More

    ವಾಂಖೆಡೆ ಪಿಚ್​ ಬದಲಾಯಿಸಲಾಗಿದೆ ಎಂದು ಹೇಳುವವರು ಮೂರ್ಖರು; ಮಾಜಿ ಕ್ರಿಕೆಟಿಗರ ಆರೋಪಕ್ಕೆ ಸುನೀಲ್ ಗವಾಸ್ಕರ್ ತಿರುಗೇಟು

    ಮುಂಬೈ: ಬುಧವಾರ ಭಾರತ ಹಾಗೂ ನ್ಯೂಜಿಲೆಂಡ್​ ವಿರುದ್ಧ ನಡೆದ ರೋಚಕ ಹಣಾಹಣಿಯಲ್ಲಿ ಟೀಂ ಇಂಡಿಯಾ ಗೆದ್ದು ಅಜೇಯವಾಗಿ ಫಿನಾಲೆ ಪ್ರವೇಶಿಸಿದೆ. ಈ ಮೂಲಕ ಭಾರತ ತಂಡ ಹಾಲಿ ವಿಶ್ವಕಪ್​ ಆವೃತ್ತಿಯಲ್ಲಿ ತನ್ನ ಅಜೇಯ ಓಟವನ್ನು ಮುಂದುವರೆಸಿದ್ದು, ಈ ಮೂಲಕವಾಂಖೆ ನ್ಯೂಜಿಲೆಂಡ್​ ವಿರುದ್ಧ ತನ್ನ ಹಳೆಯ ಸೇಡನ್ನು ತೀರಿಸಿಕೊಂಡಿದೆ.

    ಇನ್ನೂ ನಿನ್ನೆ ಪಂದ್ಯ ಶುರುವಾಗುವುದಕ್ಕೂ ಮುನ್ನ ವಾಂಖೆಡೆ ಕ್ರೀಡಾಂಗಣದಲ್ಲಿನ ಪಿಚ್​ ಬದಲಾಯಿಸಲಾಗಿದೆ ಎಂದು ಕೆಲ ಮಾಜಿ ಕ್ರಿಕೆಟಿಗರು, ಸುದ್ದಿ ಮಾಧ್ಯಮಗಳು ಆರೋಪಿಸಿದ್ದವು. ಈ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಚರ್ಚೆಗಳು ಸಹ ನಡೆಯುತ್ತಿದ್ದವು. ಇದೀಗ ಇದಕ್ಕೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟಿಗ ವೀಕ್ಷಕ ವಿವರಣೆಗಾರ ಸುನೀಲ್​ ಗವಾಸ್ಕರ್​ ಪ್ರತಿಕ್ರಿಯಿಸಿದ್ದು, ಆರೋಪ ಮಾಡಿದವರಿಗೆ ತಿರುಗೇಟು ನೀಡಿದ್ದಾರೆ.

    ಇದನ್ನೂ ಓದಿ: ರಾಜಸ್ಥಾನ ಚುನಾವಣೆ; ಕಾಂಗ್ರೆಸ್​ ಅಭ್ಯರ್ಥಿ ಗುರ್ಮೀತ್ ಸಿಂಗ್ ಕೂನರ್ ನಿಧನ

    ಈ ಕುರಿತು ಪ್ರತಿಕ್ರಿಯಿಸಿದ ಸುನೀಲ್​, ಭಾರತದ ಬೌಲರ್​ಗಳಿಗೆ ನೆರವಾಗುವಂತೆ ಪಿಚ್ ತಯಾರಿಸಲಾಗುತ್ತಿದೆ ಎಂದು ಹೇಳುವವರೆಲ್ಲಾ ದೊಡ್ಡ ಮೂರ್ಖರು. ಗಮನ ಸೆಳೆಯುವುದಕ್ಕಾಗಿ ಈ ರೀತಿಯ ಆರೋಪ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಒಂದು ವೇಳೆ ಪಿಚ್​ ಬದಲಾವಣೆ ಮಾಡಿದರು ಅದು ಟಾಸ್​ಗಿಂತ ಮೊದಲು ಮಾಡುತ್ತಾರೆ.

    ಪಂದ್ಯದ ಮಧ್ಯದಲ್ಲಿ ಆ ರೀತಿ ಬದಲಾಯಿಸಲು ಸಾಧ್ಯವಿಲ್ಲ. ನೀವು ಉತ್ತಮ ತಂಡ ಆಗಿದ್ದರೆ ಎಂತಹ ಕಷ್ಟ ಪರಿಸ್ಥಿತಿ ಇದ್ದರು ಆಡಿ ಗೆಲ್ಲುತ್ತೀರಾ ಎಂದು ಪಿಚ್​ ಬದಲಾವಣೆ ಆರೋಪದ ಕುರಿತು ಮಾಜಿ ಕ್ರಿಕೆಟಿಗ ಸುನೀಲ್​ ಗವಾಸ್ಕರ್​ ತಿರುಗೇಟು ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts