ಪ್ರೀತಿ ಹೆಸರಲ್ಲಿ ಹಾಸಿಗೆಗೆ ಕರೆದವನ ನಂಬಿ ದುರಂತ ಅಂತ್ಯ ಕಂಡ ನಟಿ ಚಂದನಾ; ದಿನೇಶ್​ಗೆ ಶುರುವಾಗಿತ್ತು ಅನುಮಾನ !

Dinesh Chandana 1 June 20
Published on

ಬೆಂಗಳೂರು: ಪ್ರೀತಿಸುತ್ತೇನೆ ಎಂದವನ ನಂಬಿ ಮನಸು, ಹಣ ಕೊನೆಗೆ ದೇಹವನ್ನೂ ಅವನಿಗೆ ಕೊಟ್ಟು ದುರಂತ ಸಾವಿಗೀಡಾಗಿದ್ದಾರೆ ನಟಿ ಚಂದನಾ.

ದಿನೇಶ್​ ಹಾಗೂ ಚಂದನಾ ಅವರದ್ದು 5ವರ್ಷದ ಪ್ರೀತಿ. ಕಳೆದ 7ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಚಂದನಾ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಹಾಗೇ, ಚಿತ್ರರಂಗಕ್ಕೆ ಪ್ರವೇಶ ಮಾಡಲು ಪ್ರಯತ್ನ ಪಡುತ್ತಿದ್ದಳು. ಹಲವು ಜಾಹೀರಾತುಗಳಲ್ಲಿ ನಿರೂಪಕಿಯಾಗಿಯೂ ಕೆಲಸ ಮಾಡಿದ್ದರು. ಅಂತೂ ಅವರ ಆಸೆ ಫಲಕಂಡು, ಕ್ವಾರ್ಟರ್​ ಲೈಫ್ ಎನ್ನುವ ಚಲನಚಿತ್ರದಲ್ಲಿ ಪಾತ್ರ ನಿರ್ವಹಣೆಯನ್ನೂ ಮಾಡಿದ್ದಾರೆ. ಈ ಚಿತ್ರ ಇನ್ನೂ ತೆರೆಕಂಡಿಲ್ಲ.

ಇಷ್ಟೆಲ್ಲದರ ಮಧ್ಯೆ ತಾವು ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿಯ ಉದ್ಯೋಗಿ ದಿನೇಶ್​ ಎಂಬುವನ ಜತೆ 5ವರ್ಷಗಳ ಹಿಂದೆಯೇ ಪ್ರೀತಿಯಲ್ಲಿ ಬಿದ್ದಿದ್ದರು. ಮೊದಲು ಶುರುವಾದ ಸ್ನೇಹ, ಪ್ರೀತಿಗೆ ತಿರುಗಿ ಅದು ಹಾಸಿಗೆಯವರೆಗೂ ತಲುಪಿತ್ತು. ನಾನು ಯಾವತ್ತೂ ಕೈಬಿಡುವುದಿಲ್ಲ ಎಂದು ದಿನೇಶ್​ ಕೂಡ ಆಕೆಗೆ ಮಾತುಕೊಟ್ಟಿದ್ದ.

ಆದರೆ ದಿನೇಶ್​ಗೆ ಇತ್ತೀಚೆಗೆ ಚಂದನಾ ನಡತೆಯ ಬಗ್ಗೆ ಅನುಮಾನ ಶುರುವಾಗಿತ್ತು. ಇದೇ ಕಾರಣಕ್ಕೆ ಇಬ್ಬರ ಮಧ್ಯೆಯೂ ಆಗಾಗ ಜಗಳ ಆಗುತ್ತಿತ್ತು. ನಾನು ನಿನ್ನ ಮದುವೆಯಾಗುವುದಿಲ್ಲ ಎಂದು ದಿನೇಶ್​ ನಿರಾಕರಿಸಿದ್ದ.

ಇವರಿಬ್ಬರ ಪ್ರೀತಿಯ ವಿಚಾರ ಮನೆಯಲ್ಲೂ ಗೊತ್ತಿತ್ತು. ದಿನೇಶ್​ ಮದುವೆಯಾಗಲು ನಿರಾಕರಿಸುತ್ತಿದ್ದಂತೆ ಚಂದನಾ ಹಾಗೂ ಆಕೆಯ ಮನೆಯವರು ಹೋಗಿ ದಿನೇಶ್​ನನ್ನು ಕೇಳಿದ್ದಾರೆ. ಅಲ್ಲದೆ, ದಿನೇಶ್​ನ ತಂದೆ ಲೋಕಪ್ಪ ಗೌಡ, ತಾಯಿ ಗಾಯತ್ರಿ, ಚಿಕ್ಕಮ್ಮ ಶೈಲಾ, ಸೋದರಮಾವ ದಯಾನಂದ ಅವರನ್ನು ಕೇಳಿದ್ದಕ್ಕೆ, ಅವರೂ ಕೂಡ ನಿರಾಕರಿಸಿದ್ದರು. ಚಂದನಾ ಸತ್ತರೂ ಸರಿ, ದಿನೇಶ್​ಗೆ ತಂದುಕೊಳ್ಳುವುದಿಲ್ಲ ಎಂದು ಹೇಳಿದ್ದರು.

ಇದೆಲ್ಲದರಿಂದ ಮನನೊಂದ ಚಂದನಾ ಸೆಲ್ಫಿ ವಿಡಿಯೋ ಮಾಡಿ, ಅಳುತ್ತ ವಿಷ ಸೇವನೆ ಮಾಡಿದ್ದಾಳೆ. ಅಸ್ವಸ್ಥಳಾದ ಆಕೆಯನ್ನು ಅಕ್ಕಪಕ್ಕದ ಮನೆಯವರು ಆಸ್ಪತ್ರೆಗೆ ದಾಖಲು ಮಾಡಿದ್ದರೂ ಚಿಕಿತ್ಸೆ ಫಲಿಸಲಿಲ್ಲ.

ಇದೀಗ ದಿನೇಶ್​ ನಾಪತ್ತೆಯಾಗಿದ್ದು ಪೊಲೀಸರು ಹುಡುಕಾಟ ನಡೆಸಿದ್ದಾರೆ. ಮಗಳಿಗೆ ನ್ಯಾಯ ಒದಗಿಸಿಕೊಡಿ ಎಂದು ಆಕೆಯ ತಾಯಿ ಅಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net