Bigg Boss ಮನೆಯಲ್ಲಿ ಗೆಳೆಯ-ಗೆಳತಿಯ ಕಾರುಬಾರು; ಇವರಿಬ್ಬರ ಹೊಂದಾಣಿಕೆಯತ್ತಾ ಗಮನ ಹರಿಸಿದ ಹನುಮಂತ

BBKS 11
Published on

ಬೆಂಗಳೂರು: ಕನ್ನಡ ಜನಪ್ರಿಯ ರಿಯಾಲಿಟಿ ಶೋ ಬಿಗ್​ಬಾಸ್​ (Bigg Boss) ಶುರುವಾಗಿ ಒಂಬತ್ತು ವಾರಗಳು ಕಳೆದಿದ್ದು, ವೈಯಕ್ತಿಕ ಕಾರಣ ನೀಡಿ ಕಳೆದ ವಾರ ವೈಲ್ಡ್​ ಕಾರ್ಡ್ ಸ್ಫರ್ಧಿ ಶೋಭಾ ಶೆಟ್ಟಿ ಮನೆಯಿಂದ ಹೊರನಡೆದಿದ್ದರು. ಈ ವಾರ ಕೂಡ ಎಲಿಮಿನೇಷನ್​ ನಡೆಯಲಿದ್ದು, ಅದರ ಪ್ರಕ್ರಿಯೆ ಈಗ ಶುರುವಾಗಿದೆ. ಬಿಗ್​ಬಾಸ್​ ಮನೆಯೀಗ ವಾಹಿನಿಯಾಗಿ (Channel) ಪರಿವರ್ತನೆಗೊಂಡಿದ್ದು, ಮನೆಯಲ್ಲಿರುವ ಸದಸ್ಯರನ್ನು ಎರಡು ಬಣಗಳಾಗಿ ಡಿವೈಡ್​ ಮಾಡಲಾಗಿದೆ. ಅದರಂತೆ ಸೋಮವಾರದ ಸಂಚಿಕೆಯಲ್ಲಿ ನೀಡಲಾಗಿದ್ದ ಟಾಸ್ಕ್​ನಲ್ಲಿ ಸ್ಫರ್ಧಿಗಳು ಭರ್ಜರಿ ಪ್ರದರ್ಶನ ನೀಡಿದ್ದು, ಇದರ ಬೆನ್ನಲ್ಲೇ ನಾಮಿನೇಷನ್​ ಪ್ರಕ್ರಿಯೆ ಶುರುವಾಗಿದೆ.

ಬಿಗ್​ಬಾಸ್​ (Bigg Boss) ಮನೆಯಲ್ಲಿ ಗೆಳೆಯ-ಗೆಳತಿ ಎಂದೇ ಸಂಭೋದಿಸುವ ಮಂಜು (Manju) ಹಾಗೂ ಗೌತಮಿ (Gauthami) ನಡುವೆ ವಾರಗಳು ಕಳೆದಂತೆ ಆತ್ಮೀಯತೆ ಹೆಚ್ಚಾಗುತ್ತಿದ್ದು, ಇಬ್ಬರ ನಡುವಿನ ಗೆಳೆತನ ಸ್ಫರ್ಧಿಗಳು (Contestants) ಹಾಗೂ ವೀಕ್ಷಕರಿಗೆ (Viewers)  ಕಿರಿಕಿರಿಯನ್ನುಂಟು ಮಾಡುತ್ತಿದೆ. ಇಬ್ಬರು ಹೊಂದಾಣಿಕೆ ಮಾಡಿಕೊಂಡು ಆಟವಾಡುತ್ತಾರೆ ಎಂಬ ಆರೋಪ ಈ ಹಿಂದೆ ಅನೇಕ ಬಾರಿ ಕೇಳಿ ಬಂದಿತ್ತು. ಕಿಚ್ಚನ ಪಂಚಾಯ್ತಿಯಲ್ಲೂ ಈ ಬಗ್ಗೆ ಚರ್ಚಿಸಲಾಗಿತ್ತು. ಇದೀಗ ಈ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದು, ನಾಮಿನೇಷನ್​ ಪ್ರಕ್ರಿಯೆ ವೇಳೆ ಸ್ಫರ್ಧಿ ಹನುಮಂತು (Hanumanthu) ಮಂಜು ಹಾಗೂ ಗೌತಮಿ ನಡುವಿನ ಹೊಂದಾಣಿಕೆಯನ್ನು ಉಲ್ಲೇಖಿಸಿ ಮಾತನಾಡಿದ್ದಾರೆ.

