More

    ಮತಾಂತರಗೊಂಡು ಮದುವೆಯಾದಳು, ಆದ್ರೂ ಡೀವೋರ್ಸ್​​ ಆಯ್ತು.. ಇದು ನಟಿ ಶ್ರೀವಿದ್ಯಾರ ದುರಂತ ಪ್ರೇಮಕಥೆ

    ಮುಂಬೈ: ಸ್ಟಾರ್ ಹೀರೋಯಿನ್ ಆಗಿ ಒಂದಾನೊಂದು ಕಾಲದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಪಡೆದ ನಟಿ ಪ್ರೀತಿಯಲ್ಲಿ ಬಿದ್ದು, ತನ್ನ ಗೆಳೆಯನ ಜತೆ ಮದುವೆಯಾಗಲು ಮತಾಂತರಗೊಂಡಳು. ಆದರೆ ಈಕೆ ಜೀವನ ದುರುಂತದಲ್ಲಿ ಅಂತ್ಯವಾಯ್ತು.

    ನಟಿ ಶ್ರೀವಿದ್ಯಾ ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ 800 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಶ್ರೀವಿದ್ಯಾ 1953 ರಲ್ಲಿ ಚೆನ್ನೈನಲ್ಲಿ ಜನಿಸಿದರು. ತಮಿಳು ಚಲನಚಿತ್ರ ಹಾಸ್ಯನಟ ಕೃಷ್ಣ ಮೂ ಕರ್ನಾಟಕ ಸಂಗೀತ ಗಾಯಕಿ ವಸಂತ ಕುಮಾರಿ ಅವರ ಪುತ್ರಿ. ಶ್ರೀವಿದ್ಯಾ ತಮ್ಮ 13ನೇ ವಯಸ್ಸಿನಲ್ಲಿ ಚಿತ್ರರಂಗ ಪ್ರವೇಶಿಸಿದರು. ಬಾಲನಟಿಯಾಗಿ ವೃತ್ತಿಜೀವನವನ್ನು ಪ್ರಾರಂಭಿಸಿ ಸ್ಟಾರ್ ಹೀರೋಯಿನ್ ಆಗಿ ಬೆಳೆದರು. 1967 ರಲ್ಲಿ ಶಿವಾಜಿ ಗಣೇಶನ್ ಅಭಿನಯದ ತಿರುವರುತ್ ಸೆಲ್ವರ್ ಚಿತ್ರದಲ್ಲಿ ಶ್ರೀವಿದ್ಯಾ ಪಾದಾರ್ಪಣೆ ಮಾಡಿದರು. ಅವರು 1970 ರ ದಶಕದ ಮಧ್ಯಭಾಗದಲ್ಲಿ ತಮಿಳು, ತೆಲುಗು ಸಿನಿಮಾಗಳಲ್ಲಿ ಬಹುಬೇಡಿಕೆಯ ನಟಿಯಾದರು. ಸಿನಿಮಾದಲ್ಲಿ ಬೇಡಿಕೆ ಇರುವಾಗಲೇ ಪ್ರೀತಿಯಲ್ಲಿ ಬಿದ್ದಳು.

    srividya

    ಮಲಯಾಳಂ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಜಾರ್ಜ್ ಥಾಮಸ್ ಅವರನ್ನು ಶ್ರೀವಿದ್ಯಾ ಪ್ರೀತಿಸುತ್ತಿದ್ದರು. ಆದರೆ ಇವರ ಪ್ರೀತಿಗೆ ಶ್ರೀವಿದ್ಯಾ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಜಾರ್ಜ್ ಥಾಮಸ್ ಕ್ರಿಶ್ಚಿಯನ್ ಆಗಿದ್ದರಿಂದ, ಅವರು ತಮ್ಮ ಮಗಳನ್ನು ಮದುವೆಯಾಗಲು ಒಪ್ಪಿಗೆ ನೀಡಲಿಲ್ಲ. ಆದರೆ ಶ್ರೀವಿದ್ಯಾ ತನ್ನ ಕುಟುಂಬ ಸದಸ್ಯರನ್ನು ಎದುರು ಹಾಕಿಕೊಂಡು ತನ್ನ ಪ್ರೇಮಿ ಜತೆ ಮದುವೆಯಾಗಲು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರು. ಮದುವೆ ನಂತರ ಸಾಕಷ್ಟು ಆದಾಯವಿಲ್ಲದ ಕಾರಣ ಜಾರ್ಜ್ ಥಾಮಸ್ ಶ್ರೀವಿದ್ಯಾ ಅವರನ್ನು ನಟನೆಯನ್ನು ಮುಂದುವರಿಸುವಂತೆ ಒತ್ತಾಯಿಸಿದರು. ಇದರಿಂದ ಇಬ್ಬರ ನಡುವೆ ಭಿನ್ನಾಭಿಪ್ರಾಯ ಹೆಚ್ಚಾಗಿದ್ದು, ಇಬ್ಬರೂ ವಿಚ್ಛೇದನ ಪಡೆದುಕೊಂಡರು.

    ಶ್ರೀವಿದ್ಯಾ ಪತಿ ಜಾರ್ಜ್ ಗೆ ವಿಚ್ಛೇದನ ನೀಡಿದಾಗ ಜಾರ್ಜ್ ಅವರಿಗೆ ಬರಬೇಕಾದ ಆಸ್ತಿ ನೀಡಿಲ್ಲ ಎಂಬ ಆರೋಪ ಮಾಡಿ ಸುಪ್ರೀಂ ಕೋರ್ಟ್‌ಗೆ ಹೋಗಿ ನ್ಯಾಯಕ್ಕಾಗಿ ಹೋರಾಡಿದರು. 2003 ರಲ್ಲಿ ಶ್ರೀವಿದ್ಯಾ ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಅದರಿಂದ ಚೇತರಿಸಿಕೊಳ್ಳಲಾಗದೆ ಶ್ರೀವಿದ್ಯಾ 2006ರಲ್ಲಿ ಇಹಲೋಕ ತ್ಯಜಿಸಿದರು. ಆದರೆ ಈ ನಟಿ ಪ್ರೀತಿಗಾಗಿ ಮತಾಂತರಗೊಂಡು ಮನೆಯವನ್ನು ಎದುರು ಹಾಕಿಕೊಂಡು ಮದುವೆಯಾದರು.. ಇವರು ಕೊನೆಗಾಲದಲ್ಲಿ ಇವರ ಜೀವನ ದುರಂತವಾಗಿ ಅಂತ್ಯವಾಯ್ತು.

    ಧನುಷ್ ನನ್ನ ಮಗ, 8 ವರ್ಷಗಳ ಕಾನೂನು ಹೋರಾಟ; ವೃದ್ಧ ದಂಪತಿ ಪ್ರಕರಣ ವಜಾಗೊಳಿಸಿದ ಕೋರ್ಟ್​

    ಗ್ರಾಹಕರೆ ಗೋಬಿ ಬ್ಯಾನ್​ ಆಗಿಲ್ಲ..; ಆದ್ರೆ ಕೃತಕ ಬಣ್ಣ ಬಳಸುವಂತಿಲ್ಲ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts