More

    VIDEO| ಇದು ಕನ್ನಡದಲ್ಲಿ ಎಸ್‌ಪಿಬಿ ಹಾಡಿದ ಕೊ‌ನೆಯ ಹಾಡು!

    ಬೆಂಗಳೂರು: ಇಡೀ ಜಗತ್ತು ಮಹಾಮಾರಿ ಕರೊನಾಗೆ ಸಿಲುಕಿ ಅಕ್ಷರಶಃ ನಲುಗಿದೆ. ಇದು ತಂದೊಡ್ಡುತ್ತಿರುವ ಸಾವು-ನೋವಿನ ತೀವ್ರತೆ ಎಲ್ಲೆ ಮೀರಿದ್ದು, ಮಾನವೀಯತೆಯನ್ನೂ ದೂರವಾಗಿಸುತ್ತಿದೆ. ಇಂತಹ ಸೋಂಕಿನ ವಿರುದ್ಧ ಹೊರಾಟಕ್ಕೆ ಜನರನ್ನು ಅಣಿಗೊಳಿಸುವ ನಿಟ್ಟಿನಲ್ಲಿ ಹಿರಿಯ ಸಾಹಿತಿ ಜಯಂತಕಾಯ್ಕಿಣಿ ಅವರು ಜಾಗೃತಿಗೀತೆ ರಚಿಸಿದ್ದರು. ಇದಕ್ಕೆ ಸ್ವರ ತುಂಬಿದ್ದು ಗಾನ ಗಾರುಡಿಗ ಎಸ್​.ಪಿ. ಬಾಲಸುಬ್ರಹ್ಮಣ್ಯಂ.

    ”ಕಾಣದಂತೆ ಆಕ್ರಮಿಸಿದೆ ವೈರಿ ಕರೊನಾ, ಅದಕೆ ಈಗ ನಾವೇ ದಾರಿ ಆಗದಿರೋಣ. ಕಾಲ ಬುಡಕೆ ಬರುವತನಕ ಕಾಯದಿರೋಣ.. ಕಾಲ ಬುಡಕೆ ಬರುವ ತನಕ ಕಾಯದಿರೋಣ… ನಾವೇ ಇಂದು ನಮಗೊಂದು ಅವಕಾಶ ಕೊಡೋಣ.. ” ಎಂದು ಎಸ್​ಪಿಬಿ ಹಾಡಿರುವ ಈ ಹಾಡನ್ನು ಒಮ್ಮೆ ಕೇಳಿದರೆ ನಮ್ಮ ಬದುಕು ಎತ್ತ ಸಾಗುತ್ತಿದೆ? ಏತಕ್ಕಾಗಿ ಈ ಜಂಜಾಟ, ಮಾನವೀಯ ನೆಲೆಗಟ್ಟು-ಮನುಷ್ಯತ್ವದ ಬಗ್ಗೆ ನಮ್ಮನ್ನು ನಾವೇ ಪ್ರಶ್ನೆ ಮಾಡಿಕೊಳ್ಳುವಂತೆ ಮಾಡಲಿದೆ. ಮತ್ತೆ ಮತ್ತೆ ಈ ಹಾಡನ್ನು ಕೇಳಬೇಕು ಅನ್ನಿಸದೆ ಇರದು. ಎಸ್​ಬಿಪಿ ಕನ್ನಡದಲ್ಲಿ ಹಾಡಿದ ಕೊನೆಯ ಹಾಡು ಕೂಡ ಇದೇ. ಇದು ಸಿನಿಮೇತರ ಹಾಡು. ಮಾಯಾಬಜಾರ್​ ಚಿತ್ರಕ್ಕಾಗಿ ಹಾಡಿದ ಹಾಡು ಕನ್ನಡ ಸಿನಿಮಾಕ್ಕಾಗಿ ಹಾಡಿದ್ದ ಕೊನೆಯ ಹಾಡು. ಎಸ್​ಪಿಬಿ ಅವರಿಗೂ ಕರೊನಾ ಸೋಂಕು ತಗುಲಿತ್ತು. ಬಳಿಕ ಗುಣಮುಖರಾಗಿದ್ದರು. ಮತ್ತೆ ಆರೋಗ್ಯ ಹದಗೆಟ್ಟಿತ್ತು. ಚಿಕಿತ್ಸೆ ಫಲಿಸದೆ ಶುಕ್ರವಾರ ನಿಧನರಾದರು.

    ಎಸ್​ಪಿಬಿ ಕೊನೇ ಬಾರಿಗೆ ಕನ್ನಡದಲ್ಲಿ ಹಾಡಿದ್ದು ಇದೇ ಗೀತೆ!

