ಕಳೆದ 10 ವರ್ಷಗಳಿಂದ ಇದನ್ನು ಕೇಳ್ತಿದ್ದೀನಿ..... ಕಹಿಸತ್ಯ ಬಿಚ್ಚಿಟ್ಟ ನಟಿ ಚಾಂದಿನಿ ಚೌಧರಿ

WhatsApp Image 2024-03-21 at 8.25.49 PM
Published on

ಆಂಧ್ರಪ್ರದೇಶ: ತಮ್ಮ ಸಿಂಪಲ್ ಲುಕ್​, ಬೋಲ್ಡ್​​ ನಟನೆಗಾಗಿಯೇ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿರುವ ತೆಲುಗು ನಟಿ ಚಾಂದಿನಿ ಚೌಧರಿ ಬಗ್ಗೆ ಹೆಚ್ಚೇನು ಹೇಳಬೇಕಾಗಿಲ್ಲ. ತುಂಬಾ ಸಿಂಪಲ್. ಹೋಮ್ಲಿ ಗರ್ಲ್​ ಎಂದೇ ಕರೆಸಿಕೊಳ್ಳುವ ಈ ನಟಿ, ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಲ್ಲಿದ್ದಾರೆ. ಅದು ಆಕೆ ನೀಡಿದ ಒಂದು ಹೇಳಿಕೆಯಿಂದ!

ಕೇತುಗಾಡು ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ನಾಯಕಿಯಾಗಿ ಪಾದಾರ್ಪಣೆ ಮಾಡಿದ ಚೌಧರಿ, 'ಕುಂದನಪು ಬೊಮ್ಮೆ', 'ಸಮಂತಕಮಣಿ', 'ಹೌರಾ ಬ್ರಿಡ್ಜ್', 'ಮನು', 'ಕಲರ್ ಫೋಟೋ', 'ಬೊಂಬಾಟ್', 'ಸೂಪರ್ ಓವರ್', 'ಸಮ್ಮತಮೆ' ಚಿತ್ರಗಳಲ್ಲಿ ನಟಿಸಿ ತೆಲುಗು ಚಿತ್ರ ಪ್ರೇಕ್ಷಕರ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ. ಯಾವುದೇ ದೃಶ್ಯಗಳಲ್ಲಿ ನಟಿಸಿದರು ಅದರಲ್ಲಿ ತನ್ನದೊಂದು ವಿಶೇಷತೆ ಗಳಿಸುವ ಚಾಂದಿನಿ, ಇತ್ತೀಚೆಗೆ ತೆಲುಗು ಚಿತ್ರರಂಗಕ್ಕೆ ಸಂಬಂಧಿಸಿದಂತೆ ಕೆಲವು ಆಘಾತಕಾರಿ ಕೆಮೆಂಟ್​ಗಳನ್ನು ಮಾಡಿದರು.

ಚಿತ್ರರಂಗದಲ್ಲಿ ತೆಲುಗು ನಟಿಯರಿಗೆ ಹೆಚ್ಚು ಮನ್ನಣೆ ಸಿಕ್ತಿಲ್ಲ ಎಂದು ಬಹಿರಂಗವಾಗಿ ಹೇಳಿಕೆ ನೀಡಿದರು. ತಾವು ಅಭಿನಯಿಸಿದ 'ಗಾಮಿ' ಚಿತ್ರದ ಬಿಡುಗಡೆ ಸಮಯದಲ್ಲಿ ನಡೆದ ಸಂದರ್ಶನದಲ್ಲಿ ಮಾತನಾಡಿದ ಚೌಧರಿ, "ತೆಲುಗು ಹುಡುಗಿಯರು ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿಲ್ಲ ಎಂಬುದು ಬೇಸರದ ವಿಷಯ. ಅದರಲ್ಲೂ ಕಳೆದ 10 ವರ್ಷಗಳಿಂದ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿಲ್ಲ ಎಂಬ ಸುದ್ದಿ ಕೇಳಿ ಬರುತ್ತಿದೆ" ಎಂದರು.

"ಈ ಸುದ್ದಿ ನಿಜಕ್ಕೂ ದುರದೃಷ್ಟಕರ. ಆದರೆ ಇಷ್ಟು ದಿನಗಳಲ್ಲಿ ತೆಲುಗಿನ ಹುಡುಗಿಯೊಬ್ಬಳಿಗೆ ಒಳ್ಳೆಯ ಮನ್ನಣೆ ಸಿಕ್ಕಿದೆ. ನಾಯಕಿಯಾಗಿಯೂ ಒಳ್ಳೆಯ ಚಿತ್ರಗಳಲ್ಲಿ ಅವಕಾಶಗಳು ಸಿಗುತ್ತಿವೆ" ಎಂದರು. ಅದು ಬೇರಾರು ಅಲ್ಲ 'ಬೇಬಿ' ಚಿತ್ರದ ಮೂಲಕ ಸಂಚಲನ ಮೂಡಿಸಿದ ನಟಿ ವೈಷ್ಣವಿ ಚೈತನ್ಯ. ಸಿಂಪಲ್ ಲುಕ್​ನಲ್ಲಿ ಹುಡುಗರ ಮನಗೆದ್ದ ವೈಷ್ಣವಿ, ಈ ಹಿಂದೆ ಕಿರುಚಿತ್ರಗಳಲ್ಲಿ ನಟಿಸಿ ಸೈಎನಿಸಿಕೊಂಡಿರು. ಬೇಬಿ ಚಿತ್ರದಲ್ಲಿನ ನೈಜ ನಟನೆಗೆ ಸಿನಿಪ್ರೇಕ್ಷಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು. ಈಗ ನಾಯಕಿಯಾಗಿ ಜನಮನ್ನಣೆ ಗಳಿಸಿ ಹಲವು ಚಿತ್ರಗಳಲ್ಲಿ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ.

"ತೆಲುಗು ಹುಡುಗಿಗೆ ನಾಯಕಿಯಾಗಿ ಮನ್ನಣೆ ಸಿಕ್ಕಿದ್ದು ನಿಜಕ್ಕೂ ಖುಷಿ ತಂದಿದೆ. ಅದರಲ್ಲೂ ಸಿನಿಮಾ ಕ್ಷೇತ್ರದಲ್ಲಿ ಈಗ ಒಳ್ಳೆಯ ಅವಕಾಶಗಳು ಬರುತ್ತಿವೆ. ವೈಷ್ಣವಿ ಚೈತನ್ಯ ನಾಯಕಿಯಾಗಿ ಗುರುತಿಸಿಕೊಳ್ಳುತ್ತಿರುವುದು ನನಗೆ ತುಂಬಾ ಖುಷಿ ತಂದಿದೆ" ಎಂದಿದ್ದಾರೆ ಚಾಂದಿನಿ ಚೌಧರಿ,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net