More

    ಬೆಂಗಳೂರು ಸ್ಫೋಟ ಸಂಚಿನ ಹಿಂದಿದೆ ಆ ಒಂದು ದ್ವೇಷ

    ಬೆಂಗಳೂರು: ರಾಜ್ಯದಲ್ಲಿ ವಿದ್ವಂಸಕ ಕೃತ್ಯ ಎಸಗಲು ಸಂಚು ಹಾಕಿದ್ದ ಆರು ಉಗ್ರರ ಪೈಕಿ ಪೊಲೀಸರು ಐವರನ್ನು ಬಂಧಿಸಿದ್ದು, ಓರ್ವ ತಲೆಮಾರಿಸಿಕೊಂಡಿದ್ದಾನೆ. ಉಗ್ರರನ್ನು ಪೊಲೀಸರು ಸೆದೆ ಬಡಿಯುವ ಮೂಲಕ ನಡೆಯಬೇಕಾಗಿದ್ದ ಸಂಭಾವ್ಯ ಅನಾಹುತವನ್ನು ತಪ್ಪಿಸಿದ್ದಾರೆ.

    ಬಂಧಿತರನ್ನು ಸೈಯದ್​ ಸುಹೇಲ್​, ಉಮರ್, ಜುನೈದ್, ಮುದಾಸಿರ್ ಮತ್ತು ಜಾಹಿದ್ ಎಂದು ಗುರುತಿಸಲಾಗಿದ್ದು, ಆರೋಪಿಗಳ ಬಳಿ ಇದ್ದ 4 ವಾಕಿಟಾಕಿ, 7 ಕಂಟ್ರಿ ಮೇಡ್ ಪಿಸ್ತೂಲ್, 42 ಸಜೀವ ಗುಂಡುಗಳು, ಮದ್ದುಗುಂಡು, 2 ಡ್ರ್ಯಾಗರ್, 2 ಸೆಟಲೈಟ್ ಫೋನ್ ಹಾಗೂ 4 ಗ್ರೆನೈಡ್ ವಶಕ್ಕೆ ಪಡೆಯಲಾಗಿದೆ.

    ಈ ಆರೋಪಿಗಳು 2017ರಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿ ಜೈಲು ಶಿಕ್ಷೆಯನ್ನು ಎದುರಿಸುತ್ತಿದ್ದ ವೇಳೆ ಜಮಾತ್-ಎ-ಇಸ್ಲಾಮಿಗೆ ಸಂಪರ್ಕ ಹೊಂದಿದ್ದಾರೆ ಎನ್ನಲಾಗಿದೆ. ಜೈಲಿನಲ್ಲಿ ತಾವೂ ಸಂಘಟನೆ ಸೇರುವುದರ ಬಗ್ಗೆ ಮಾತುಕತೆ ನಡೆಸಿದ್ದರು ಎನ್ನಲಾಗಿದ್ದು, ತಾವು ಎಲ್ಲದಕ್ಕೂ ರೆಡಿ ಎಂದು ಉಗ್ರರಿಗೆ ಹೇಳಿದ್ದರು.

    ಬೆಂಗಳೂರು ಸ್ಫೋಟ ಸಂಚಿನ ಹಿಂದಿದೆ ಆ ಒಂದು ದ್ವೇಷ

    ಇದನ್ನೂ ಓದಿ: ಎಸ್.ಆರ್. ಪಾಟೀಲ್, ಶ್ರೀಕಂಠೇಗೌಡಗೆ ವಿಧಾನ ಪರಿಷತ್ತಿನ ಅತ್ಯುತ್ತಮ ಶಾಸಕ ಪ್ರಶಸ್ತಿ ಪ್ರದಾನ

    ಹಿಂದಿದೆ ಆ ಒಂದು ದ್ವೇಷ

    ಸಿಸಿಬಿ ಅಧಿಕಾರಿಗಳ ತನಿಖೆ ವೇಳೆ ಹಲವು ಸ್ಪೋಟಕ ಮಾಹಿತಿ ಹೊರಬೀಳುತ್ತಿದ್ದು, ಬೆಂಗಳೂರು ಸ್ಪೋಟ ಸಂಚಿನ ಹಿಂದೆ ಆ ಒಂದು ರಿವೇಂಜ್​ ಇತ್ತು ಎಂದು ಹೇಳಲಾಗಿದೆ. ಭಾರತದಲ್ಲಿ ಪಾಪ್ಯುಲರ್​ ಫ್ರಂಟ್​ ಆಫ್​ ಇಂಡಿಯಾ(PFI) ಸಂಘಟನೆಯನ್ನು ನಿಷೇಧಿಸಿದ್ದಕ್ಕಾಗಿ ವಿದ್ವಂಸಕ- ಕೃತ್ಯ ಎಸಗಲು ಸಂಚು ರೂಪಿಸಿದ್ದರು.

    2008ರ ಬೆಂಗಳೂರು ಸರಣಿ ಸ್ಪೋಟದ ಪ್ರಮುಖ ಆರೋಪಿ ನಾಜೀರ್ ಬಂಧಿತ ಆರೋಪಿಗಳಿಗೆ ಜೈಲಿನಲ್ಲಿರಬೇಕಾದ ಸಮಯದಲ್ಲಿ ಬ್ರೈನ್​ ವಾಷ್​ ಮಾಡಿದ್ದ. 2008ರಲ್ಲಿ ಬೆಂಗಳೂರಿನಲ್ಲಿ 9 ಕಡೆ ಬಾಂಬ್​ ಬ್ಲ್ಯಾಸ್ಟ್​ ಮಾಡಿದ್ದು ಸಿಮಿ ಸಂಘಟನೆ. ಆದರೆ, ಆ ಸಂಘಟನೆಯನ್ನು ಬ್ಯಾನ್​ ಮಾಡಿದ ನಂತರ ಹುಟ್ಟಿಕೊಂಡಿದೆ ಈ PFI ಎಂದು ಆರೋಪಿಗಳಿಗೆ ನಾಜೀರ್​ ಹೇಳಿದ್ದ.

    ಈಗ PFI ಸಂಘಟನೆಯನ್ನು ಸಹ ನಿಷೇಧಿಸಲಾಗಿದ್ದು ಈ ನಿಟ್ಟಿನಲ್ಲಿ ನಾವು ನಮ್ಮ ಸೇಡು ತೀರಿಸಿಕೊಳ್ಳಬೇಕಿದೆ ಎಂದು 2008ರ ಸರಣಿ ಬಾಂಬ್​ ಸ್ಪೋಟದ ಆರೋಪಿ ನಾಜೀರ್​ ಆರೋಪಿಗಳ ಬ್ರೈನ್​ ವಾಶ್​ ಮಾಡಿದ್ದ ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ. ರಾಜ್ಯದಲ್ಲಿ ಉಗ್ರರು ವಿದ್ವಂಸಕ ಕೃತ್ಯ ಎಸಗಲು ತಯಾರಿ ನಡೆಸುತ್ತಿರುವ ಕುರಿತು ಗುಪ್ತಚರ ದಳ ಈ ಹಿಂದೆ ಮಾಹಿತಿ ನೀಡಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts