ಪೋರ್ನ್​ ಸ್ಟಾರ್​ ಆಗಿರುವುದು ದೇವರ ಇಚ್ಛೆ! ಶಿಕ್ಷಕಿ ಹುದ್ದೆ ತೊರೆದು ನೀಲಿತಾರೆಯಾದ ಟಿಲಿಯಾ ಬೋಲ್ಡ್​ ಹೇಳಿಕೆ

Courtney Tillia
Published on

ನವದೆಹಲಿ: ಕೆಲವರು ತಮ್ಮ ಇಚ್ಛೆಗೆ ಅನುಸಾರವಾದ ಕೆಲಸವನ್ನು ಮಾಡುತ್ತಾರೆ. ಇನ್ನು ಕೆಲವರು ಹಣಕ್ಕಾಗಿ ಯಾವ ಕೆಲಸವಾದರೂ ಮಾಡಲು ತಯಾರಿರುತ್ತಾರೆ. ಬೆರಳಣಿಕೆಯ ಮಂದಿ ತಮ್ಮ ಹಿತಾಸಕ್ತಿಗೆ ಹೊಂದಾಣಿಕೆ ಆಗುತ್ತಿಲ್ಲ ಅಂತ ಹೆಚ್ಚು ಸಂಬಳದ ಉದ್ಯೋಗವನ್ನು ತೊರೆದವರೂ ಇದ್ದಾರೆ. ಇದೀಗ ನೀಲಿತಾರೆ ಕರ್ಟ್ನಿ ಟಿಲಿಯಾ ಕೂಡ ಈ ಸಾಲಿಗೆ ಸೇರಿದ್ದಾರೆ.

ಶಿಕ್ಷಕಿ ಹುದ್ದೆಗೆ ಗುಡ್​ ಬೈ

ಕರ್ಟ್ನಿ ಟಿಲಿಯಾ ಅವರು ಪೋರ್ನ್​ ಇಂಡಸ್ಟ್ರಿಗೆ ಸೇರಲು ತಮ್ಮ ಶಿಕ್ಷಕಿ ಹುದ್ದೆಯನ್ನೇ ತೊರೆದಿದ್ದಾರೆ. ಈ ದಾರಿಯನ್ನು ಆಯ್ಕೆ ಮಾಡಿಕೊಳ್ಳಲು ದೇವರೆ ಹೇಳಿದನು ಎಂದಿದ್ದಾರೆ. ಈ ವೃತ್ತಿಯಿಂದ ಹೆಚ್ಚು ಹಣ, ಖ್ಯಾತಿ ಮತ್ತು ಸಂತೋಷವನ್ನು ಹೊಂದಿದ್ದಾರಂತೆ. ನಾನು ಪೂರ್ನ್​ ಸ್ಟಾರ್​ ಆಗಿರುವುದು ದೇವರ ಇಚ್ಛೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಲೋಕಸಭಾ ಚುನಾವಣೆ ಎಫೆಕ್ಟ್​! ಸುಮಲತಾ ಪದೇಪದೆ ಕೆಣಕುತ್ತಿದ್ರು ತುಟಿ ಬಿಚ್ಚದ ಜೆಡಿಎಸ್​ ನಾಯಕರು

ದೇವರ ಸಂದೇಶವು ತುಂಬಾ ಸ್ಪಷ್ಟವಾಗಿದೆ. ನಾನು ಭೂಮಿ ಮೇಲಿರುವುದೇ ಪೋರ್ನ್​ ಸ್ಟಾರ್​ ಆಗಿರಲು. ಇದು ನನ್ನದೇಯಾದ ಸೇವೆಯ ದಾರಿಯಾಗಿದೆ. ನಾನು ಇತರರಿಗೆ ಆನಂದವನ್ನು ಮತ್ತು ಲೈಂಗಿಕ ಅಭಿವ್ಯಕ್ತಿಯನ್ನು ತೋರಿಸುತ್ತಿದ್ದೇನೆ. ಅಶ್ಲೀಲ ಮತ್ತು ಲೈಂಗಿಕ ಕೆಲಸಗಳಲ್ಲಿ ತೊಡಗಿರುವವರು ಸಹ ದೇವರನ್ನು ವಿರೋಧಿಸಲು ಅಥವಾ ದೇವರಿಂದ ಪ್ರತ್ಯೇಕವಾಗಿ ಅಸ್ತಿತ್ವದಲ್ಲಿರಲು ಉದ್ದೇಶಿಸುವುದಿಲ್ಲ. ಅವರು ಕೂಡ ದೇವರೊಂದಿಗೆ ಏಕೀಕರಿಸಲ್ಪಟ್ಟಿದ್ದಾರೆ ಮತ್ತು ಪವಿತ್ರರಾಗಿದ್ದಾರೆ ಎಂದು ಕರ್ಟ್ನಿ ಟಿಲಿಯಾ ಹೇಳಿದ್ದಾರೆ.

ಮಹಿಳೆಯರನ್ನು ಲೈಂಗಿಕ ಅವಮಾನದಿಂದ ಮುಕ್ತಗೊಳಿಸುವುದು ತನ್ನ ಕರೆ ಎಂದು ಕರ್ಟ್ನಿ ಟಿಲಿಯಾ ಅವರು ಹೇಳಿದರು. ಹೆಚ್ಚುವರಿಯಾಗಿ ತನ್ನ ಹೊಸ ಕೆಲಸದ ಕ್ಷೇತ್ರವು ತನ್ನನ್ನು ದೇವರಿಗೆ ಇನ್ನಷ್ಟು ಹತ್ತಿರವಾಗಿಸಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಎಂಬಿಬಿಎಸ್​ ಓದಿದ ಈ ಸರ್ಕಾರಿ ವೈದ್ಯರ ಸಂಬಳ ಸೆಕ್ಯೂರಿಟಿ ಗಾರ್ಡ್​ಗೆ ಸಮಾನ! ಟ್ವಿಟರ್​ನಲ್ಲಿ ಆಕ್ರೋಶ ಹೊರಹಾಕಿದ ಬೆಂಗಳೂರಿಗ

ಯಾವುದೇ ಸಂಸ್ಥೆಯ ಅಗತ್ಯವಿಲ್ಲ

ನಾನು ಇದುವರೆಗೆ ದೇವರೊಂದಿಗೆ ಹೆಚ್ಚು ಸಂಪರ್ಕ ಹೊಂದಿದ್ದೇನೆ, ಆದರೆ ನಾನು ಕನಿಷ್ಠ ಧಾರ್ಮಿಕಳಾಗಿದ್ದೇನೆ. ದೇವರು ಯಾರು ಅಥವಾ ದೇವರೊಂದಿಗೆ ನನ್ನ ಸಂಬಂಧವನ್ನು ಹೇಗೆ ನಡೆಸಬೇಕು ಎಂದು ಹೇಳಲು ನನಗೆ ಯಾವುದೇ ಸಂಘ ಅಥವಾ ಸಂಸ್ಥೆಯ ಅಗತ್ಯವಿಲ್ಲ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net