ಅತುಲ್​ ಸುಭಾಷ್​​​ ಸಾವಿಗೆ ನ್ಯಾಯ ಕೋರಿ Rahul Gandhi ಬೆನ್ನತ್ತಿದ್ದ ಜನರು; ಮುಂದೇನಾಯ್ತು ನೀವೇ ನೋಡಿ

Rahul Gandhi
Published on

ನವದೆಹಲಿ: ರಾಷ್ಟ್ರವ್ಯಾಪಿ ತೀವ್ರ ಸಂಚಲನ ಮೂಡಿಸಿರುವ ಟೆಕ್ಕಿ ಅತುಲ್​ ಸುಭಾಷ್​ (Atul Subhash) ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ನ್ಯಾಯಾಕ್ಕಾಗಿ ಆಗ್ರಹಿಸಿ ದೇಶವ್ಯಾಪಿ ಪ್ರತಿಭಟನೆ ನಡೆಸಲಾಗುತ್ತಿದೆ. ರಾಷ್ಟ್ರರಾಜಧಾನಿ ನವದೆಹಲಿಯಲ್ಲೂ ಪ್ರತಿಭಟನೆ ನಡೆಸಲಾಗುತ್ತಿದ್ದು, ಈ ವೇಳೆ ಕೆಲವು ಸಾರ್ವಜನಿಕರು ಲೋಕಸಭೆ ವಿಪಕ್ಷ ನಾಯಕ ರಾಹುಲ್​ ಗಾಂಧಿ (Rahul Gandhi) ಅವರ ಬೆನ್ನತ್ತಿದ್ದ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್​ ಆಗಿದೆ.

ದೆಹಲಿಯಲ್ಲಿ ಲೋಕಸಭೆ ವಿಪಕ್ಷ ನಾಯಕ ರಾಹುಲ್​ ಗಾಂಧಿ (Rahul Gandhi) ಸಂಸತ್​ ಅಧಿವೇಶನದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದಾಗ ದಾರಿಯಲ್ಲಿ ಕೆಲವು ಪ್ರತಿಭಟನಾ ನಿರತರು ಕಾಂಗ್ರೆಸ್​ ನಾಯಕನ ವಾಹನವನ್ನು ಬೆನ್ನತ್ತಿ ಅತುಲ್​ ಸುಭಾಷ್​ (Atul Subhash) ಸಾವಿಗೆ ಸಂಬಂಧಿಸಿದಂತೆ ಸಂಸತ್​ನಲ್ಲಿ ಧ್ವನಿ ಎತ್ತುವಂತೆ ಆಗ್ರಹಿಸಿದ್ದಾರೆ. ಈ ವೇಳೆ ಅತುಲ್​ ಅವರ ಫೋಟೋವನ್ನು ಸಹ ಜನರು ಪ್ರದರ್ಶಿಸಿದ್ದಾರೆ. ಚಾಕಲೇಟ್​ ಎಸೆಯುವ ಮೂಲಕ ಸಾರ್ವಜನಿಕರ ಬೇಡಿಕೆಗೆ ಚಾಕಲೇಟ್​ ಎಸೆಯುವ ಮೂಲಕ ರಾಹುಲ್​ ಸ್ಪಂದಿಸಿದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾತನಾಡುವ ವಿಶ್ವಾಸ ವ್ಯಕ್ತವಾಗಿದೆ.

ವಕೀಲೆ ದೀಪಿಕಾ ನಾರಾಯಣ್​ ಅವರು ಈ ವಿಡಿಯೋವನ್ನು ಪೋಸ್ಟ್​ ಮಾಡಿದ್ದು, ಆತುಲ್ ಸುಭಾಷ್ ಸೇರಿದಂತೆ ಭಾರತದಲ್ಲಿ ನಡೆಯುತ್ತಿರುವ ಪುರುಷರ ಆತ್ಮಹತ್ಯೆಗಳ ಬಗ್ಗೆ ಯಾವುದೇ ಸಂಸದರು ಧ್ವನಿ ಎತ್ತುತ್ತಿಲ್ಲ. ನಾವು ದೆಹಲಿಯಲ್ಲಿ ಸಂತಾಪ ಸೂಚಕ ಸಭೆಗೆ ಹೋಗುತ್ತಿದ್ದಾಗ, ರಾಹುಲ್​ ಗಾಂಧಿ (Rahul Gandhi) ಅವರನ್ನು ಕಂಡು ಅವರಿಗೆ ಈ ವಿಚಾರವನ್ನು ಮುಟ್ಟಿಸಿದ್ದೇವೆ ಎಂದು ವಿಡಿಯೋ ಪೋಸ್ಟ್​ ಮಾಡಿ ತಿಳಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net