VIDEO | ಗೋವಾದಲ್ಲಿ ಯಶ್; ‘ಟಾಕ್ಸಿಕ್’ ಸಿನಿಮಾ ಶೂಟ್​​ನಲ್ಲಿ ಕೆಜಿಎಫ್​ ನಟ...

yash
Published on

ಬೆಂಗಳೂರು: ಸ್ಯಾಂಡಲ್​ವುಡ್​​ ನಟ ಯಶ್​​ ಅವರು ಗೋವಾದಲ್ಲಿ ಕಾಲ ಕಳೆಯುತ್ತಿದ್ದಾರೆ ಎನ್ನುವ ಸುದ್ದಿಯೊಂದು ಸೋಶಿಯಲ್​​ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಯಶ್​ ಅವರು ಟಾಕ್ಸಿಕ್​ ಸಿನಿಮಾ ಚಿತ್ರೀಕರಣ ನಿಮಿತ್ತ ಗೋವಾದಲ್ಲಿದ್ದಾರೆ ಎನ್ನುವುದಕ್ಕೆ ಸಾಕ್ಷಿ ಎನ್ನುವಂತೆ ಕೆಲವು ವಿಡಿಯೋಗಳು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ.

ಮಲಯಾಳಂ ನಿರ್ದೇಶಕಿ ಗೀತು ಮೋಹನ್​ದಾಸ್ ಜೊತೆ ಸೇರಿ ಅವರು ‘ಟಾಕ್ಸಿಕ್’ ಸಿನಿಮಾ ಘೋಷಣೆ ಮಾಡಿದರು. ಕೆವಿಎನ್ ಪ್ರೊಡಕ್ಷನ್ ಈ ಚಿತ್ರವನ್ನು ಅದ್ದೂರಿ ಬಜೆಟ್​ನಲ್ಲಿ ನಿರ್ಮಾಣ ಮಾಡುತ್ತಿದೆ. 

ಈ ಚಿತ್ರದ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅದಕ್ಕೆ ತಕ್ಕಂತೆ ಸಿನಿಮಾ ಶೂಟ್ ಮಾಡಲಾಗುತ್ತಿದೆ. ಸಿನಿಮಾ ಶೂಟ್​​ನ ಕೆಲವು ಫೋಟೋಗಳು ವೈರಲ್​ ಆಗಿದ್ದು, ಗೋವಾದಲ್ಲಿ ಸಿನಿಮಾದ ಶೂಟಿಂಗ್ ನಡೆದಿದ್ದು, ಆ ಫೋಟೋ ಅದು ಎನ್ನಲಾಗುತ್ತಿದೆ.

ಈ ಚಿತ್ರದ ಶೂಟ್ ಗೋವಾದಲ್ಲಿ ನಡೆಯುತ್ತಿದೆ ಎನ್ನಲಾಗಿದೆ. ಸೆಟ್​ನ ಫೋಟೋ ಹಾಗೂ ವಿಡಿಯೋಗಳನ್ನು ಕೆಲವರು ಲೀಕ್ ಮಾಡಿದ್ದಾರೆ. ಅಂದಹಾಗೆ ಇದು ಶೂಟಿಂಗ್​ ಹೌದೋ ಅಥವಾ ಇಲ್ಲವೋ ಎಂಬುದು ಇನ್ನೂ ಖಚಿತವಾಗಿಲ್ಲ. ಫ್ಯಾನ್ಸ್ ಇದು ಸೆಟ್​ನ ವಿಡಿಯೋ ಎಂದೇ ಹೇಳುತ್ತಿದ್ದಾರೆ.  ಆದರೆ ಈ ಕುರಿತಾದ ಖಚಿತ ಮಾಹಿತಿ ಇಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net