ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ನಡೆಯುತ್ತಿರುವ ಭಾರತ (India) ಹಾಗೂ ನ್ಯೂಜಿಲೆಂಡ್ (NewZealand) ನಡುವಿನ ಟೆಸ್ಟ್ ಸರಣಿಯ (Test Series) ಮೊದಲ ಪಂದ್ಯದಲ್ಲಿ ಆತಿಥೇಯರು 46 ರನ್ಗಳಿಗೆ ಆಲೌಟ್ ಆಗುವ ಮೂಲಕ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 25ನೇ ಟೆಸ್ಟ್ ಪಂದ್ಯ (Test Match) ಇದಾಗಿದ್ದು, ಈ ಪಂದ್ಯದಲ್ಲಿ ಗೆದ್ದು ಸ್ಮರಣೀಯವಾಗಿಸುವ ಬದಲು ಸೋಲಿನ ದಾರಿ ಹಿಡಿದಿದೆ. ಇದೀಗ ಈ ಕುರಿತು ನಾಯಕ ರೋಹಿತ್ ಶರ್ಮ (Rohit Sharma) ಮಾತನಾಡಿದ್ದು, ಬ್ಯಾಟಿಂಗ್ ವೇಳೆ ಆದ ತಪ್ಪುಗಳನ್ನು ಉಲ್ಲೇಖಿಸಿದ್ದಾರೆ.
ಮೊದಲ ದಿನದಾಟದ ಬಳಿಕ ಸುದ್ದಿಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡಿದ ನಾಯಕ ರೋಹಿತ್ ಶರ್ಮ (Rohit Sharma), ನಾವು ಅಂದಾಜಿಸಿದಂತೆ ಮೊದಲ ಸೆಷನ್ನ ನಂತರ ಪಿಚ್ ಸೀಮರ್ಸ್ಗಳಿಗೆ ಹೆಚ್ಚು ಸಹಕರಿಸುವುದಿಲ್ಲ ಎಂದು ಭಾವಿಸಿದ್ದೆವು. ಪಿಚ್ ಮೇಲೆ ಹೆಚ್ಚು ಹುಲ್ಲು ಸಹ ಇರಲಿಲ್ಲ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ರ್ ಆಯ್ದುಕೊಂಡಿದ್ದು, ನನನ್ ತಪ್ಪು ನಿರ್ಣಯವಾಗಿತ್ತು. ಮತ್ತೊಂದು ವಿಚಾರವೇನೆಂದರೆ ನಾನು ಪಿಚ್ಅನ್ನು ಸರಿಯಾಗಿ ಗ್ರಹಿಸಲಿಲ್ಲ. ನಾಯಕನಾಗಿ ಈ 46 ರನ್‌ಗಳನ್ನು ನೋಡಿ ನನಗೆ ನೋವಾಗುತ್ತಿದೆ.
ಇದನ್ನೂ ಓದಿ: ಕಂಗನಾ ನಟನೆಯ Emergency ಚಿತ್ರಕ್ಕೆ ಕಡೆಗೂ ಸಿಕ್ತು ಪ್ರಮಾಣಪತ್ರ; ಸಿನಿಮಾ ರಿಲೀಸ್ ಯಾವಾಗ ಗೊತ್ತಾ?
ಕೆಲವೊಮ್ಮ ನಾವು ತೆಗೆದುಕೊಳ್ಳುವ ನಿರ್ಣಯಗಳು ನಮಗೆ ಮುಳುವಾಗುತ್ತವೆ. ನಮ್ಮ ಪಾಲಿಗೆ ಇದೊಂದು ಕೆಟ್ಟ ದಿನವಾಗಿತ್ತು. ಕೆಲವೊಮ್ಮೆ ನೀವು ಏನನ್ನಾದರೂ ಮಾಡಲು ಯೋಜಿಸುತ್ತೀರಿ ಆದರೆ ಕಾರ್ಯಗತಗೊಳಿಸಲು ವಿಫಲರಾಗುತ್ತೀರಿ. ತಪ್ಪುಗಳನ್ನು ಸರಿಪಡಿಸಿಕೊಂಡು ಕಣಕ್ಕಿಳಿಯಲಾಗುವುದು ಎಂದು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ (Rohit Sharma) ಹೇಳಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 25ನೇ ಟೆಸ್ಟ್ ಪಂದ್ಯ ಇದಾಗಿದ್ದು, ಟೆಸ್ಟ್ ಪಂದ್ಯದ ಮೊದಲ ದಿನದಾಟ ಮಳೆಯಿಂದಾಗಿ ರದ್ದಾಗಿತ್ತು. ಎರಡನೇ ದಿನದಾಟದಲ್ಲಿ ನ್ಯೂಜಿಲೆಂಡ್ ಬೌಲರ್‌ಗಳು ಮೇಲುಗೈ ಸಾಧಿಸಿದರು. ಭಾರತ 31.2 ಓವರ್‌ಗಳಲ್ಲಿ 46 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಭಾರತದ (Team India) ಐವರು ಬ್ಯಾಟರ್‌ಗಳು ಶೂನ್ಯಕ್ಕೆ ಔಟ್ ಆದರು. ನ್ಯೂಜಿಲೆಂಡ್ (NewZealand) ಪರ ಮ್ಯಾಟ್ ಹೆನ್ರಿ ಐದು (15/5) ಮತ್ತು ವಿಲಿಯಂ ಒ ರೂರ್ಕಿ (22/4) ನಾಲ್ಕು ವಿಕೆಟ್ ಸಾಧನೆ ಮಾಡಿದರು. ಇನ್ನೂ ಮೊದಲ ಇನ್ನಿಂಗ್ಸ್ನಲ್ಲಿ ಭರ್ಜರಿ ಮುನ್ನಡೆ ಪಡೆದಿರುವ ನ್ಯೂಜಿಲೆಂಡ್ ಮೊದಲ ಪಂದ್ಯ ಗೆಲ್ಲುವ ಮುನ್ಸೂಚನೆ ನೀಡಿದೆ.