ಸ್ನೇಹದ ಸಂಬಂಧ ನಿಲ್ಲಿಸ್ತಾರಾ ಗೌತಮಿ-ಮಂಜು? ಶೀರ್ಷಿಕೆಯಡಿ ಬಿಡುಗಡೆಯಾಗಿರುವ ಪ್ರೋಮೋ ನೋಡುವುದಾದರೆ ನಾವು ಮಾಡಿದ್ದೆ ಸರಿ ಬೇರೆ ಅವರು ಮಾಡಿದ್ದು ತಪ್ಪು, ಎಂಬ ಕಲ್ಪನೆಯಲ್ಲಿ ಮಂಜು (Manju) ಅವರಿದ್ದಾರೆ. ಇದಕ್ಕೆ ಉತ್ತರಿಸುವ ಗೌತಮಿ (Gauthami) ಮಂಜಣ್ಣನ ತಪ್ಪುಗಳನ್ನು ಸರಿ ಮಾಡೋಳು ನಾನೇ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ಮಾತನಾಡುವ ಹನುಮಂತು ಗೌತಮಿ ಅಕ್ಕಗೆ ಗೆಳೆಯ ಇರಲಿಲ್ಲವೆಂದರೆ ಇಲ್ಲಿಯವರೆಗೂ ಬರಲು ಸಾಧ್ಯವಾಗುತ್ತಿರಲಿಲ್ಲ. ಇದಕ್ಕೆ ಉತ್ತರಿಸುವ ಮಂಜು ಅವರು ಕಳಪೆ ಅಲ್ಲಾ, ಸಮರ್ಥರು ಗೆಳಯನ ಪರವಾಗಿ ಗೆಳತಿ, ಗೆಳತಿಯ ಪರವಾಗಿ ಗೆಳೆಯ ಮಾತಾಡಬೇಕಾದ್ರೆ ಲೆಕ್ಕ ಪಕ್ಕಾ ಆದಂತೆ ಎಂದು ತಪ್ಪುಗಳನ್ನು ಹನುಮಂತು (Hanumanthu) ಉ್ಲಲೇಖಿಸಿದ್ಧಾರೆ. ಇದಲ್ಲದೆ ಬೇರೆ ಸ್ಫರ್ಧಿಗಳು ಏನು ಕಾರಣ ನೀಡಿದ್ಧಾರೆ ಎಂಬುದು ಸಂಚಿಕೆ ಪ್ರಸಾರವಾದ ಬಳಿಕ ತಿಳಿಯಲಿದೆ.

ಭರಪೂರ ಮನರಂಜನೆಯ ಜೊತೆಗೆ ವಿವಾದಗಳನ್ನು ಹುಟ್ಟು ಹಾಕುವ ಬಿಗ್​ಬಾಸ್​ (Bigg Boss), ಕಿರುತೆರೆ ಲೋಕದ ಜನಪ್ರಿಯ ಶೋಗಳಲ್ಲಿ ಒಂದೆಂದರೆ ತಪ್ಪಾಗಲಾರದು. ಪ್ರೀತಿ, ಸ್ನೇಹ ಸಂಬಂಧಗಳಿಗೆ ಈ ಶೋ ಬೆಸುಗೆಯಾಗುತ್ತದೆ. ಇಲ್ಲಿ ನಗು, ಕಣ್ಣೀರು, ಕೋಪ, ಮುನಿಸು ಮತ್ತು ಮನಸ್ತಾಪಗಳ ಮಿಶ್ರಣವು ಇದೆ. ಟಾಸ್ಕ್​ ನೀಡುವುದರ ಜೊತೆಗೆ ಜೀವನದ ಪಾಠವನ್ನು ಹೇಳಲಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ವಾರದ ಕೊನೆಯಲ್ಲಿ ನಟ ಕಿಚ್ಚ ಸುದೀಪ್​ ಸರಿ-ತಪ್ಪುಗಳ ತಿದ್ದುವಿಕೆ ಶೋಗೆ ಹೊಸ ಆಯಾಮವನ್ನು ತಂದುಕೊಡುತ್ತದೆ. ಈ ಎಲ್ಲ ಕಾರಣಗಳಿಂದ ಈ ಶೋ ವಿಶೇಷ ಎನಿಸಿಕೊಂಡಿದ್ದು, ಕಿರುತೆರೆ ಲೋಕದಲ್ಲಿ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದುಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net