ನಟಿ ಅಮೂಲ್ಯ ಸಹೋದರ Deepak Aras ನಿಧನ

Deepak Aras
Published on

ಬೆಂಗಳೂರು: ಚೆಲುವಿನ ಚಿತ್ತಾರ ಸಿನಿಮಾದ ಮೂಲಕ ಸ್ಯಾಂಡಲ್​ವುಡ್​ನಲ್ಲಿ (Sandalwood) ಖ್ಯಾತಿ ಗಳಿಸಿದ್ದ ನಟಿ ಅಮೂಲ್ಯ (Amulya) ಅವರ ಸಹೋದರ, ನಿರ್ದೇಶಕ ದೀಪಕ್​ ಅರಸ್​ (42) (Deepak Aras) ನಿಧನರಾಗಿದ್ದಾರೆ.

ದೀರ್ಘಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ದೀಪಕ್​ (Deepak Aras) ಅವರು ಗುರುವಾರ (ಅಕ್ಟೋಬರ್​ 17) ಸಂಜೆ 7ಗಂಟೆ ಸುಮಾರಿಗೆ ಇಹಲೋಕ ತ್ಯಜಿಸಿದ್ದಾರೆ. ದೀಪಕ್ ಅರಸ್ (Deepak Aras) ಅವರಿಗೆ ಕಿಡ್ನಿ ವೈಫಲ್ಯ ಆಗಿತ್ತು. ಅದಕ್ಕೆ ಅವರು ಡಯಾಲಿಸಿಸ್ ಮಾಡಿಸುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ಧಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.

ಮನಸಾಲಜಿ, ಶುಗರ್​ ಫ್ಯಾಕ್ಟರಿ ಸಿನಿಮಾಗಳನ್ನು ನಿರ್ದೇಶಿಸಿದ್ದ ದೀಪಕ್​ (Deepak Aras) ಅವರಿಗೆ ಇಬ್ಬರು ಮಕ್ಕಳಿದ್ದು, ಶುಕ್ರವಾರ (ಅಕ್ಟೋಬರ್​ 18) ಬೆಂಗಳೂರು ನಗರದ ಸುಮ್ಮನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net