More

    ಕೈನೋವಿನಲ್ಲೂ ಅಂತಿಮ ದರ್ಶನಕ್ಕೆ ಬಂದ ಡಿಬಾಸ್; ದರ್ಶನ್ ಕೈ ಹಿಡಿದು ಬಿಕ್ಕಿ ಬಿಕ್ಕಿ ಅತ್ತ ಸೌಂದರ್ಯ ಜಗದೀಶ್ ಪತ್ನಿ

    ಬೆಂಗಳೂರು:  ಸ್ಯಾಂಡಲ್​​ವುಡ್​ನ ಖ್ಯಾತ ನಿರ್ಮಾಪಕ ಹಾಗೂ ಉದ್ಯಮಿ ಆಗಿರು ಸೌಂದರ್ಯ ಜಗದೀಶ್​​ ಅವರು ನಿನ್ನೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಹಲವು ಸೆಲೆಬ್ರಿಟಿಗಳು ಆಗಮಿಸಿ ಅಂತಿಮ ದರ್ಶನ ಪಡೆದಿದ್ದಾರೆ.

    ನಟ ದರ್ಶನ್​ಗೆ ಸೌಂದರ್ಯ ಜಗದೀಶ್ ಆಪ್ತರಾಗಿದ್ದರು. ಕೈನೋವಿನ ಸಂದರ್ಭದಲ್ಲಿಯೂ ನಟ ದರ್ಶನ್ ಆಪ್ತ ಸ್ನೇಹಿತ ಸೌಂದರ್ಯ ಜಗದೀಶ್ ಅಂತಿಮ ದರ್ಶನ ಪಡೆದಿದ್ದಾರೆ.

    ಹಲವು ವರ್ಷಗಳ ಸ್ನೇಹಿತರಾದ ಜಗದೀಶ್‌ಗೆ ಅಂತಿಮ ದರ್ಶನ ಪಡೆಯಲು ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಆಗಮಿಸಿದ್ದಾರೆ.  ಈ ವೇಳೆ ದರ್ಶನ್ ಅವರ ಕೈ ಹಿಡಿದು ಸೌಂದರ್ಯ ಜಗದೀಶ್ ಪತ್ನಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಈ ಸಂದರ್ಭದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಡೆವಿಲ್’ ಶೂಟಿಂಗ್‌ನಲ್ಲಿ ಕೈಗೆ ಏಟು ಮಾಡಿಕೊಂಡಿದ್ದರ ಹಿನ್ನಲೆ ಇತ್ತೀಚೆಗೆ ದರ್ಶನ್ ಎಡಗೈಗೆ ಸರ್ಜರಿ ಆಗಿತ್ತು. ಕೈನೋವಿನ ಸಂದರ್ಭದಲ್ಲೂ ಜಗದೀಶ್ ಅಂತಿಮ ದರ್ಶನಕ್ಕೆ ದರ್ಶನ್ ಆಗಮಿಸಿ ಕುಟುಂಬದವರಿಗೆ ಸಂತೈಸಿದ್ದಾರೆ.

    ಪತ್ನಿ ರೇಖಾ ಜಗದೀಶ್  ಮಗ ನಟ ಸ್ನೇಹಿತ್, ಓರ್ವ ಪುತ್ರಿ ಸೇರಿ ಅಪಾರ ಬಂಧು ಬಳಗದವರನ್ನು, ಚಿತ್ರರಂಗದ ಸ್ನೇಹಿತರನ್ನು ಅಗಲಿದ್ದಾರೆ. ಚಿತ್ರ ನಿರ್ಮಾಣದ ಜೊತೆಗೆ ಉದ್ಯಮಿಯೂ ಆಗಿರುವ ಅವರು  ಅಪ್ಪು ಮತ್ತು ಪಪ್ಪು, ಮಸ್ತ್ ಮಜಾ ಮಾಡಿ, ರಾಮ್‌ಲೀಲಾ, ಸ್ನೇಹಿತರು  ಮುಂತಾದ ಜನಪ್ರಿಯ ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ.

    ಬೆಂಗಳೂರಿನಲ್ಲಿ ಜೆಟ್​ಲಾಗ್​ ಪಬ್​ ಹೊಂದಿದ್ದ ಜಗದೀಶ್​ ಅವರು ಬಿಲ್ಡರ್​ ಕೂಡ ಆಗಿದ್ದರು. ‘ಚಾಲೆಂಜಿಂಗ್​ ಸ್ಟಾರ್​’ ದರ್ಶನ್​, ರಾಕ್​ಲೈನ್​ ವೆಂಕಟೇಶ್​ ಮುಂತಾದ ಸೆಲೆಬ್ರಿಟಿಗಳ ಜತೆ ಆಪ್ತ ಒಡನಾಟ ಹೊಂದಿದ್ದರು. ಆದರೆ ಇವರು ಸಾವಿಗೆ ಕಾರಣವೇನು ಎಂಬುದು ಇನ್ನೂ ನಿಗೂಢವಾಗಿಯೆ ಉಳಿದಿದೆ.  ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ತಾಲೂಕಿನ ಹಿರಿಸಾವೆ ಗ್ರಾಮದಲ್ಲಿ ಸೌಂದರ್ಯ ಜಗದೀಶ್ ಅಂತ್ಯಕ್ರಿಯೆ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts