

ಮುಂಬೈ: ಬಾಲಿವುಡ್ ನಟಿ ಮನೀಶಾ ಕೊಯಿರಾಲ ಜೀವನದಲ್ಲಿ ಹಲವಾರು ಏರಿಳಿತಗಳನ್ನು ಕಂಡರೂ ಮನೀಶಾ ಧೈರ್ಯ ಕಳೆದುಕೊಳ್ಳಲ್ಲಿಲ್ಲ. ಎಲ್ಲಾ ಕಷ್ಟವನ್ನು ಎದುರಿಸಿದರು. ಬಾಲಿವುಡ್‌ನಲ್ಲಿ ಮಾತ್ರವಲ್ಲ ಈ ನಟಿ ಸೌತ್ ಸಿನಿಮಾದಲ್ಲೂ ಫೇಮಸ್ ಆಗಿದ್ದರು ಆದರೆ ಒಂದೇ ಒಂದು ಸಿನಿಮಾ ರಿಲೀಸ್ ಆದ ನಂತರ ಸೌತ್ ನಲ್ಲಿ ಅವರ ಕೆರಿಯರ್ ಹಾಗೂ ಕೆಲವು ವಿಚಾರಗಳಿಂದಾಗಿ ಇವರ ವೈಯಕ್ತಿಕ ಜೀವನ ಕೂಡಾ ಸುದ್ದಿಯಾಗಿತ್ತು.
ಬಾಲಿವುಡ್ ನಲ್ಲಿ ಅಫೇರ್ ಮತ್ತು ಬ್ರೇಕಪ್ ಸುದ್ದಿಗಳು ಸಾಮಾನ್ಯ. ಆದರೆ ಕೆಲ ತಾರೆಯರ ವೈಯುಕ್ತಿಕ ವಿಷಯಗಳು ಜಗತ್ತಿನ ಮುಂದೆ ಮುನ್ನೆಲೆಗೆ ಬಂದು ಸುದ್ದಿ ಮಾಡಿತ್ತು. 90ರ ದಶಕದಲ್ಲಿ ಸ್ಟಾರ್ ಹೀರೋಯಿನ್ ಆಗಿ ಸದ್ದು ಮಾಡಿದ್ದ ಮನೀಶಾ ಕೊಯಿರಾಲಾ ಮದುವೆಗೂ ಮುನ್ನ 12 ಜನರೊಂದಿಗೆ ಡೇಟ್ ಮಾಡಿದ್ದರು. ಆದರೆ ಮದುವೆಯಾದರೂ ಆ ಖುಷಿ ಕೆಲ ದಿನಗಳಿಗೆ ಮಾತ್ರ. ಪತಿಯಿಂದ ವಿಚ್ಛೇದನ ಪಡೆದ ಅವರು 53 ನೇ ವಯಸ್ಸಿನಲ್ಲಿ ಒಂಟಿಯಾಗಿ ವಾಸಿಸುತ್ತಿದ್ದಾರೆ.
1970 ರಲ್ಲಿ ನೇಪಾಳದಲ್ಲಿ ಜನಿಸಿದ ಮನಿಶಾ ಕೊಯಿರಾಲಾ 1991 ರಲ್ಲಿ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಬಾಲಿವುಡ್, ತಮಿಳು ಇಂಡಸ್ಟ್ರಿಯಲ್ಲೂ ಸ್ಟಾರ್ ನಟರ ಜತೆ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈ ನಟಿಗೆ ಚಿತ್ರರಂಗದಲ್ಲಿ ಒಳ್ಳೆಯ ಬೇಡಿಕೆ ಕೂಡಾ ಇತ್ತು. ಮನೀಶಾ ಕೊಯಿರಾಲಾ ಸಿನಿಮಾಗಳ ಜತೆ ಜತೆಗೆ ವೈಯಕ್ತಿಕ ಜೀವನವೂ ಸುದ್ದಿಯಲ್ಲಿದೆ.