    ಎಸ್​ಪಿಬಿ ಕನ್ನಡದಲ್ಲಿ ಕೊನೇ ಬಾರಿಗೆ ಹಾಡಿದ್ದು ಇದೇ ಗೀತೆ!ಮಹಾಮಾರಿ ಕರೊನಾ ಕುರಿತು ಹಿರಿಯ ಸಾಹಿತಿ ಜಯಂತ ಕಾಯ್ಕಿಣಿ ಅವರು ರಚಿಸಿದ ಕವಿತೆಗೆ ಗಾನ ಗಾರುಡಿಗ ಎಸ್​.ಪಿ. ಬಾಲಸುಬ್ರಹ್ಮಣ್ಯಂ ಸ್ವರ ನೀಡಿದ್ದರು. ಇದು ಎಸ್​ಪಿಬಿ ಅವರು ಕನ್ನಡದಲ್ಲಿ ಹಾಡಿದ ಕೊನೆಯ ಹಾಡು. (ಹೆಚ್ಚಿನ ಮಾಹಿತಿಗೆ ಕೆಳಗಿನ ಲಿಂಕ್​ ಕ್ಲಿಕ್​ ಮಾಡಿ)#SPB #SPBalasubrahmanyam #Covid

    Posted by Vijayavani on Friday, September 25, 2020

    ಜಯಂತ ಕಾಯ್ಕಿಣಿ ರಚನೆಯ ಎಸ್​ಪಿಬಿ ಗಾಯನದ ಈ ಗೀತೆ ಇಲ್ಲಿದೆ.

    ಕಾಣದಂತೆ ಆಕ್ರಮಿಸಿದೆ ವೈರಿ ಕರೊನಾ
    ಅದಕೆ ಈಗ ನಾವೇ ದಾರಿ ಆಗದಿರೋಣ
    ಕಾಲ ಬುಡಕೆ ಬರುವತನಕ ಕಾಯದಿರೋಣ
    ಕಾಲ ಬುಡಕೆ ಬರುವ ತನಕ ಕಾಯದಿರೋಣ…

    ಹೆಸರು ಹುದ್ದೆ ಆಸ್ತಿ-ಗೀಸ್ತಿ ಬರದು ನೆರವಿಗೆ
    ವೈದ್ಯರಾದಿ ಬಳಗ ಸಿದ್ಧ ನಮ್ಮ ಉಳುವಿಗೆ
    ಅವರಿಗಾಗಿ ಸೌಕರ್ಯ ಸಿದ್ಧವಿಡೋಣ
    ಅವರಿಗಾಗಿ ಸೌಕರ್ಯ ಸಿದ್ಧವಿಡೋಣ..
    ನಾವೇ ಇಂದು ನಮಗೊಂದು ಅವಕಾಶ ಕೊಡೋಣ.

    ಕೈ ತೊಳೆದೇ ಮುಟ್ಟಬೇಕು ಅಂತಿದ್ದೆವು ಅಂದು
    ಮುಟ್ಟಿದರೆ ಏನನ್ನೂ ಕೈತೊಳೆಯೋಣ ಇಂದು
    ಸಂತೆಯಲಿ ಸಂದಣಿಯಲಿ ಹೋಗದಿರೋಣ
    ಸಂತೆಯಲಿ ಸಂದಣಿಯಲಿ ಹೋಗದಿರೋಣ
    ನಾವೇ ಇಂದು ನಮಗೊಂದು ಅವಕಾಶ ಕೊಡೋಣ

    ಬೀದಿಬದಿ ವ್ಯಾಪಾರಿ ಎಲ್ಲಿ ಹೋದರೋ
    ಮನೆಯೇ ಇರದ ಕೂಲಿ ಬಳಗ ಎಲ್ಲಿ ಇರುವರೋ
    ಅವರಿಗಾಗಿ ಬುತ್ತಿಯನ್ನು ಮೀಸಲಿಡೋಣಾ
    ಅವರಿಗಾಗಿ ಬುತ್ತಿಯನ್ನು ಮೀಸಲಿಡೋಣಾ..
    ನಾವೇ ಇಂದು ನಮಗೊಂದು ಅವಕಾಶ ಕೊಡೋಣಾ..

    ಭೂಮಿ, ಬಾನು, ನೀರು, ಕಾಡು ಧ್ವಂಸ ಮಾಡುತಾ
    ನಾವೇ ತಂದುಕೊಂಡೆವೀಗ ಚಂಡಮಾರುತ
    ಈಗಲಾದ್ರು ಅಟ್ಟಹಾಸ ಬಿಟ್ಟು ಬಿಡೋಣಾ
    ನಾವೇ ಇಂದು ನಮಗೊಂದು ಅವಕಾಶ ಕೊಡೋಣಾ

    ಕಾಣದಂತೆ ಆಕ್ರಮಿಸಿದೆ ವೈರಿ ಕರೊನಾ
    ಅದಕೆ ಈಗ ನಾವೇ ದಾರಿ ಆಗದಿರೋಣಾ
    ಕಾಲ ಬುಡಕೆ ಬರುವತನಕ ಕಾಯದಿರೋಣಾ
    ಕಾಲ ಬುಡಕೆ ಬರುವ ತನಕ ಕಾಯದಿರೋಣಾ
    ನಾವೇ ಇಂದು ನಮಗೊಂದು ಅವಕಾಶ ಕೊಡೋಣಾ

    ಶೂಟಿಂಗ್​ ಸ್ಪಾಟ್​ನಲ್ಲೇ ಪ್ರಾಣಬಿಟ್ಟ ಪೋಷಕ ನಟನ ಕೊನೇ ಫೋಟೋ ಇದು!

    PHOTO GALLERY| ಸ್ವರ ಮಾಂತ್ರಿಕ ಎಸ್​.ಪಿ. ಬಾಲಸುಬ್ರಹ್ಮಣ್ಯಂರ ಅಪರೂಪದ ಕ್ಷಣಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts