ನಟ ಶರಣ್​ ಆಸ್ಪತ್ರೆಗೆ ದಾಖಲು, ಅಣ್ಣನ ಆರೋಗ್ಯದ ಬಗ್ಗೆ ತಂಗಿ ಶ್ರುತಿ ಹೇಳಿದ್ದೇನು?

sharan shriti
Published on

ಬೆಂಗಳೂರು: 'ಅವತಾರ ಪುರುಷ' ಸಿನಿಮಾ ಚಿತ್ರೀಕರಣ ವೇಳೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಟ ಶರಣ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಶನಿವಾರ ಬೆಳಗ್ಗೆ ಎಚ್ಎಂಟಿ ಗ್ರೌಂಡ್​ನಲ್ಲಿ ಸಿನಿಮಾ ಶೂಟಿಂಗ್​ ನಡೆಯುತಿತ್ತು. ಆ ವೇಳೆ ತೀವ್ರ ಹೊಟ್ಟೆನೋವಿನಿಂದ ಒದ್ದಾಡುತ್ತಿದ್ದ ಶರಣ್​ರನ್ನು ನಿರ್ದೇಶಕ ಸಿಂಪಲ್ ಸುನಿ ತಂಡ ಆಸ್ಪತ್ರೆಗೆ ಕರೆದೊಯ್ದರು. ಈ ಬಗ್ಗೆ 'ದಿಗ್ವಿಜಯ ನ್ಯೂಸ್​' ಜತೆ ಮಾತನಾಡಿದ ನಟಿ ಶ್ರುತಿ, 'ಇಂದು ಅವತಾರ ಪುರುಷ ಶೂಟಿಂಗ್​ನಲ್ಲಿ ಅಣ್ಣ ಭಾಗಿಯಾಗಿದ್ರು. ಅಲ್ಲಿ ಅಣ್ಣನಿಗೆ ಹೊಟ್ಟೆನೋವು ಕಾಡುತಿತ್ತು. ಕರೊನಾ ಹಿನ್ನೆಲೆಯಲ್ಲಿ ಮತ್ತು ಚಿತ್ರೀಕರಣಕ್ಕೆ ಸಮಸ್ಯೆ ಆಗುವ ಹಿನ್ನೆಲೆಯಲ್ಲಿ ಅವರು ತನ್ನ ನೋವನ್ನ ಯಾರ ಬಳಿಯೂ ಹೇಳಿಕೊಂಡಿರಲಿಲ್ಲ. ನೋವು ಹೆಚ್ಚಾದ ಹಿನ್ನೆಲೆ ನೇರವಾಗಿ ಆಸ್ಪತ್ರೆಗೆ ಬಂದಿದ್ದಾರೆ' ಎಂದರು. ಇದನ್ನೂ ಓದಿರಿ VIDEO|ಶರಣ್​ ಹುಟ್ಟು ಹಬ್ಬದ ಅಂಗವಾಗಿ ಅವತಾರ್​ ಪುರುಷ ಚಿತ್ರದ ಟ್ರೈಲರ್ ಬಿಡುಗಡೆ

'ಶರಣ್​ಗೆ ಕಿಡ್ನಿಯಲ್ಲಿ ಸ್ಟೋನ್ ಇದೆ ಎಂದು ಡಾಕ್ಟರ್ ಹೇಳಿದ್ದಾರೆ. ಇವತ್ತು ಆಸ್ಪತ್ರೆಯಲ್ಲೇ ಇರಲು ಸೂಚಿಸಿದ್ದಾರೆ. ಶೂಟಿಂಗ್ ಪೋಸ್ಟ್ ಪೋನ್​ ಆಗಿದ್ದಕ್ಕೆ ತುಂಬಾ ಬೇಸರ ಪಟ್ಟುಕೊಂಡಿದ್ದಾನೆ. ಚಿಕಿತ್ಸೆ ಬಳಿಕ ನಾಳೆ(ಭಾನುವಾರ) ಮನೆಗೆ ಕಳಿಸುವ ಸಾಧ್ಯತೆ ಇದೆ' ಎಂದು ನಟಿ ಶ್ರುತಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net