

ತಮಿಳುನಾಡು: ಒಂದು ಚಿಕ್ಕ ಗ್ಯಾಪ್ ನಂತರ ಇದೀಗ ತಮಿಳು ಚಿತ್ರರಂಗದಲ್ಲಿ ಬ್ಯಾಕ್ ಟು ಬ್ಯಾಕ್ ರಿಲೀಸ್ಗೆ ಹಲವು ಸಿನಿಮಾಗಳು ಎದುರುನೋಡುತ್ತಿದ್ದು, ಈ ಸಾಲಿನಲ್ಲಿ ನಟ ಕಾರ್ತಿ ಅಭಿನಯದ 'ಮೀಯಾಳಗನ್' ಮುಂಚೂಣಿಯಲ್ಲಿದೆ. ಪ್ರೇಮ್ ಕುಮಾರ್ ನಿರ್ದೇಶನದ ಚಿತ್ರದಲ್ಲಿ ಅರವಿಂದ್ ಸ್ವಾಮಿ ಅವರೊಂದಿಗೆ ತೆರೆ ಹಂಚಿಕೊಂಡಿರುವ ಕಾರ್ತಿ, ಚಿತ್ರದ ಗೆಲುವಿನತ್ತ ಮುಖಮಾಡಿದ್ದಾರೆ. ಇನ್ನು ಈ ಸಿನಿಮಾದ ನಿರ್ಮಾಪಕರಲ್ಲಿ ತಾವು ಕೂಡ ಒಬ್ಬರಾಗಿರುವ ಸೂರ್ಯ, ಚಿತ್ರ ಅಭಿಮಾನಿಗಳಲ್ಲಿ ಒಂದು ವಿಶೇಷ ಹಾಗೂ ಕಳಕಳಿ ಮನವಿ ಮಾಡಿಕೊಂಡಿದ್ದಾರೆ.
ಚಿತ್ರೋದ್ಯಮದಲ್ಲಿನ ಪ್ರಮುಖ ಸಮಸ್ಯೆಯನ್ನು ಉದ್ದೇಶಿಸಿ ಮಾತನಾಡಿದ ಸೂರ್ಯ, ಬಾಕ್ಸ್ ಆಫೀಸ್ ಗಳಿಕೆಯನ್ನು ಮುಂದಿಟ್ಟು ಜಾಲತಾಣಗಳಲ್ಲಿ ಆಯಾ ಚಿತ್ರನಟರನ್ನು ಅವಮಾನಿಸಬೇಡಿ. ಆ ಚಿತ್ರ ಎಷ್ಟು ಗಳಿಸಿತು? ಅದೆಷ್ಟು ಕಲೆಕ್ಷನ್ ಮಾಡಿತು ಎಂದು ಆನ್ಲೈನ್ ಪ್ಲಾಟ್ಫಾರ್ಮ್ಗಳಲ್ಲಿ ಜಟಾಪಟಿ ನಡೆಸಬೇಡಿ. ಇದೆಲ್ಲವನ್ನೂ ಇಲ್ಲಿಗೆ ಬಿಟ್ಟುಬಿಡಿ. ಸಿನಿಮಾ ಮಾಡುವುದು ನೀವು ಆನಂದಿಸಲಿ ಎಂದೇ ಹೊರತು ವಿಮರ್ಶೆ ಮಾಡಿ, ಟೀಕಿಸಲು ಅಲ್ಲ. 'ಮೀಯಾಳಗನ್' ಸೇರಿದಂತೆ ಇತರೆ ಚಿತ್ರಗಳನ್ನು ಚಿತ್ರಮಂದಿರಗಳಲ್ಲಿ ವೀಕ್ಷಿಸಿ, ಥಿಯೇಟರ್ ಅನುಭವವನ್ನು ಪಡೆಯಿರಿ ಎಂದು ಕೇಳಿಕೊಂಡರು.
ಸಿನಿರಸಿಕರು ಹಾಗೂ ಅಭಿಮಾನಿಗಳಲ್ಲಿ ಸೂರ್ಯ ಮಾಡಿಕೊಂಡ ಮನವಿಗೆ ನೆಟ್ಟಿಗರು ಸಾಥ್ ನೀಡಿದ್ದಾರೆ. ಇದೇ ಸೆ.27ರಂದು ಬಹುತೇಕ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲು ಸಜ್ಜಾಗಿರುವ ಮಿಯಾಳಗನ್ ಚಿತ್ರದಲ್ಲಿ ಕಾರ್ತಿ, ಶ್ರೀದೇವಿ, ಅರವಿಂದ್ ಸ್ವಾಮಿ, ರಾಜ್ಕಿರಣ್ ಸೇರಿದಂತೆ ಮುಂತಾದವರು ನಟಿಸಿದ್ದಾರೆ,(ಏಜೆನ್ಸೀಸ್).