿನ್ಗೆ ಸುಕೇಶ್ ಚಂದ್ರಶೇಖರ್ ಕಡೆಯಿಂದ ಭರ್ಜರಿ ಗಿಫ್ಟ್
ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಬ್ಲಾಕ್‌ಬಸ್ಟರ್ ‘ಕಲ್ಕಿ 2898 AD’ ಇದೀಗ ತೆಲುಗು ಚಿತ್ರರಂಗದಲ್ಲಿ ಸಾರ್ವಕಾಲಿಕ ದಾಖಲೆ ಬರೆದಿದ್ದು, ಅತಿ ಹೆಚ್ಚು ಹಣ ಗಳಿಸಿದ ಭಾರತೀಯ ಚಲನಚಿತ್ರವಾಗಿ ಹೊರಹೊಮ್ಮಿದೆ. ಅಮಿತಾಭ್ ಬಚ್ಚನ್, ಕಮಲ್ ಹಾಸನ್, ದಿಶಾ ಪಟಾನಿ, ದುಲ್ಕರ್ ಸಲ್ಮಾನ್ ಸೇರಿದಂತೆ ಮುಂತಾದ ಸ್ಟಾರ್ ನಟರು ಈ ಸಿನಿಮಾದ ಭಾಗವಾಗಿದ್ದಾರೆ. ಅಸಲಿಗೆ ಈ ತಾರಾಗಣದಲ್ಲಿ ‘ಮಹಾನಟಿ’ ಕೀರ್ತಿ ಸುರೇಶ್ ಕೂಡ ಇರಬೇಕಿತ್ತು. ‘ಕಲ್ಕಿ’ಯ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಬೇಕಿದ್ದ ಕೀರ್ತಿ, ತನಗೆ ಬಂದ ದೊಡ್ಡ ಅವಕಾಶವನ್ನು ಕೈಬಿಟ್ಟಿದ್ದಾರೆ. ಈ ಕುರಿತು ಸ್ವತಃ ಕೀರ್ತಿ ಸುರೇಶ್ ಅವರೇ ಮುಕ್ತವಾಗಿ ಮಾತನಾಡಿದ್ದಾರೆ.
ಪ್ರಭಾಸ್ ‘ಕಲ್ಕಿ’ ಸಿನಿಮಾ ನೋಡಿದವರಿಗೆ ಬುಜ್ಜಿ ಕಾರಿನ ಬಗ್ಗೆ ಗೊತ್ತಿದೆ. ಈ ಕಾರಿಗೆ ಧ್ವನಿ ನೀಡುವ ಮೂಲಕ ಅದಕ್ಕೂ ಜೀವವಿದೆ ಎಂಬುದನ್ನು ಪರದೆಯ ಮೇಲೆ ಅಚ್ಚುಕಟ್ಟಾಗಿ ತೋರಿಸಿದ್ದು ಕೀರ್ತಿ. ಎಐ ಮಾದರಿಯ ಬುಜ್ಜಿಗೆ ಜೀವ ತುಂಬಿದ ಕೀರ್ತಿ ಸುರೇಶ್ ಧ್ವನಿ, ಸಿನಿಪ್ರೇಕ್ಷಕರ ಗಮನಸೆಳೆಯುವಲ್ಲಿ ಯಶಸ್ವಿಯಾಯಿತು. ಪಾತ್ರವರ್ಗದಲ್ಲಿ ಇಲ್ಲದೇ ಹೋದರೂ ಕೇವಲ ತಮ್ಮ ಧ್ವನಿಯಿಂದಲೇ ನೋಡುಗರನ್ನು ಸೆಳೆದ ‘ಮಹಾನಟಿ’ ಅಸಲಿಗೆ ಚಿತ್ರದಲ್ಲಿ ವಿಶೇಷ ಪಾತ್ರವೊಂದನ್ನು ನಿರ್ವಹಿಸಬೇಕಿತ್ತು. ನಾಗ್ ಅಶ್ವಿನ್ ಕೊಟ್ಟ ಒಂದೊಳ್ಳೆ ಆಫರ್ ಅನ್ನು ಮುಲ್ಲಾಜಿಲ್ಲದೇ ಕೈಬಿಟ್ಟ ಕೀರ್ತಿ, ಬುಜ್ಜಿಗೆ ಧ್ವನಿಯಾಗಲು ಮಾತ್ರ ಒಪ್ಪಿಕೊಂಡರು.
ಇದನ್ನೂ ಓದಿ: ಭಾರಿ ಮಳೆ: ನದಿಯಲ್ಲಿ ಕೊಚ್ಚಿ ಹೋದ ಕಾರು, ಒಂದೇ ಕುಟುಂಬದ 9 ಮಂದಿ ಸಾವು
ಇತ್ತೀಚೆಗೆ ನಡೆದ ಸಂದರ್ಶವೊಂದರಲ್ಲಿ ಈ ಕುರಿತು ಮಾತನಾಡಿದ ಕೀರ್ತಿ ಸುರೇಶ್, “ಪ್ರಭಾಸ್ ಅವರ ಕಲ್ಕಿ ಚಿತ್ರದಲ್ಲಿ ನಿಮಗೊಂದು ವಿಶೇಷ ಪಾತ್ರವಿದೆ. ಅಭಿನಯಿಸಲು ನೀವು ಸಿದ್ಧರಿದ್ದೀರಾ ಎಂದು ನಿರ್ದೇಶಕ ನಾಗ್ ಅಶ್ವಿನ್ ನನ್ನನ್ನು ಕೇಳಿದರು. ಆದ್ರೆ, ನಾನೇ ಅದನ್ನು ಒಪ್ಪಿಕೊಳ್ಳದೆ ತಿರಸ್ಕರಿಸಿದೆ” ಎಂದರು. ಇದಕ್ಕೆ ಕಾರಣವೇನು ಎಂಬುದನ್ನು ಹೇಳದ ಕೀರ್ತಿ, ಹೆಚ್ಚು ಮಾತನಾಡದೆ ಮುಂದಿನ ವಿಷಯಕ್ಕೆ ಪ್ರತಿಕ್ರಿಯಿಸಿದ್ದಾರೆ. ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಕೀರ್ತಿ, ‘ರಘು ತಾತಾ’, ‘ರಿವಾಲ್ವರ್ ರಾಣಿ’, ‘ಬೇಬಿ ಜಾನ್’ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾಗಳು ಶೀಘ್ರವೇ ತೆರೆಗೆ ಬರಲು ಸಜ್ಜಾಗಿವೆ,(ಏಜೆನ್ಸೀಸ್).
ಇದನ್ನು ನಾನು ಸಹಿಸಲ್ಲ… ಮ್ಯಾಚ್ ಫಿಕ್ಸಿಂಗ್ ಪದ ಕೇಳುತ್ತಿದ್ದಂತೆ ಸಿಡಿದೆದ್ದ ಪಾಕ್ ಆಟಗಾರ!