ಸೆಲ್ಫಿ ಕ್ಲಿಕ್ಕಿಸಲು ಬಂದ ಅಭಿಮಾನಿಯನ್ನು ಥಳಿಸಿದ ನಾನಾ ಪಾಟೇಕರ್; ನಟ ಕೊಟ್ಟ ಸ್ಪಷ್ಟನೆ ಹೀಗಿತ್ತು

Nana Patekar
Published on

ವಾರಣಾಸಿ: ತಮ್ಮ ವಿಭಿನ್ನ ಮ್ಯಾನರಿಸಂ ಹಾಗೂ ಮನೋಜ್ಞ ಅಭಿನಯದ ಮೂಲಕ ಬಾಲಿವುಡ್​ನಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿರುವ ನಟ ಎಂದರೆ ಮೊದಲಿಗೆ ಕೇಳಿ ಬರುವ ಹೆಸರು ನಾನಾ ಪಾಟೇಕರ್. ಸದಾ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುವ ನಟ ಈ ಬಾರಿ ವಿವಾದ ಒಂದರಲ್ಲಿ ಸಿಲುಕಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾಕಷ್ಟು ಖಂಡನೆಗೆ ಗುರಿಯಾಗಿದೆ. ಈ ರೀತಿ ಮಾಡುವುದು ಸರಿಯಲ್ಲ ಅವರು ಅಭಿಮಾನದಿಂದ ಬಂದು ಕೇಳಿದರೆ ನೀವು ಮಾಡಿದ ರೀತಿ ಸರಿಯಿಲ್ಲ ಎಂದು ಹೇಳಿದ್ದಾರೆ.

ವೈರಲ್​ ಆಗಿರುವ ವಿಡಿಯೋದಲ್ಲಿ ಅಭಿಮಾನಿಯೋರ್ವ ನಾನಾ ಪಾಟೇಕರ್ ಅವರ ಬಳಿ ಸೆಲ್ಫಿ ಕೇಳಲು ಬರುತ್ತಾನೆ. ಇದನ್ನು ನೋಡಿದ ನಾನಾ ಏಕಾಏಕಿ ಆತನ ಮೇಲೆ ಹಲ್ಲೆ ನಡೆಸುತ್ತಾರೆ. ಈ ವೇಳೆ ನಾನಾ ಜತೆಗಿದ್ದ ವ್ಯಕ್ತಿಯೂ ಆತನ ಮೇಲೆ ಹಲ್ಲೆ ನಡೆಸಿದ್ದು, ಈ ವಿಡಿಯೋ ವೈರಲ್​ ಆದ ಬೆನ್ನಲ್ಲೇ ಎಲ್ಲರೂ ನಾನಾ ಪಾಟೇಕರ್​ ಅವರನ್ನು ಟೀಕಿಸಿದ್ದಾರೆ.

ಈ ಕುರಿತು ಸ್ಪಷ್ಟನೆ ನೀಡಿರುವ ನಟ ನಾನಾ ಪಾಟೇಕರ್ ನಾನು ಹುಡುಗನಿಗೆ ಹೊಡೆದ ವೀಡಿಯೊ ವೈರಲ್ ಆಗುತ್ತಿದೆ. ಈ ಸೀಕ್ವೆನ್ಸ್ ನಮ್ಮ ಚಿತ್ರದ ಒಂದು ಭಾಗವಾಗಿದ್ದು ನಾವು ಅದರ ರಿಹರ್ಸಲ್​ ಮಾಡುತ್ತಿದ್ದೆವು. ನಾನು ಆ ವ್ಯಕ್ತಿ ಚಿತ್ರತಂಡದ ಸದಸ್ಯ ಎಂದು ಭಾವಿಸಿ ರಿಹರ್ಸಲ್​ ಮಾಡಿದ್ದೇನೆ. ಆ ಬಳಿಕ ನನಗೆ ತಿಳಿಯಿತ್ತು ಆತ ಚಿತ್ರತಂಡದ ಸದಸ್ಯನಲ್ಲವೆಂದು. ಬಳಿಕ ಅವನನ್ನು ಹುಡುಕಿ ಮಾತನಾಡಿಸಲು ಯತ್ನಿಸದೆ ಅಷ್ಟರಲ್ಲೇ ಆತ ಅಲ್ಲಿಂದ ತೆರಳಿದ್ದ. ಇದು ಬೇಕೆಂದು ಮಾಡಿದಲ್ಲ ದಯವಿಟ್ಟು ಕ್ಷಮಿಸಿ ಎಂದು ನಟ ನಾನಾ ಪಾಟೇಕರ್​ ವೈರಲ್ ವಿಡಿಯೋ ಕುರಿತು ಸ್ಪಷ್ಟನೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net