ಮನಿಶಾ ಕೊಯಿರಾಲಾ ನೇಪಾಳಿ ಉದ್ಯಮಿ ಸಾಮ್ರಾಟ್ ದಹಲ್ ಅವರನ್ನು 2010ರಲ್ಲಿ ವಿವಾಹವಾದರು. ಆದರೆ ಅದೇನಾಯ್ತೋ ಗೊತ್ತಿಲ್ಲ... ದುರದೃಷ್ಟವಶಾತ್ 2 ವರ್ಷಗಳಲ್ಲಿ ವಿಚ್ಛೇದನ ಪಡೆದರು. ಉದ್ಯಮಿ ಸಾಮ್ರಾಟ್ ದಹಲ್ ಅವರನ್ನು ಮದುವೆಯಾಗುವ ಮೊದಲು, ಮನಿಶಾ ಕೊಯಿರಾಲಾ 11 ಜನರೊಂದಿಗೆ ಏಕಕಾಲದಲ್ಲಿ ಡೇಟಿಂಗ್ ನಡೆಸಿದ್ದರು. ಅವರು ತಮ್ಮ ಪಟ್ಟಿಯಲ್ಲಿ ನಟರು, ಉದ್ಯಮಿಗಳು ಮತ್ತು ರಾಯಭಾರಿಗಳೊಂದಿಗೆ ಡೇಟಿಂಗ್ ಮಾಡಿದ್ದಾರೆ. 2012ರಲ್ಲಿ ಪತಿಯಿಂದ ಬೇರ್ಪಟ್ಟ ಮನಿಷಾ ಸದ್ಯ 53ನೇ ವಯಸ್ಸಿನಲ್ಲಿ ಒಂಟಿ ಜೀವನ ನಡೆಸುತ್ತಿದ್ದಾರೆ.
ಮನಿಶಾ ಪ್ರಶಾಂತ್ ಚೌಧರಿ ಜತೆ ಡೇಟಿಂಗ್ ಆರಂಭಿಸಿದರು. ಇಬ್ಬರೂ ಗಂಭೀರ ಸಂಬಂಧವನ್ನು ಮುಂದುವರೆಸಿದರು. ಆದರೆ ಕೆಲವು ಕಾರಣಗಳಿಂದ ಈ ಸಂಬಂಧವು ಮುಂದುವರೆಯಲಿಲ್ಲ.
ಮನೀಶಾ ಕೊಯಿರಾಲಾ ಚಿತ್ರರಂಗ ಪ್ರವೇಶಿಸಿದಾಗ..ಅವರ ಹೆಸರು ಹೆಚ್ಚಾಗಿ ನಟ ವಿವೇಕ್ ಮುಶ್ರನ್ ಜತೆ ಸೇರಿಕೊಂಡಿತ್ತು. ಈ ಚಿತ್ರದ ಶೂಟಿಂಗ್ ವೇಳೆ ವಿವೇಕ್ ಮತ್ತು ಮನಿಷಾ ಆತ್ಮೀಯರಾದರು ಎಂದು ವರದಿಯಾಗಿದೆ. ಆದರೆ ಅವರ ಸಂಬಂಧವು ಬಹಳ ಬೇಗನೆ ಮುರಿದುಹೋಯಿತು. ಮನೀಶಾ ಖ್ಯಾತ ಹಿಂದಿ ಚಲನಚಿತ್ರ ನಟ ನಾನಾ ಪಾಟೇಕರ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವರದಿಗಳು ಬಂದವು. ನಾನಾ ಪಾಟೇಕರ್ ಬಹಿರಂಗವಾಗಿ ಸಂಬಂಧವನ್ನು ಒಪ್ಪಿಕೊಂಡರು, ಆದರೆ ಕೆಲವೇ ದಿನಗಳಲ್ಲಿ ಅವರ ಸಂಬಂಧ ಮುರಿದುಬಿತ್ತು. ನಾನಾ ಪಾಟೇಕರ್ ಜೊತೆ ಬ್ರೇಕ್ ಅಪ್ ಆದ ನಂತರ..ಮನೀಶಾ ಕೊಯಿರಾಲಾ ಡಿ.ಜೆ.ಹುಸೇನ್ ಅವರನ್ನು ಪ್ರೀತಿಸುತ್ತಿದ್ದರು. ಆದರೆ ಲಂಡನ್ ಮೂಲದ ನೈಜೀರಿಯಾದ ಉದ್ಯಮಿ ಸಿಸಿಲ್ ಆಂಥೋನಿ ಮನೀಶಾ ಜೀವನದಲ್ಲಿ ಬಂದಾಗ ಅವರು ಬೇರ್ಪಟ್ಟರು.ಮನಿಷಾ ಅವರ ಹಲವಾರು ವೈಯಕ್ತಿಕ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದಾಗ ಸೆಸಿಲ್ ಆಂಟನಿ ಜೊತೆಗೆ ಮನಿಷಾ ಹೆಸರು ಬೆಳಕಿಗೆ ಬಂದಿತು. ಆದರೆ ಈ ಸಂಬಂಧ ಕೂಡ ಶೀಘ್ರದಲ್ಲೇ ಕೊನೆಗೊಂಡಿತು. ಮನೀಶಾ ಕೊಯಿರಾಲಾ ಸೆಸಿಲ್ ಆಂಥೋನಿ ಜೊತೆಗಿನ ಬೇರೆಯಾದ ನಂತರ ನಟ ಆರ್ಯನ್ ವೈದ್ ಜತೆ ಡೇಟ್ ಮಾಡಿದರು. ಆ ನಂತರ ಅವರೂ ಬೇರ್ಪಟ್ಟರು.
