ಬಿಡುಗಡೆ ಬೆನ್ನಲ್ಲೇ ಕೋರ್ಟ್​ ಮೊರೆ ಹೋದ ನಟ Darshan! ಹೀಗಿದೆ ಕಾರಣ

Darshan
Published on

ಬೆಂಗಳೂರು: ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ (Renukaswamy Murder Case) ಜೈಲು ಪಾಲಾಗಿ ರೆಗ್ಯೂಲರ್​ ಬೇಲ್​ ಮೇಲೆ ಬಿಡುಗಡೆಯಾಗಿರುವ ನಟ ದರ್ಶನ್ (Darshan)​ ಸದ್ಯ ಮನೆಯಲ್ಲಿ ರೆಸ್ಟ್​ ಮಾಡುತ್ತಿದ್ದು, ಬಿಡುಗಡೆ ಬೆನ್ನಲ್ಲೇ ನಟ ದರ್ಶನ್​ ಮತ್ತೊಮ್ಮೆ ಕೋರ್ಟ್​ ಮೊರೆ ಹೋಗಿದ್ದಾರೆ.

ನಟ ದರ್ಶನ್​ (Darshan) ತಮಗೆ ರೆಗ್ಯೂಲರ್​ ಬೇಲ್​ ಸಿಕ್ಕ ಮೇಲೆ ಮೈಸೂರಿಗೆ ತೆರಳಲು ಅನುಮತಿ ನೀಡುವಂತೆ ಕೋರಿ ತಮ್ಮ ವಕೀಲರ ಮೂಲಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ನಾಲ್ಕು ವಾರಗಳ ಅನುಮತಿಯನ್ನು ಕೋರಿ 57ನೇ ಸಿಸಿಎಚ್ ನ್ಯಾಯಾಲಯ್ಕೆ ದರ್ಶನ್​ (Drashan) ವಕೀಲರು ಅರ್ಜಿ ಸಲ್ಲಿಸಿದ್ದು, ಎಸ್​ಪಿಪಿಗೆ ಆಕ್ಷೇಪಣೆ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿದೆ.

ರೇಣುಕಸ್ವಾಮಿ ಹತ್ಯೆ ಪ್ರಕರಣಕ್ಕೆ (Renukaswamy Murder Case) ಸಂಬಂಧಿಸಿದಂತೆ ಡಿಸೆಂಬರ್​​ 13ರಂದು ಹೈಕೋರ್ಟ್​ ನಟ ದರ್ಶನ್ (Darshan)​, ಪವಿತ್ರಾ ಗೌಡ (Pavithra Gowda) ಸೇರಿದಂತೆ ಏಳು ಮಂದಿ ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ವಿಧಿಸಿತ್ತು. ಜಾಮೀನಿಗೆ ಸಂಬಂಧಿಸಿದಂತೆ ಷರತ್ತು ವಿಧಿಸುವಾಗ ವಿಚಾರಣಾ ಕೋರ್ಟ್ ವ್ಯಾಪ್ತಿ ಬಿಡದಂತೆ ಸೂಚಿಸಿತ್ತು. ಹೀಗಾಗಿ ಮೈಸೂರಿಗೆ ಹೋಗಲು ಅನುಮತಿ ಕೋರಿ ನಟ ದರ್ಶನ್ (Darshan)​ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net