ಕೋಟೆನಾಡಲ್ಲಿ ನಟ ಕಿಚ್ಚ ಸುದೀಪ್ ರೋಡ್ ಶೋ; ಕಾರಣ ಏನು?

Sudeep
Published on

ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದಲ್ಲಿ ಬಿಜೆಪಿ ಅಭ್ಯರ್ಥಿ ಪರ ನಿಗದಿಯಾಗಿದ್ದ ನಟ ಕಿಚ್ಚ ಸುದೀಪ್ ಅವರ ರೋಡ್​ ಶೋ ರದ್ದಾಗಿದೆ. ಪರಿಣಾಮವಾಗಿ ಸುದೀಪ್ ಅವರನ್ನು ನೋಡಲೆಂದು ಬಂದಿದ್ದ ಅಭಿಮಾನಿಗಳು ನಿರಾಸೆಯಿಂದ ಮರಳುವಂತಾಗಿದೆ.

ಬಿಜೆಪಿ ಅಭ್ಯರ್ಥಿ ಪರ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಮತಕ್ಷೇತ್ರದ ಭರಮಸಾಗರ, ಸಿರಿಗೆರೆ ಗ್ರಾಮದಲ್ಲಿ ಸುದೀಪ್ ರೋಡ್ ಶೋ ನಿಗದಿಯಾಗಿತ್ತು. ಆದರೆ ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ಸಿರಿಗೆರೆ ಹೆಲಿಪ್ಯಾಡ್​ಗೆ ಹೆಲಿಕಾಪ್ಟರ್ ಬರದೇ ರೋಡ್ ಶೋ ರದ್ದಾಗಿದೆ.

ಸಿರಿಗೆರೆ, ಭರಮಸಾಗರ ಗ್ರಾಮದಲ್ಲಿ ಸುದೀಪ್‌ ರೋಡ್ ಶೋ ಬಳಿಕ ಹೊಳಲ್ಕೆರೆ, ಚಳ್ಳಕೆರೆಯಲ್ಲೂ ರೋಡ್ ಶೋ ನಡೆಯಬೇಕಿತ್ತು. ಆದರೆ ಅಲ್ಲಿನ ರೋಡ್ ಶೋ ಕೂಡ ರದ್ದುಗೊಂಡಿದೆ. ಎಲ್ಲ ಕಡೆ ಸುದೀಪ್​ಗೆ ಕಾದಿದ್ದ ಅಭಿಮಾನಿಗಳು ನಿರಾಸೆಯಿಂದ ಮರಳುವಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net