ಮನಿಶಾ ನಮಹ್ ನೇಪಾಳದ ಆಸ್ಟ್ರೇಲಿಯಾದ ರಾಯಭಾರಿ ಕ್ರಿಸ್ಪಿನ್ ಕಾನ್ರಾಯ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದರು ಆದರೆ ಅವನೊಂದಿಗೆ ಮುರಿದುಬಿತ್ತು. ಉದ್ಯಮಿ ಅಜೀಂ ಪ್ರೇಮ್‌ಜಿ ಅವರ ಪುತ್ರ ತಾರಿಕ್ ಪ್ರೇಮ್‌ಜಿ, ಮಾಡೆಲ್ ರಾಜೀವ್ ಮೂಲಚಂದಾನಿ, ಸಂಗೀತ ಸಂಯೋಜಕ ಸಂದೀಪ್ ಚೌತಾ ಮತ್ತು ಕ್ರಿಸ್ಟೋಫರ್ ಡೋರಿಸ್ ಅವರೊಂದಿಗೆ ಮನೀಶಾ ಕೊಯಿರಾಲಾ ಡೇಟಿಂಗ್ ಮಾಡಿದ್ದಾರೆ. ಆದರೆ ಇವರ ಯಾರೊಂದಿಗೂ ಸಂಬಂಧ ಮಾತ್ರ ಕೊನೆವರೆಗೂ ಉಳಿಯಲಿಲ್ಲ.
ಮನಿಶಾ ನೇಪಾಳಿ ಚಿತ್ರ 'ಫೇರಿ ಭೆಟೌಲಾ' ಮೂಲಕ ತೆರೆಗೆ ಪಾದಾರ್ಪಣೆ ಮಾಡಿದರು.ನಂತರ ಅವರು ಹಿಂದಿ ಚಲನಚಿತ್ರ 'ಸೌದಾಗರ್'ಗೆ ನಾಯಕಿಯಾದರು. ಇದಕ್ಕಾಗಿ ಅವರು ಅತ್ಯುತ್ತಮ ಮಹಿಳಾ ಚೊಚ್ಚಲ ನಟಿ ಪ್ರಶಸ್ತಿಯನ್ನು ಪಡೆದರು. 1991ರಲ್ಲಿ 'ಸೌದಾಗರ್' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ನಂತರ, ಮನೀಶಾ ಕೊಯಿರಾಲಾ ಅನೇಕ ಜನಪ್ರಿಯ ಹಿಂದಿ, ತಮಿಳು, ಮಲಯಾಳಂ, ತೆಲುಗು, ಬೆಂಗಾಲಿ ಮತ್ತು ಇತರ ಭಾಷೆಯ ಚಲನಚಿತ್ರಗಳಲ್ಲಿ ಕೆಲಸ ಮಾಡಿದರು.
ಮನಿಶಾ ಅವರ 'ಬಾಬಾ' ಚಿತ್ರದಿಂದ ಸಾಕಷ್ಟು ನಿರೀಕ್ಷೆಗಳಿದ್ದವು, ಆದರೆ ಅದು ಬಾಕ್ಸ್ ಆಫೀಸ್‌ನಲ್ಲಿ ವಿಫಲವಾದ ನಂತರ, ದಕ್ಷಿಣ ಭಾರತದ ಚಿತ್ರರಂಗದಿಂದ ಅವರಿಗೆ ಆಫರ್‌ಗಳು ಕಡಿಮೆಯಾದವು. ಆ ದಿನಗಳಲ್ಲಿ ಅದು ತುಂಬಾ ಕೆಟ್ಟದಾಗಿ ಸೋತಿತು. ಮತ್ತು ಅದು ವೃತ್ತಿ ಜೀವನದ ದೊಡ್ಡ ದುರಂತವಾಗಿತ್ತು. ಚಿತ್ರದಿಂದ ಸಾಕಷ್ಟು ನಿರೀಕ್ಷೆಗಳಿದ್ದವು. ಅದು ಸೋತಾಗ, ನಾನು ದಕ್ಷಿಣದ ಚಲನಚಿತ್ರಗಳಲ್ಲಿ ಅವಕಾಶಗಳನ್ನು ಕಳೆದುಕೊಂಡೆಬ ಎಂದು ನಟಿ ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.