

ಚೆನ್ನೈ: ಟಾಲಿವುಡ್ ನಟ ಧನುಷ್ ಅವರ ವೈಯಕ್ತಿಕ ಜೀವನ ಹಾಗೂ ಸಿನಿಮಾ ವಿಚಾರವಾಗಿ ಸದಾ ಸುದ್ದಿಯಲ್ಲಿರುವ ನಟ. ಧನುಷ್ ತೆಲುಗು, ಹಿಂದಿ ಮತ್ತು ತಮಿಳು ಸಿನಿಮಾಗಳನ್ನು ಮಾಡುವ ಮೂಲಕವಾಗಿ ಸಾಕಷ್ಟು ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ. ಟಾಲಿವುಡ್ ನಟ ಧನುಷ್ ತಮ್ಮ ಮಗ ಎಂದು ವೃದ್ಧ ದಂಪತಿ ಪ್ರಕರಣ ದಾಖಲಿಸಿದ್ದರು. ಈ ಕುರಿತಾಗಿ ವಿಚಾರಣೆ ನಡೆಸಿದ ಕೋರ್ಟ್ ಕೊನೆಗೂ ತೀರ್ಪು ನೀಡಿದೆ.
ಮಧುರೈನ ಮೇಲೂರಿನ ಕತಿರೇಸನ್ ದಂಪತಿ ಧನುಷ್ ತಮ್ಮ ಸ್ವಂತ ಮಗ ಎಂದು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದು ಗೊತ್ತೇ ಇದೆ. 2015ರಲ್ಲಿ ಕದಿರೇಶನ್ ಮತ್ತು ಮೀನಾಕ್ಷಿ ಮೇಲೂರು ನ್ಯಾಯಾಲಯದ ಮೊರೆ ಹೋಗಿದ್ದು, ಧನುಷ್ 11ನೇ ತರಗತಿಯಲ್ಲಿದ್ದಾಗ ಸಿನಿಮಾದಲ್ಲಿ ನಟಿಸಲು ಮನೆ ಬಿಟ್ಟು ಹೋಗಿದ್ದ. ಧನುಷ್ ಹೆಸರು ನೋಂದಾಯಿಸಿದ್ದ ಜನನ ಪ್ರಮಾಣ ಪತ್ರ, ಹತ್ತನೇ ತರಗತಿ ಟಿಸಿ, 2002ರ ಪ್ರಮಾಣಪತ್ರಗಳನ್ನು ಧನುಷ್ ತಮ್ಮ ಸ್ವಂತ ಮಗನೆಂದು ಸಾಬೀತುಪಡಿಸಲು ಈ ಹಿಂದೆ ನ್ಯಾಯಾಲಯಕ್ಕೆ ಸಾಕ್ಷಿಯಾಗಿ ಸಲ್ಲಿಸಲಾಗಿತ್ತು.
ಧನುಷ್ ತಮ್ಮ ಮಗ ಎಂದು ಹೇಳುವುದರ ಜೊತೆಗೆ ತಿಂಗಳ ಖರ್ಚು ರೂ. 65,000 ನೀಡುವಂತೆ ಕೇಳಲಾಗಿತ್ತು. ಸುಮಾರು ಎಂಟು ವರ್ಷಗಳಿಂದ ಪ್ರಕರಣದ ತನಿಖೆ ನಡೆಯುತ್ತಿದೆ. ಇತ್ತೀಚೆಗೆ ಈ ಪ್ರಕರಣದಲ್ಲಿ ಕದಿರೇಶನ್ ದಂಪತಿ ಹಿನ್ನಡೆಯಾಗಿದೆ. ಧನುಷ್ ಅವರ ಪುತ್ರ ಎಂದು ಸಲ್ಲಿಸಿರುವ ಸಾಕ್ಷ್ಯಗಳನ್ನು ಪರಿಶೀಲಿಸಿದ ನ್ಯಾಯಾಲಯ ಪ್ರಕರಣವನ್ನು ವಜಾಗೊಳಿಸಿದೆ.