2002 ಗುಜರಾತ್​ ಗಲಭೆ ಪ್ರಕರಣ; ತೀಸ್ತಾ ಸೆಟಲ್ವಾಡ್​ಗೆ ಸುಪ್ರೀಂ ಕೋರ್ಟ್​ ಜಾಮೀನು

teesta setalvad
Published on

ನವದೆಹಲಿ: 2002ರ ಗುಜರಾತ್​ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್​ಗೆ ಸುಪ್ರೀಂ ಕೋರ್ಟ್​ ರಿಲೀಫ್​ ನೀಡಿದೆ.

ತೀಸ್ತಾ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ಆರ್​. ಗವಾಯಿ, ಎ. ಎಸ್​. ಬೋಪಣ್ಣ ಹಾಗು ದೀಪಂಕರ್​ ದತ್ತಾ ಅವರಿದ್ದ ತ್ರಿಸದಸ್ಯ ಪೀಠವು ಗುಜರಾತ್​ ಹೈಕೋರ್ಟ್​ ಆದೇಶವನ್ನು ರದ್ದುಪಡಿಸಿ ಜಾಮೀನು ಮಂಜೂರು ಮಾಡಿದ್ದಾರೆ.

ರದ್ದು ಮಾಡಲಾಗುವುದು

ಜಾಮೀನಿನ ಅವಧಿಯಲ್ಲಿ ತೀಸ್ತಾ ಅವರ ಪಾಸ್​ಪೋರ್ಟ್​ಅನ್ನು ವಿಚಾರಣಾ ನ್ಯಾಯಾಲಯದಲ್ಲಿ ಇರಿಸುವಂತೆ ಸೂಚನೆ ನೀಡಲಾಗಿದ್ದು, ಸಾಕ್ಷಿಗಳ ಮೇಲೆ ಯಾವುದೇ ಪ್ರಭಾವ ಬೀರದಂತೆ ದೂರು ಉಳಿಯುವಂತೆ ಸೂಚಿಸಿದೆ. ಒಂದು ವೇಳೆ ನ್ಯಾಯಾಲಯ ವಿಧಿಸಿದ ಷರತ್ತುಗಳು ಉಲ್ಲಂಘನೆಯಾಗಿದ್ದು ಕಂಡು ಬಂದಲ್ಲಿ ಜಾಮೀನು ರದ್ದು ಮಾಡಲಾಗುವುದು ಎಂದು ನ್ಯಾಯಾಲಯ ಎಚ್ಚರಿಸಿದೆ.

2002ರ ಗೋಧ್ರಾ ಗಲಭೆಗೆ ಸಂಬಂಧಿಸಿದಂತೆ ಗುಜರಾತ್​ ಹೈಕೋರ್ಟ್​ ತೀಸ್ತಾಗೆ ಜಾಮೀನು ನೀಡಿತ್ತು. ಜಾಮೀನು ಅವಧಿ ಮುಗಿದ ಬಳಿಕ ನ್ಯಾಯಾಲಯಕ್ಕೆ ಜುಲೈ 1ರಂದು ಶರಣಾಗುವಂತೆ ಸೂಚನೆ ನೀಡಲಾಗಿತ್ತು. ಇದನ್ನು ಪ್ರಶ್ನಿಸಿ ತೀಸ್ತಾ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದರು.

2002ರ ಗುಜರಾತ್​ ಗಲಭೆಗೆ ಸಂಬಂಧಿಸಿದಂತೆ ಸುಳ್ಳು ಸಾಕ್ಷಿಗಳನ್ನು ಸೃಷ್ಟಿ ಮಾಡಿದ ಆರೋಪದ ಮೇಲೆ ತೀಸ್ತಾರನ್ನು ಕಳೆದ ವರ್ಷ ಬಂಧಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net