ರೇಣುಕಸ್ವಾಮಿ ಹತ್ಯೆ ಪ್ರಕರಣ; Darshan & ಗ್ಯಾಂಗ್​​ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್

darshan
Published on

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಹತ್ಯೆ ಪ್ರಕರಣಕ್ಕೆ (Renukaswamy Murder Case) ಸಂಬಂಧಿಸಿದಂತೆ ಪ್ರಕರಣದ ಆರೋಪಿಗಳಾದ ನಟ ದರ್ಶನ್​ (Darshan) ಹಾಗೂ ಇನ್ನಿತರರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನು ಕೋರ್ಟ್​ ಡಿಸೆಂಬರ್​ 06ಕ್ಕೆ ಮುಂದೂಡಿದೆ.

ಆರೋಪಿ ದರ್ಶನ್ (Darshan) ಹಾಗೂ ಪವಿತ್ರಾ ಗೌಡ (Pavithra Gowda) ಪರ ವಕೀಲರು ಮಂಡಿಸಿದ ಸುದೀರ್ಘ ವಾದ ಮಂಡಿಸಿದ್ದು, ಎಸ್​ಪಿಪಿ ಪ್ರಸನ್ನಕುಮಾರ್​ ಅವರು ಡಿಸೆಂಬರ್​ 6ರಂದು ವಾದ ಮಂಡಿಸಲಿದ್ದಾರೆ. ವಾದ-ಪ್ರತಿವಾದವನ್ನು ಆಲಿಸಿದ ಬಳಿಕ ನ್ಯಾಯಾಧೀಶರು ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ತೀರ್ಪನ್ನು (Judgement) ನೀಡಲಿದ್ಧಾರೆ.

ಬೆನ್ನು ನೋವಿನ ಕಾರಣ ಮಧ್ಯಂತರ ಜಾಮೀನಿನ ಮೇಲೆ ಹೊರಬಂದಿರುವ ನಟ ದರ್ಶನ್​ (Darshan) ಅವರ ಬೇಲ್​ ಅವಧಿ ಮುಂದಿನ ವಾರ ಮುಕ್ತಾಯವಾಗಲಿದ್ದು, ಡಿಸೆಂಬರ್​ 10 ಅಥವಾ 11ಕ್ಕೆ ಶರಣಾಗಬೇಕಿದೆ. ಒಂದು ವೇಳೆ ರೆಗ್ಯೂಲರ್​ ಜಾಮೀನು ಸಿಗದಿದ್ದರೆ ನಟ ದರ್ಶನ್​ ಅವರ ಹಾದಿ ಕಷ್ಟ ಎಂದು ಹೇಳಲಾಗಿದ್ದು, ಇದೆಲ್ಲದರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ನಟ ದರ್ಶನ್​ (Darshan) ಚಿಕಿತ್ಸೆ ಪಡೆಯುತ್ತಿರುವ ವೈರಲ್​ ಆಗಿದ್ದು, ಮುಂದಿನ ದಿನಗಳಲ್ಲಿ ಏನಾಗಲಿದೆ ಎಂದು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net