

ಬೆಂಗಳೂರು: 'ಅಂತಿಂತ ಗಂಡು ನಾನಲ್ಲ'...'ನನ್ನಂತ ಭಂಡ ಯಾರಿಲ್ಲ' ಎಂದು ಹಾಡುತ್ತಲೇ ಕನ್ನಡಿಗರನ್ನು ಕುಣಿಸುತ, 'ತರ್ಲೆ ನನ್ನ ಮಗ' ಚಿತ್ರದ ಮೂಲಕ ನಕ್ಕು ನಲಿಸುತ, ಪ್ರೇಕ್ಷಕರ ಹೊಟ್ಟೆ ಹುಣ್ಣಾಗುವಂತೆ ಮಾಡಿದ ಕನ್ನಡ ಚಿತ್ರರಂಗದ ಹಿರಿಯ ನಟ, ನವರಸ ನಾಯಕ (Navarasa Nayaka) ಜಗ್ಗೇಶ್ (Actor Jaggesh) ಯಾರಿಗೆ ಗೊತ್ತಿಲ್ಲ ಹೇಳಿ.
ತಮ್ಮ ವಿಭಿನ್ನ ನಟನೆ, ಹಾಸ್ಯಪ್ರಜ್ಞೆ, ಕೈಸನ್ನೆಗಳಿಂದಲೇ ನೋಡುಗರ ಗಮನಸೆಳೆದಿರುವ ಈಶ್ವರ್, ಇಂದಿಗೂ ಕೂಡ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿ, ಅಭಿಮಾನಿಗಳನ್ನು ನಗೆಗಡಲಲ್ಲಿ ತೇಲಿಸುವ ಕೆಲಸ ಮಾಡುತ್ತಿದ್ದಾರೆ. ಕಾಯಕವೇ ಕೈಲಾಸ ಎಂದು ನಂಬಿರುವ ಜಗ್ಗೇಶ್, ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡುವ ಮುನ್ನ ಪಟ್ಟ ಕಷ್ಟ ಅಷ್ಟಿಷ್ಟಲ್ಲ.
ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದಿಂದ ಜೈಲು ಅಕ್ರಮಗಳಿಗೆ ಬ್ರೇಕ್
ಬಡ ಕುಟುಂಬದಲ್ಲಿ ಈಶ್ವರ್ ಬಾಲ್ಯದಿಂದಲೂ ಬಹಳ ಕಷ್ಟಪಟ್ಟು ಬೆಳೆದು ಬಂದವರು. ಶಿಸ್ತಿನ ತಂದೆಯ ಬೈಗುಳಕ್ಕೆ ಬೆದರುತ್ತಿದ್ದ ಜಗ್ಗೇಶ್, ಅಪ್ಪನ ವಿರೋಧಗಳ ನಡುವೆಯೂ ಚಿತ್ರರಂಗಕ್ಕೆ ಎಂಟ್ರಿಕೊಟ್ಟು ಮಾಡಿರುವ ಸಾಧನೆಗಳೇ ಅಮೋಘ. ಜೀವನದ ಮೌಲ್ಯಗಳನ್ನು ಚೆನ್ನಾಗಿ ಅರಿತಿರುವ ಈ ಹಾಸ್ಯನಟ ಅಂದು ವಿದ್ಯಾಭ್ಯಾಸ ಪೂರ್ಣಗೊಳಿಸಿ, ನಟನೆಗೆ ಹೆಜ್ಜೆಯಿಟ್ಟಿದ್ದೇ ರೋಚಕ. ಬಾಲ್ಯದಲ್ಲಿ ತಂದೆ-ತಾಯಿಯ ಮಾರ್ಗದರ್ಶನದಲ್ಲಿ ಬೆಳೆದ ಜಗ್ಗೇಶ್, ಅಪ್ಪನ ಧ್ವನಿ ಕೇಳಿದ್ರೆ ಹೆದರುತ್ತಿದ್ದರು. ಹಣಕ್ಕಾಗಿ ಪರದಾಡುತ್ತಿದ್ದ ದಿನಗಳಲ್ಲಿಯೂ ವಿದ್ಯಾಭ್ಯಾಸ ಕಟ್ಟಿಕೊಂಡ ನಟ, ಅಂದು ಎಸ್ಸೆಸ್ಸೆಲ್ಸಿಯಲ್ಲಿ (SSLC) ಗಳಿಸಿದ ಅಂಕಗಳೆಷ್ಟು ಎಂದು ನಿಮಗೆ ಗೊತ್ತಿದ್ಯಾ? ತಿಳಿಯುವ ಕುತೂಹಲವಿದ್ಯಾ? ಹಾಗಾದ್ರೆ, ಮುಂದೆ ಓದಿ.
ಚಿಕ್ಕ ವಯಸ್ಸಿನಲ್ಲೇ ವರನಟ ಡಾ. ರಾಜ್ಕುಮಾರ್ (Dr. Rajkumar) ಅವರ ಅಭಿನಯಕ್ಕೆ ಫಿದಾ ಆಗಿ, ಅವರಂತೆಯೇ ದೊಡ್ಡ ನಟನಾಗುವ ಆಸೆ ಕಂಡವರು ಜಗ್ಗೇಶ್. ಮುತ್ತುರಾಜ್ರನ್ನೇ ಆರಾಧಿಸಿ, ಕಲೆಯನ್ನು ಕರಗತ ಮಾಡಿಕೊಂಡ ಈಶ್ವರ್, ಇಂದು ಕನ್ನಡ ಚಿತ್ರರಂಗದಲ್ಲಿ (Kannada Film Industry) ತಮ್ಮದೇ ಹೆಸರು, ಅಭಿಮಾನಿ ಬಳಗವನ್ನು ಕಟ್ಟಿಕೊಂಡಿದ್ದಾರೆ. ಆದ್ರೆ, ಪ್ರತಿಯೊಬ್ಬರ ವಿದ್ಯಾಭ್ಯಾಸದ ಜೀವನದಲ್ಲಿ ಮಹತ್ವದ ತಿರುವು ಎಂದರೆ ಅದು ಹತ್ತನೇ ತರಗತಿ. ಜೀವನದ ದಿಕ್ಕನ್ನು ಸಂಪೂರ್ಣವಾಗಿ ಬದಲಿಸುವುದೇ ಈ ಎಸ್ಸೆಸ್ಸೆಲ್ಸಿ ಅಂಕಪಟ್ಟಿ. ಇಲ್ಲಿ ಮಾರ್ಕ್ಸ್ ಚೆನ್ನಾಗಿದ್ದರೇ ಓದು ಮುಂದುವರಿಯುತ್ತಿತ್ತು. ಇಲ್ಲದಿದ್ದರೇ ಯಾವುದಾದರೂ ಕೆಲಸ ಹುಡುಕಿಕೊಳ್ಳುವುದು ಅನಿರ್ವಾಯವಾಗಿತ್ತು. ಇದು ಅಂದಿನ ಕಾಲದಲ್ಲಿ ಇದ್ದಂತಹ ಪರಿಸ್ಥಿತಿ.
ಇದನ್ನೂ ಓದಿ: ಮಲಪ್ರಭಾ ಕಾರ್ಖಾನೆ ಅವ್ಯವಹಾರ ಸಿಬಿಐಗೆ ವಹಿಸಲಿ
ಹೀಗಿರುವಾಗಲೇ ಹೇಗೋ ಹತ್ತನೇ ತರಗತಿ ಎಕ್ಸಾಂ ಪಾಸ್ ಮಾಡಿದ ಜಗ್ಗೇಶ್ (Jaggesh) ಅವರು ಖುಷಿಯಲ್ಲಿದ್ದರೇ ಅವರ ತಂದೆ ಮಾತ್ರ ಅಂಕಪಟ್ಟಿಯಲ್ಲಿದ್ದ ಮಾರ್ಕ್ಸ್ ಕಂಡು ನಡುರಸ್ತೆಯಲ್ಲಿ ಓಡಾಡಿಸಿಕೊಂಡು ಬೂಟಿನಲ್ಲಿ ಹೊಡೆದಿದ್ದರಂತೆ. ಇದರಿಂದ ಮನನೊಂದ ಅವರು, ಆತ್ಮಹತ್ಯೆಗೂ ಯತ್ನಿಸಿದ್ದರಂತೆ. ಅಂದು ಸಾವಿಗೆ ಶರಣಾಗಿದ್ದರೆ, ಇಂದು ನೀವು ನನ್ನನ್ನು ಸತ್ತವರಲ್ಲಿ ಒಬ್ಬ ಎಂದು ನೋಡಬೇಕಿತ್ತು ಎಂದು ಸ್ವತಃ ಜಗ್ಗೇಶ್ ಅವರೇ ಟ್ವೀಟ್ನಲ್ಲಿ ತಿಳಿಸಿದ್ದರು. ಅಸಲಿಗೆ ಈ ಟ್ವೀಟ್ ಜತೆಗೆ ಅವರು ತಮ್ಮ ಎಸ್ಸೆಸ್ಸೆಲ್ಸಿ ಅಂಕಪಟ್ಟಿಯನ್ನು ಹಂಚಿಕೊಂಡಿದ್ದರು.
ಕನ್ನಡ- 150ಕ್ಕೆ 101 ಅಂಕ
ಇಂಗ್ಲಿಷ್- 100ಕ್ಕೆ 54 ಅಂಕ
ಹಿಂದಿ- 50ಕ್ಕೆ 20 ಅಂಕ
ಗಣಿತ- 100ಕ್ಕೆ 57
ಸಮಾಜ ವಿಜ್ಞಾನ- 100ಕ್ಕೆ 58
ಒಟ್ಟು ಅಂಕಗಳು= 600ಕ್ಕೆ 342