More

    ತೋಟದ ತರಕಾರಿ ಆರೋಗ್ಯಕ್ಕೆ ಸಹಕಾರಿ: ಕೈತೋಟ ತರಬೇತಿ ಕಾರ್ಯಕ್ರಮದಲ್ಲಿ ಗಾಯತ್ರಿ ಮಾಹಿತಿ

    ಮಂಗಳೂರು: ಕೈತೋಟ ಅಥವಾ ತಾರಸಿ ತೋಟದ ಮೂಲಕ ಸ್ವಂತ ಬಳಕೆಗೆ ಅಗತ್ಯ ತರಕಾರಿಯನ್ನು ನಾವೇ ಸಾವಯವ ವಿಧಾನದಲ್ಲಿ ಬೆಳೆಯುವುದು ಆರೋಗ್ಯಕ್ಕೆ ಸಹಕಾರಿ ಎಂದು ಬ್ಯಾಂಕ್ ಆ್ ಬರೋಡ ವಲಯ ಮುಖ್ಯಸ್ಥೆ, ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಅಧ್ಯಕ್ಷೆ ಗಾಯತ್ರಿ ಆರ್. ಹೇಳಿದರು.

    ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ವತಿಯಿಂದ ತಾರಸಿ, ಕೈತೋಟ, ಕಸಿ ಕಟ್ಟುವ ಕುರಿತು ನಗರದಲ್ಲಿ ಶನಿವಾರ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಹಿಂದೆ ಔಷಧೀಯ ಗುಣ ಹೊಂದಿರುವ ಆಹಾರ ಭಾರತೀಯ ಸಂಸ್ಕೃತಿಯ ಭಾಗವಾಗಿತ್ತು. ಆದರೆ ಇಂದು ಒಂದು ದೊಡ್ಡ ಜನವರ್ಗಕ್ಕೆ ಆಹಾರವೇ ಔಷಧವಾಗಿದೆ. ಇದು ಬದಲಾದ ಜೀವನಶೈಲಿಯಿಂದ ಸಂಭವಿಸಿದ ಅನಾಹುತ. ಸ್ವಲ್ಪ ಜಮೀನು ಹೊಂದಿರುವವರು ಕೈತೋಟದಲ್ಲಿ, ಮನೆಮಾತ್ರ ಇರುವವರು ತಾರಸಿಯಲ್ಲಿ ಸಾವಯವ ಕ್ರಮದಲ್ಲಿ ತರಕಾರಿ ಬೆಳೆಯುವುದು ಆರೋಗ್ಯದ ದೃಷ್ಟಿಯಿಂದ ಅಗತ್ಯ ಎಂದರು.

    ದ.ಕ. ಜಿಲ್ಲಾ ತೋಟಗಾರಿಕೆ ಇಲಾಖೆ ಉಪನಿದೇಶಕಿ ಜಾನಕಿ ವಿ ಮಾತನಾಡಿ, ಪ್ರಸಕ್ತ ಸಂದರ್ಭದಲ್ಲಿ ತಾರಸಿ ತೋಟದ ಪರಿಕಲ್ಪನೆ ಅವಶ್ಯಕವಾಗಿದೆ. ಆರೋಗ್ಯಕರ ಆಹಾರ ದೃಷ್ಟಿಯಿಂದ ತಾರಸಿ ಹಾಗೂ ಕೈತೋಟಗಳಿಗೆ ಪ್ರಾಮುಖ್ಯ ದೊರೆಯುತ್ತಿದೆ ಎಂದರು.

    ಬ್ಯಾಂಕ್ ಆ್ ಬರೋಡ ಪ್ರಾದೇಶಿಕ ಮುಖ್ಯಸ್ಥ ಪ್ರಸಾದ್, ಸಿರಿ ತೋಟಗಾರಿಕೆ ಸಂಘದ ಕೋಶಾಧಿಕಾರಿ ಕೋಶಾಧಿಕಾರಿ ಪಿ.ಸುರೇಶ್ ಶೆಣೈ, ನಿರ್ದೇಶಕ ಹರೀಶ್ಚಂದ್ರ ಅಡ್ಕ ಭಾಗವಹಿಸಿದ್ದರು.

    ತೋಟಗಾರಿಕೆ ಇಲಾಖೆ ಸಹಾಯಕ ಅಧಿಕಾರಿ ಯುಗೇಂದ್ರ, ನಿವೃತ್ತ ಅಧಿಕಾರಿ ಕುಚೇಲಯ್ಯ, ಮಾದರಿ ಕೃಷಿಕ ಹರೀಶ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ವಿಆರ್‌ಡಿಎ್ ಸಿಇಒ ಸಚಿನ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಬಿ.ರಾಜೇಂದ್ರ ರೈ ವಂದಿಸಿದರು.

    ಸಾಗಾಟದ ತರಕಾರಿಗೆ ಕೀಟನಾಶಕ:

    ತೋಟಗಾರಿಕೆ ಇಲಾಖೆ ಸಹಾಯಕ ಅಧಿಕಾರಿ ಯೋಗೇಂದ್ರ ಮಾತನಾಡಿ, ಕರಾವಳಿ ಜಿಲ್ಲೆಗಳ ಜನರು ದಿನನಿತ್ಯ ಬಳಸುವ ಹೆಚ್ಚಿನ ತರಕಾರಿ ಹಾಸನ, ಕೋಲಾರ, ಮೈಸೂರು ಮುಂತಾದ ಹೊರಜಿಲ್ಲೆಗಳಿಂದ ಬರುತ್ತದೆ. ಅಲ್ಲಿ ತರಕಾರಿ ಬೆಳೆಯುವ ಸಂದರ್ಭ ತೋಟದಲ್ಲಿ ಕೀಟಗಳಿಂದ ರಕ್ಷಣೆ ಪಡೆಯಲು ಕೀಟನಾಶಕಗಳನ್ನು ಬಳಸಲಾಗಿರುತ್ತದೆ. ಅಲ್ಲದೆ ದೂರದ ಊರುಗಳಿಗೆ ತರಕಾರಿ ಸಾಗಾಟ ಸಂದರ್ಭವೂ ಕೀಟನಾಶಕ ಸಿಂಪಡಿಸಲಾಗುತ್ತದೆ. ಸ್ವತಃ ತರಕಾರಿ ಬೆಳೆಯುವುದರಿಂದ ಮಾತ್ರ ಕೀಟನಾಶಕ ಮುಕ್ತ ತರಕಾರಿ ಎನ್ನುವ ಖಾತರಿ ದೊರೆಯುತ್ತದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts