More

    ಕರೊನಾಕ್ಕಿಂತಲೂ ಭೀಕರ ವೈರಸ್​ ಜಗತ್ತನ್ನು ಕಾಡಲಿದೆಯಂತೆ! ಏನೆನ್ನುತ್ತಾರೆ ವಿಜ್ಞಾನಿಗಳು?

    ಸಿಡ್ನಿ: ಕರೊನಾ ವೈರಸ್​ನಿಂದ ಇಡೀ ವಿಶ್ವವೇ ತತ್ತರಿಸಿದೆ. ಕೆಲವು ದೇಶಗಳಂತೂ ಈ ವೈರಸ್​ನಿಂದ ಹೊರಬರಲಾಗದೇ ಕೈಚೆಲ್ಲಿ ಕುಳಿತುಕೊಂಡಿದ್ದರೆ, ಭಾರತದಂಥ ದೇಶಗಳು ಇದರ ವಿರುದ್ಧದ ಹೋರಾಟಕ್ಕೆ ಹೊಸ ಹೊಸ ತಂತ್ರಗಾರಿಕೆಯನ್ನು ರೂಪಿಸುತ್ತಲೇ ಇದೆ.

    ಏನೇ ಮಾಡಿದರೂ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇರುವ ಈ ಸೋಂಕು ದೊಡ್ಡ ತಲೆನೋವಾಗಿ ಪರಿಣಮಿಸಿರುವ ಬೆನ್ನಲ್ಲೇ ವಿಜ್ಞಾನಿಗಳು ಅತ್ಯಂತ ಭಯ ಹುಟ್ಟಿರುವ ವರದಿಯನ್ನು ಇದೀಗ ನೀಡಿದ್ದಾರೆ. ಅದೇನೆಂದರೆ, ಕರೊನಾ ವೈರಸ್​ಗಿಂತಲೂ ಭೀಕರ ವೈರಸ್​ ಜಗತ್ತನ್ನು ಆವರಿಸಲಿದ್ದು, ಅದು ವಿಶ್ವದ ಅರ್ಧದಷ್ಟು ಜನರ ಪ್ರಾಣಕ್ಕೆ ಕುತ್ತು ತರುತ್ತದೆ ಎಂಬ ವರದಿಯನ್ನು ಅವರು ನೀಡಿದ್ದಾರೆ!

    ಇದನ್ನೂ ಓದಿ:  ರಾಷ್ಟ್ರ ರಾಜಧಾನಿ ಗಡಿ ಕ್ಲೋಸ್​: ಸದ್ಯ ದೆಹಲಿಗೆ ಪ್ರವೇಶವಿಲ್ಲ ಎಂದ ಸಿಎಂ ಕೇಜ್ರಿವಾಲ್​

    ವಿಜ್ಞಾನಿಗಳು ಹೇಳಹೊರಟಿರುವ ಈ ವೈರಸ್​ ಶುರುವಾಗುವುದು ಕೋಳಿ ಸಾಕಾಣಿಕೆ ಕೇಂದ್ರದಿಂದ ಎಂಬುದು. ಅಂದರೆ ಇತ್ತೀಚೆಗೆ ಕೋಳಿ ಸಾಕಾಣಿಕೆ ಕೇಂದ್ರವು ಎಗ್ಗಿಲ್ಲದೇ ಶುರುವಾಗಿದ್ದು, ಇದೇ ರೀತಿ ಮುಂದುವರೆದರೆ, ವಿಶ್ವಕ್ಕೆ ವಿಶ್ವವೇ ವೈರಸ್​ನಿಂದ ನಲುಗಿ ಹೋಗಲಿದೆ ಎಂಬ ಎಚ್ಚರಿಕೆಯನ್ನು ಸಂಶೋಧನೆಗಳ ಮೂಲಕ ಅವರು ತಿಳಿಸಿದ್ದಾರೆ.

    ಇಂಥ ಕೋಳಿ ಸಾಕಾಣಿಕೆ ಕೇಂದ್ರದಿಂದ ಅಪೋಕ್ಯಾಲಿಪ್ಸ್ ಎಂಬ ವೈರಸ್ ಹುಟ್ಟಿಕೊಳ್ಳಲಿದ್ದು, ಇದು ಕರೊನಾಕ್ಕಿಂತಲೂ ಅತ್ಯಧಿಕ ಪಟ್ಟು ಅಪಾಯಕಾರಿ ಎಂದಿದ್ದಾರೆ ಸಂಶೋಧಕ ಡಾ.ವೈಕೆಲ್​ ಗ್ರೆಗರ್​.

