More

    ಮದುವೆ ಮನೆಯಲ್ಲಿ ಅಡುಗೆ ಮಾಡಿ ಬಡಿಸ್ತಿದ್ದವ ಇಂದು ಹೀರೋ; ಈ ಸ್ಟಾರ್​ ನಟ ಯಾರು ಗೊತ್ತಾ?

    ಹೈದ್ರಾಬಾದ್​​: ಸೌಂದರ್ಯ ಮತ್ತು ಪ್ರತಿಭೆ ಇದ್ದರೆ ಮಾತ್ರ ಚಿತ್ರರಂಗದಲ್ಲಿ ಒಬ್ಬ ನಟನಾಗಿ ನೆಲೆಯೂರಲು ಸಾಕಾಗುವುದಿಲ್ಲ. ಕಷ್ಟಕ್ಕೆ ಸ್ವಲ್ಪ ಅದೃಷ್ಟ ಕೂಡಿಬರಬೇಕು ಎನ್ನುವುದಕ್ಕೆ ಸಾಕ್ಷಿ ಎನ್ನುವಂತೆ ಇದೆ ಇಲ್ಲೊಬ್ಬ ನಟ ನಡೆದು ಬಂದ ಹಾದಿ…

    ಹೀರೋ ಆಗಿ ಬೆಳ್ಳಿತೆರೆಯಲ್ಲಿ ರಂಜಿಸುತ್ತಿರುವ ತೆಲುಗು ನಟ ಸೈಯದ್ ಸೊಹೆಲ್ ಒಂದು ಕಾಲದಲ್ಲಿ ಕೇಟರಿಂಗ್ ಕೆಲಸ ಮಾಡುತ್ತಿದ್ದರು. ನಟನಾಗಿ ಸಿನಿಮಾ ಅವಕಾಶಗಳಿಗಾಗಿ ಪ್ರಯತ್ನಿಸುತ್ತಲೇ  ಮದುವೆ ಕಾರ್ಯಕ್ರಮಗಳಲ್ಲಿ ಕೇಟರಿಂಗ್​, ಕಿರುಚಿತ್ರಗಳನ್ನು ಹಣಕ್ಕಾಗಿ ಮಾಡಿದ್ದೇನೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

    ಸಂದರ್ಶನವೊಂದರಲ್ಲಿ  ಮಾತನಾಡಿದ ಸೈಯದ್ ಸೊಹೆಲ್, ಸಿನಿಮಾಕ್ಕಿಂತ ಮೊದಲು ಕಿರುಚಿತ್ರ ಮಾಡಿ, ನಂತರ ಧಾರಾವಾಹಿ ಮಾಡಿದ್ದೇನೆ. ಅದಕ್ಕೂ ಮುನ್ನ ಹಣಕ್ಕಾಗಿ ಅಡುಗೆ ಕೆಲಸ ಮಾಡುತ್ತಿದ್ದು, ಮದುವೆ ಸಮಾರಂಭಗಳಲ್ಲಿ ಕೆಲಸ ಮಾಡುತ್ತಿದ್ದೆ ಎಂದು ಹೇಳಿದರು. ಕೇಟರಿಂಗ್, ಮದುವೆ ಕಾರ್ಯಕ್ರಮಗಳನ್ನು ಮಾಡಿ ಬಿಗ್ ಬಾಸ್​ಗೆ ಬಂದೆ. ನಂತರ ನನ್ನ ಅದೃಷ್ಟವೆನೋ ನನಗೆ ಒಳ್ಳೆಯ ಪಾತ್ರ ಹಾಗೂ ಸಿನಿಮಾ ಮಾಡುವ ಅವಕಾಶ ಸಿಕ್ಕಿತ್ತು. ಈಗ ಸಾಕಷ್ಟು ನಟನೆಯ ಅವಕಾಶಗಳು ನನಗೆ ಬರುತ್ತಿವೆ ಎಂದು ಹೇಳಿದ್ದಾರೆ.

    ಬಿಗ್ ಬಾಸ್ ಖ್ಯಾತಿಯ ಸೈಯದ್ ಸೊಹೆಲ್ ತೆಲಂಗಾಣದ ಸಿಂಗರೇಣಿ ಪ್ರದೇಶದ ಒಬ್ಬ ಸಾಮಾನ್ಯ ಹುಡುಗ.  ಸಿನಿಮಾ ಮೇಲೆ ಇರುವ ಆಸಕ್ತಿಯಿಂದ ಚಿತ್ರರಂಗ ಪ್ರವೇಶಿಸಿದರು. ಆರಂಭದಲ್ಲಿ ಕಿರುತೆರೆಯಲ್ಲಿ ಹಲವು ಧಾರಾವಾಹಿಗಳನ್ನು ಮಾಡಿ ಕುಟುಂಬ ಪ್ರೇಕ್ಷಕರಿಗೆ ಹತ್ತಿರವಾದರು. ಅದಾದ ನಂತರ ಬಿಗ್ ಬಾಸ್ ರಿಯಾಲಿಟಿ ಶೋಗೆ ಎಂಟ್ರಿಕೊಟ್ಟು ತಮ್ಮ ನಟನೆಯಿಂದ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಈಗ ಅವರಿಗೆ ಸಾಲು ಸಾಲು ಸಿನಿಮಾ ಅವಕಾಶಗಳು ಬರುತ್ತಿವೆ.

    ಮದುವೆ ಮನೆಯಲ್ಲಿ ಅಡುಗೆ ಮಾಡಿ ಬಡಿಸ್ತಿದ್ದವ ಇಂದು ಹೀರೋ; ಈ ಸ್ಟಾರ್​ ನಟ ಯಾರು ಗೊತ್ತಾ?

    ಬಿಗ್ ಬಾಸ್ ಐದನೇ ಸೀಸನ್ ಮೂಲಕ ಜನರಲ್ಲಿ ಒಳ್ಳೆಯ ಕ್ರೇಜ್ ಪಡೆದುಕೊಂಡಿದೆ. ಆ ನಂತರ Mr. Pregnant  ಚಿತ್ರದ ಮೂಲಕ ಸಾಹಸಕ್ಕೆ ಕೈ ಹಾಕಿದರು. ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಜೊತೆಗೆ ಸೈಯದ್ ಸೊಹೆಲ್ ನಟನೆಗೂ  ಮೆಚ್ಚುಗೆ ವ್ಯಕ್ತವಾಗಿದೆ. ಸೈಯದ್ ಸೊಹೆಲ್ ಚಿತ್ರರಂಗ ಪ್ರವೇಶಿಸುವ ಮುನ್ನ ಹಲವು ಸಂಕಷ್ಟಗಳನ್ನು ಎದುರಿಸಿದ್ದರು. ಈ ವಿಷಯವನ್ನು ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

    ಡ್ರಗ್ಸ್​ ಪ್ರಕರಣ; ʼಮಾಣಿಕ್ಯʼ ನಟಿ ವರಲಕ್ಷ್ಮಿ ಶರತ್‌ಕುಮಾರ್​ಗೆ NIA ನೋಟಿಸ್ ಜಾರಿ

    ‘RCB’ ಹೆಸರು ಬದಲಾವಣೆ!; ಹಿಂಟ್​​ ಕೊಟ್ರಾ’ಕಾಂತಾರ’ ರಿಷಬ್ ಶೆಟ್ಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts