'ಸಪ್ತ ಸಾಗರದಾಚೆ ಎಲ್ಲೋ' ಚಿತ್ರಕ್ಕೆ ಅವಕಾಶ ಸಿಕ್ಕಿದ್ದು ಒಂದು ಸಂದೇಶದಿಂದ: ನಟಿ ಚೈತ್ರಾ ಜೆ.ಆಚಾರ್​

Untitled design (42)
Published on

ಬೆಂಗಳೂರು: ವಿಜಯವಾಣಿ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಕನ್ನಡ ಚಿತ್ರರಂಗದ ಯವನಟಿ ಚೈತ್ರಾ ಜೆ.ಆಚಾರ್, ತಮಗೆ 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದಲ್ಲಿ ನಟಿಸುವ ಅವಕಾಶ ಹೇಗೆ ಲಭಿಸಿತು ಎಂಬುದರ ಬಗ್ಗೆ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ.

"ಈ ಚಿತ್ರದ ಒಂದು ತಂಡವೇ ಬಹಳ ಮಜಾವಾಗಿತ್ತು. ಸಪ್ತ ಸಾಗರದಾಚೆ ಎಲ್ಲೋ ನನಗೆ ಬಹಳ ಇಷ್ಟವಾದ ಟೀಂ. ಹೇಮಂತ್ ರಾವ್​​ ಅವರೊಟ್ಟಿಗೆ ಕೆಲಸ ಮಾಡಬೇಕು ಎಂಬ ಹಂಬಲ ಹಲವು ದಿನಗಳಿಂದ ಇತ್ತು. ಕನ್ನಡ ಚಿತ್ರರಂಗಕ್ಕೆ ನಾನು ನಟಿಸಲು ಪ್ರಾರಂಭಿಸಿದ ದಿನದಿಂದಲೂ ಅವರೊಟ್ಟಿಗೆ ಚಿತ್ರ ಮಾಡಬೇಕು ಎಂದು ಹೇಳಿಕೊಂಡು ಬಂದಿದ್ದೆ. ಅವರು ನನ್ನನ್ನು ಕರೆದು ಈ ಪಾತ್ರ ಕೊಟ್ಟಾಗ ಉಂಟಾದ ಸಂತಸ ನಿಜಕ್ಕೂ ಹೇಳತೀರದು" ಎಂದು ಹೇಳಿದರು.

"ಈ ಚಿತ್ರಕ್ಕೆ ನನ್ನನ್ನು ಆಯ್ಕೆ ಮಾಡಬೇಕೆಂದು ನಿರ್ಧರಿಸಿದ ಹೇಮಂತ್ ರಾವ್​ ಅವರು, ಒಂದು ದಿನ ಹಾಯ್​ ಸುರಭಿ, ನಿನಗೆ ಬಿಡುವಿದ್ದಾಗ ನನಗೆ ಕರೆ ಮಾಡು ಎಂದು ಕಳುಹಿಸಿದ ಸಂದೇಶ ಇನ್ನು ನನಗೆ ನೆನಪಿದೆ. ಆ ದಿನ ನಾನು ಒಂದು ಹಾಡನ್ನು ರೆಕಾರ್ಡಿಂಗ್​ ಮಾಡುತ್ತಿದ್ದೆ, ಆ ವೇಳೆ ಅವರ ಮೆಸೇಜ್​​ ಕಂಡು ಉತ್ಸಾಹ ತಾಳಲಾರದೆ ಎರಡು ನಿಮಿಷ ಸಮಯ ತೆಗೆದುಕೊಂಡು ಹೊರಗೆ ಬಂದೆ, ಕೂಡಲೇ ಫೋನ್​ ಕೈಗೆತ್ತಿಕೊಂಡು ಅವರಿಗೆ ಕರೆ ಮಾಡಿ ಮಾತನಾಡಿದೆ. ತದನಂತರ ಚಿತ್ರದಲ್ಲಿ ನಾನು ನಾಯಕಿಯಾಗಿ ನಟಸಿದ್ದು" ಎಂದು ಹೇಳಿದರು.

"ಹೇಮಂತ್​ ರಾವ್​ ಅವರು ಪ್ರತಿಯೊಬ್ಬ ಕಲಾವಿದರನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಾರೆ. ಅವರು ಬಹಳ ತಾಳ್ಮೆಯಿಂದ ನಮ್ಮನ್ನು ಹ್ಯಾಂಡಲ್​ ಮಾಡುತ್ತಿದ್ದರು" ಎಂದು ಹೇಳಿದ್ದಾರೆ. ಮತ್ತಷ್ಟು ಕುತೂಹಲಕಾರಿ ವಿಚಾರಗಳನ್ನು ಹಂಚಿಕೊಂಡ ನಟಿ ಚೈತ್ರಾ ಆಚಾರ್​​ ಅವರ ಸಂದರ್ಶನದ ವಿಡಿಯೋ ವೀಕ್ಷಿಸಲು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net