

modi biopic; ಇಂದು (ಸೆ.17) ಪ್ರಧಾನಿ ಮೋದಿಯವರ ಹುಟ್ಟುಹಬ್ಬದ ಸಂದರ್ಭದಲ್ಲಿ, ನಿರ್ಮಾಣ ಸಂಸ್ಥೆ ಸಿಲ್ವರ್ ಕ್ಯಾಸ್ಟ್ ಕ್ರಿಯೇಷನ್ಸ್ ಹೊಸ ಅಪ್ಡೇಟ್ವೊಂದನ್ನು ನೀಡಿದೆ. ಸಿಲ್ವರ್ ಕ್ಯಾಸ್ಟ್ ಕ್ರಿಯೇಷನ್ಸ್ ಬ್ಯಾನರ್ ತಮ್ಮ ಮುಂದಿನ ಚಿತ್ರವಾದ 'ಮಾ ವಂದೇ' ಶೀರ್ಷಿಕೆಯನ್ನು ಅನಾವರಣಗೊಳಿಸಿದೆ.
ಇದು ಭಾರತೀಯ ಪ್ರಧಾನಿ ನರೇಂದ್ರ ಮೋದಿಯವರ ಜೀವನ ಚರಿತ್ರೆಯನ್ನು ವಿವರಿಸುವ ಸಿನಿಮಾವಾಗಿದ್ದು, ವೀರ್ ರೆಡ್ಡಿ ಎಂ. ನಿರ್ಮಿಸಿರುವ ಈ ಸಿನಿಮಾದಲ್ಲಿ ಮಲಯಾಳಂ ನಟ ಉನ್ನಿ ಮುಕುಂದನ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಲಿದ್ದಾರೆ.
ನಿರ್ಮಾಪಕರ ಪ್ರಕಾರ, ಈ ಜೀವನ ಚರಿತ್ರೆಯು ಪ್ರಧಾನಿ ಮೋದಿಯವರ ಬಾಲ್ಯದಿಂದ ರಾಷ್ಟ್ರದ ನಾಯಕನಾಗುವವರೆಗಿನ ಪ್ರಯಾಣವನ್ನು ವಿವರಿಸುತ್ತದೆಯಂತೆ. ವಿಶೇಷವಾಗಿ ಅವರ ದಿವಂಗತ ತಾಯಿ ಹೀರಾಬೆನ್ ಮೋದಿ ಅವರೊಂದಿಗಿನ ಅವರ ಸಂಬಂಧದ ಮೇಲೆ ಸಿನಿಮಾ ಕಥೆ ಇರಲಿದೆ. ಈ ಚಿತ್ರವನ್ನು ಕ್ರಾಂತಿ ಕುಮಾರ್ ಸಿಎಚ್ ನಿರ್ದೇಶಿಸಲಿದ್ದು, ಕೆಕೆ ಸೆಂಥಿಲ್ ಕುಮಾರ್ ಐಎಸ್ಸಿ ಛಾಯಾಗ್ರಹಣ ಮಾಡಲಿದ್ದಾರೆ. ಚಿತ್ರದ ಸಂಗೀತವನ್ನು ರವಿ ಬಸ್ರೂರ್ ಮತ್ತು ಸಂಕಲನವನ್ನು ಶ್ರೀಕರ್ ಪ್ರಸಾದ್ ನಿರ್ವಹಿಸಲಿದ್ದಾರೆ.
(ಏಜೆನ್ಸೀಸ್)
ಉನ್ನಿ ಮುಕುಂದನ್ ಅವರ 'ಮಾರ್ಕೊ' ಚಿತ್ರವು ಬಾಕ್ಸ್ ಆಫೀಸ್ನಲ್ಲಿ ದಾಖಲೆಯ ಗಳಿಕೆಯನ್ನು ಗಳಿಸಿತು. ಇದು 'ಎ' ರೇಟಿಂಗ್ ಪಡೆದ ಮಲಯಾಳಂ ಭಾಷೆಯ ಚಿತ್ರವಾಗಿದ್ದು, ಹನ್ನೊಂದನೇ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರವಾಗಿ ಹೊರಹೊಮ್ಮಿತು.
ಇದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಇಂಗ್ಲಿಷ್ನಲ್ಲಿಯೂ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾ ಸ್ಪೂರ್ತಿದಾಯಕ ಜೀವನಚರಿತ್ರೆಯ ಮೂಲಕ ಪ್ರೇಕ್ಷಕರಿಗೆ ಮರೆಯಲಾಗದ ಸಿನಿಮೀಯ ಅನುಭವವನ್ನು ನೀಡುವ ಉದ್ದೇಶವನ್ನು ಹೊಂದಿದೆ.