VIDEO: ದೈಹಿಕವಾಗಿ ಬಳಸಿಕೊಂಡು, ಮದುವೆಯಾಗಲ್ಲ ಎಂದ ಪ್ರಿಯಕರ; ಸೆಲ್ಫಿ ವಿಡಿಯೋ ಮಾಡಿ ನಟಿ ಆತ್ಮಹತ್ಯೆ

Lady
Published on

ಬೆಂಗಳೂರು: ಪ್ರಿಯಕರನಿಂದ ಮೋಸ ಹೋದ ಕಿರುತೆರೆ ನಟಿಯೋರ್ವರು ಸೆಲ್ಫಿ ವಿಡಿಯೋ ಮಾಡಿ, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾವರೆಕೆರೆಯ ಕೃಷ್ಣಮೂರ್ತಿ ಲೇಔಟ್​ನಲ್ಲಿ ನಡೆದಿದೆ.

ಚಂದನಾ (29) ಮೃತ ಸ್ಯಾಂಡಲ್​ವುಡ್​ ನಟಿ. ತನ್ನ ಸಾವಿಗೆ ಪ್ರಿಯತಮನೇ ಕಾರಣ ಎಂದು ವಿಡಿಯೋದಲ್ಲಿ ಆರೋಪಿಸಿದ್ದಾಳೆ. ನನ್ನದೇನೂ ಮಿಸ್ಟೇಕ್​ ಇಲ್ಲ. ಆದರೆ ನಾನಿವತ್ತು ಸಾಯಲು ನೀನೇ ಕಾರಣ ಎಂದು ವಿಡಿಯೋದಲ್ಲಿ ಹೇಳಿದ್ದನ್ನು ಕೇಳಬಹುದು. 

ಚಂದನಾ ಹಾಗೂ ದಿನೇಶ್​ ಐದು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಬ್ಬರ ಮಧ್ಯೆ ದೈಹಿಕ ಸಂಪರ್ಕವೂ ಇತ್ತು. ಚಂದನಾ ಒಮ್ಮೆ ಗರ್ಭಿಣಿಯಾಗಿದ್ದಳು. ಆಗ ದಿನೇಶ್​ ಆಕೆಗೆ ಗರ್ಭಪಾತ ಮಾಡಿಸಿದ್ದ. ಮದುವೆಯಾಗುವುದಾಗಿ ಹೇಳಿ 5 ಲಕ್ಷ ರೂಪಾಯಿ ಪಡೆದಿದ್ದ. ಬಳಿಕ, ಮದುವೆಗೆ ನಿರಾಕರಿಸಿದ್ದಲ್ಲದೆ, ಮಾನಸಿಕವಾಗಿ ಹಿಂಸಿಸುತ್ತಿದ್ದ. ಇದೇ ಕಾರಣದಿಂದ ನೊಂದ ಚಂದಾನಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪ ಕೇಳಿಬಂದಿದೆ. ಮೇ 28ರಂದೇ ಚಂದನಾ ಆತ್ಮಹತ್ಯೆ ಮಾಡಿಕೊಂಡಿದ್ದು, ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ನಟಿಯ ಸೆಲ್ಫಿ ವಿಡಿಯೋ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net