    ಇದನ್ನು ಅವರು ತಮ್ಮ ‘ಹೌ ಟು ಸರ್ವೈವ್ ಎ ಅಪೆಡೆಮಿಕ್​ (ಸಾಂಕ್ರಾಮಿಕ ರೋಗದಿಂದ ಬದುಕುಳಿಯುವುದು ಹೇಗೆ) ಎಂಬ ಪುಸ್ತಕದಲ್ಲಿ ಈ ವಿಷಯವನ್ನು ತಿಳಿಸಿದ್ದಾರೆ. ಏರುಗತಿಯಲ್ಲಿ ಸಾಗುತ್ತಿರುವ ಕೋಳಿ ಸಾಕಾಣಿಕೆ ಕೇಂದ್ರವನ್ನು ಗಮನಿಸಿ ಅವರು ಈ ವಿಷಯ ತಿಳಿಸಿದ್ದಾರೆ. ಮಾಂಸವನ್ನು ತಿನ್ನುವುದರಿಂದ ಇಡೀ ವಿಶ್ವ ಸಾಂಕ್ರಾಮಿಕ ರೋಗಕ್ಕೆ ಗುರಿಯಾಗಿಸುತ್ತದೆ ಎಂದು ಅವರು ಹೇಳಿದ್ದಾರೆ. ಇದು ಕರೊನಾಕ್ಕಿಂತಲೂ ಅತ್ಯಂತ ಶೀಘ್ರವಾಗಿ ಹರಡಲಿದೆ ಎಂದೂ ಅವರು ಎಚ್ಚರಿಸಿದ್ದಾರೆ.

    ಇದನ್ನೂ ಓದಿ:  VIDEO: ಸೋನು ಅಂಕಲ್​… ಅಮ್ಮನನ್ನು ಅಜ್ಜಿ ಮನೆಗೆ ಕಳಿಸ್ತೀರಾ? ಪುಟಾಣಿ ಪ್ರಶ್ನೆಗೆ ನಟ ಕಂಗಾಲು

    ಒಂದು ವೇಳೆ ನಾವು ಇದರಿಂದ ಹೊರಕ್ಕೆ ಬರಲು ಇಚ್ಛಿಸುವುದಾದರೆ, ಕೋಳಿಗಳನ್ನು ಸಾಕುವ ವಿಧಾನವನ್ನು ನಾವು ಸುಧಾರಿಸಬೇಕಾಗಿದೆ. ಆರೋಗ್ಯಕರ ವಾತಾವರಣದಲ್ಲಿ ಅವುಗಳ ಸಾಕಣೆ ಮಾಡಬೇಕಾಗಿದೆ. ರೋಗಾಣುಗಳು ಹರಡದಂತೆ ಸೂಕ್ತವಾದ ವಾತಾವರಣ ಕಲ್ಪಿಸಬೇಕಾದ ಅಗತ್ಯವಿದೆ ಎಂದರು.

    ಇದಕ್ಕೆ ಕಾರಣ ನೀಡಿರುವ ಅವರು, ಕೋಳಿಗಳು ಒಟ್ಟೊಟ್ಟಿಗೆ ಇಟ್ಟಾದ ಅವುಗಳಿಗೆ ಉಸಿರಾಟದ ಸಮಸ್ಯೆ ಉಂಟಾಗುತ್ತದೆ. ಆಗ ಶ್ವಾಸಕೋಶದ ಒಳಪದರದಲ್ಲಿ ಅಡಗಿರುವ ಸಾಂಕ್ರಾಮಿಕ ಕಣಗಳು ಹೊರಕ್ಕೆ ಬಂದು ಅವು ಅತಿ ಶೀಘ್ರದಲ್ಲಿ ಎಲ್ಲೆಡೆ ಪಸರಿಸುತ್ತವೆ ಎಂದಿದ್ದಾರೆ.

    ಕರೊನಾ ವೈರಸ್​ ಹೆಂಡತಿ ಇದ್ದಂತೆ ಎಂದ ಸಚಿವ: ಆಮೇಲೇನಾಯ್ತು ನೀವೇ ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts