ನಟಿ ಪ್ರಣೀತಾ SSLC ಅಂಕಪಟ್ಟಿ ವೈರಲ್​: ಕನ್ನಡದಲ್ಲಿ ಪಡೆದ ಮಾರ್ಕ್ಸ್ ಎಷ್ಟು ಗೊತ್ತಾ? ನಿಜಕ್ಕೂ ಅಚ್ಚರಿಪಡ್ತೀರಾ!

pranitha 10th marks card
Published on

ಬೆಂಗಳೂರು: ಪ್ರತಿಯೊಬ್ಬರ ವಿದ್ಯಾಭ್ಯಾಸದ ಜೀವನದಲ್ಲಿ ಮಹತ್ವದ ತಿರುವು ಎಂದರೆ ಅದು ಹತ್ತನೇ ತರಗತಿ. ಜೀವನದ ದಿಕ್ಕನ್ನು ಸಂಪೂರ್ಣವಾಗಿ ಬದಲಿಸುವುದೇ ಈ ಎಸ್ಸೆಸ್ಸೆಲ್ಸಿ ಅಂಕಪಟ್ಟಿ (SSLC Marks Card). ಇಲ್ಲಿ ಮಾರ್ಕ್ಸ್​ ಚೆನ್ನಾಗಿದ್ದರೇ ಓದು ಮುಂದುವರಿಯುತ್ತಿತ್ತು. ಇಲ್ಲದಿದ್ದರೇ ಯಾವುದಾದರೂ ಕೆಲಸ ಹುಡುಕಿಕೊಳ್ಳುವುದು ಅನಿರ್ವಾಯವಾಗುತ್ತಿತ್ತು. ಇದು ಅಂದಿನ ಕಾಲದಲ್ಲಿ ಇದ್ದಂತಹ ಪರಿಸ್ಥಿತಿ. ಇನ್ನೊಂದು ರೀತಿ ಹೇಳುವುದಾದರೆ ಮೀರಲಾಗದ ನಿಯಮ. ಓದು ಚೆನ್ನಾಗಿದ್ದರೆ ಸಾಲುತ್ತಿರಲಿಲ್ಲ, ಮಾರ್ಕ್ಸ್​ ಕಾರ್ಡ್​ನಲ್ಲಿ ಅಂಕಗಳು ಕೂಡ ಅಷ್ಟೇ ಚೆನ್ನಾಗಿರಬೇಕಿತ್ತು. ಹಲವರಿಗೆ ತಮ್ಮ ಸ್ನೇಹಿತರು ಅಥವಾ ಇತರರ 10ನೇ ಅಂಕಪಟ್ಟಿ ನೋಡಲು ವಿಪರೀತ ಕುತೂಹಲ. ಅದರಲ್ಲೂ ತಮ್ಮ ನೆಚ್ಚಿನ ಸ್ಟಾರ್​ ನಟ-ನಟಿಯರು, ಸೆಲೆಬ್ರಿಟಿಗಳ ಅಂಕಪಟ್ಟಿ ನೋಡುವುದು ಎಂದರೆ ಅದೇನೋ ಕೌತುಕ. ಈ ಹಿಂದೆ ಅನೇಕ ಕಲಾವಿದರ ಎಸ್ಸೆಸ್ಸೆಲ್ಸಿ ಮಾಕ್ಸ್​ ಕಾರ್ಡ್​ ಜಾಲತಾಣಗಳಲ್ಲಿ ಹರಿದಾಡಿದ್ದನ್ನು ನಾವೆಲ್ಲಾ ಗಮನಿಸಿದ್ದೇವೆ. ಇದೀಗ ಈ ಸಾಲಿಗೆ ಕನ್ನಡ ಚಿತ್ರರಂಗದ ಸ್ಟಾರ್​ ನಟಿ ಪ್ರಣೀತ ಸುಭಾಷ್​ (Actress Pranitha Subhash) ಅವರ ಅಂಕಪಟ್ಟಿ ಕೂಡ ಸೇರ್ಪಡೆಗೊಂಡಿದೆ.

'ಪೊರ್ಕಿ' ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ

ಸಖತ್​ ಆಗವಳೇ..ಸುಮ್ಮನೆ ನಗ್ತಾಳೆ, ಕದ್ದು ನೋಡ್ತಾಳೆ... ಎಂದು ಅಂದು ಚಿತ್ರರಸಿಕರನ್ನು ಚಿತ್ರಮಂದಿರಗಳಲ್ಲಿ ಕುಣಿಸಿದ ನಟಿ ಪ್ರಣೀತ, ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ (Actor Darshan)​ ಅಭಿನಯದ 'ಪೊರ್ಕಿ' (Porki) ಚಿತ್ರದಲ್ಲಿ ನಾಯಕ ನಟಿಯಾಗಿ ಅಭಿನಯಿಸುವ ಮುಖೇನ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಇದೊಂದು ಚಿತ್ರದಿಂದ ಸ್ಯಾಂಡಲ್​ವುಡ್​ನಲ್ಲಿ ಹೆಚ್ಚೆಚ್ಚು ಅವಕಾಶ ಗಿಟ್ಟಿಸಿಕೊಂಡ ನಟಿ, 'ಭೀಮಾ ತೀರದಲ್ಲಿ', 'ಜರಸಂಧ' ಚಿತ್ರಗಳಲ್ಲಿ ನಟಿಸಿ, ಕನ್ನಡ ಸಿನಿಪ್ರೇಕ್ಷಕರಿಗೆ ಚಿರಪರಿಚಿತರಾದರು. ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಚಿತ್ರಗಳಲ್ಲಿ ನಟಿಸಿ, ಅಭಿಮಾನಿಗಳಿಂದ ಸೈಎನಿಸಿಕೊಂಡಿರುವ ಪ್ರಣೀತ ಸದ್ಯದ ಮಟ್ಟಿಗೆ ಚಿತ್ರರಂಗದಿಂದ ದೂರ ಉಳಿದಿದ್ದು, ದಾಂಪತ್ಯ ಜೀವನದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಇತ್ತೀಚೆಗಷ್ಟೇ ತಮ್ಮ ಎರಡನೇ ಮಗುವಿಗೆ ಜನ್ಮ ನೀಡಿದ ಪ್ರಣೀತ, ಇದೀಗ ತಾಯ್ತನದ ಜವಾಬ್ದಾರಿಗಳನ್ನು ನಿಭಾಯಿಸುವಲ್ಲಿ ಸಖತ್ ಬಿಜಿಯಾಗಿದ್ದಾರೆ.

10ನೇ ತರಗತಿಯಲ್ಲಿ ನಟಿ ಪಡೆದ ಅಂಕಗಳಿವು

ತಮ್ಮ ಹತ್ತನೇ ತರಗತಿಯನ್ನು (SSLC) ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮುಗಿಸಿರುವ ಬಹುಭಾಷಾ ನಟಿ ಪ್ರಣೀತ, ಐಸಿಎಸ್​ಇ ಪಠ್ಯಕ್ರಮದಲ್ಲಿ ವಿದ್ಯಾಭ್ಯಾಸವನ್ನು ಪಡೆದಿದ್ದಾರೆ. ಅಸಲಿಗೆ ಪ್ರಣೀತ ಅವರು ಸೂಪರ್ ಡೂಪರ್​​ ವಿದ್ಯಾರ್ಥಿ​ ಎಂಬುದು ಇದೊಂದು ಅಂಕಪಟ್ಟಿಯಿಂದಲೇ  ಸ್ಪಷ್ಟವಾಗುತ್ತದೆ. ಯಾಕೆಂದರೆ, ಕೇವಲ ಒಂದು ಅಥವಾ ಎರಡು ವಿಷಯದಲ್ಲಿ ಟಾಪ್​ ಸ್ಕೋರ್​ ಪಡೆಯದ ನಟಿ, ಬಹುತೇಕ ವಿಷಯಗಳಲ್ಲಿ ಗರಿಷ್ಠ ಅಂಕಗಳನ್ನು ಪಡೆಯುವ ಮೂಲಕ ತಾವೊಬ್ಬರು ಬ್ರಿಲಿಯಂಟ್​ ಸ್ಟೂಡೆಂಟ್ ಎಂಬುದನ್ನು ಸಾಬೀತುಪಡಿಸಿದ್ದಾರೆ. ಮಾರ್ಕ್ಸ್ ಕಾರ್ಡ್​ನಲ್ಲಿ ಉಲ್ಲೇಖಗೊಂಡಿರುವ ಅಂಕಗಳ ಪ್ರಕಾರ, ನಟಿ ಪಡೆದಿರುವ ಒಟ್ಟು ಸ್ಕೋರ್​ ಈ ಕೆಳಕಂಡಂತಿದೆ ನೋಡಿ.

sslc marks card

ಇಂಗ್ಲಿಷ್​: 100ಕ್ಕೆ 83

ಕನ್ನಡ: 100ಕ್ಕೆ 90

ಪರಿಸರ ಅಧ್ಯಯನ: 100ಕ್ಕೆ 91

ಇತಿಹಾಸ ನಾಗರಿಕ ಮತ್ತು ಭೂಗೋಳ: 100ಕ್ಕೆ 86

ಗಣಿತ: 100ಕ್ಕೆ 90

ವಿಜ್ಞಾನ: 100ಕ್ಕೆ 90

ಕಂಪ್ಯೂಟರ್​ ಅಪ್ಲಿಕೇಷನ್ಸ್​: 100ಕ್ಕೆ 95

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net